ತಲ್ಪದ ಮೇಲೆ ಅಂಗಾತಾಗಿ ಮಲಗಿದ ಯುವಕ. ಬೆತ್ತಲಾಗಲು ಕ್ಷಣಗಣನೆ ಶುರುವಾದಂಥ ಭಾವ. ಅವನ ಮೇಲೆ ಉದ್ದೀಪನಗೊಳಿಸುತ್ತಿರುವ ಲಲನೆ. ಕೆಂಪು ವಸ್ತ್ರ ತೊಟ್ಟು ತನ್ನ ಅಂಗೋಪಾಂಗಗಳ ತಾನೇ ನೇವರಿಸುತ್ತಾ ಅವನ ದೇಹದ ಕೇಂದ್ರಭಾಗದ ಮೇಲೆ ಪೀಠಸ್ಥಳಾದ ಅವಳ ಮುಲುಮುಲಾಟ ಕಂಡು ಅವನ ಗಂಟಲ ನಳಿಕೆ ಪದೇಪದೇ ಉಬ್ಬುತ್ತಿದೆ.

`ಜಿಸ್ಮ್ 2~ ಚಿತ್ರದ ಸಾರಾಂಶ ಒಳಗೊಂಡ ವಿಡಿಯೋ ತುಣುಕಿನ ದೃಶ್ಯಗಳಲ್ಲಿ ಇದೂ ಒಂದು. ಅರ್ಕೊ ಪ್ರಾವೋ ಮುಖರ್ಜಿ, ಮಿಥುನ್, ವಿಕಿ ಗೋಸ್ವಾಮಿ, ಅಬ್ದುಲ್ ಬಾಸಿತ್ ಸಯೀದ್ ಹೀಗೆ ಬಗೆಬಗೆಯ ಸಂವೇದನೆಯ ಸಂಗೀತ ಸಂಯೋಜಕರು ಹೊಸೆದ ಮಿಶ್ರ ಮಟ್ಟುಗಳು ಚಿತ್ರದ ಹಾಡುಗಳನ್ನು ರಂಗಾಗಿಸಿವೆ. ಒಂದೇ ಹಾಡಿನಲ್ಲಿ ಇಬ್ಬಿಬ್ಬರಿಗೆ ತುಟಿ ಬಟ್ಟಲು ಒಡ್ಡಿಕೊಳ್ಳುವ ಮೂಲಕ ಈಗಾಗಲೇ ಆ ನಟಿ ಬಿ-ಟೌನ್ನಲ್ಲಿ ಬಿಸಿಬುಗ್ಗೆ ಚಿಮ್ಮಿಸಿ ಆಗಿದೆ.

`ಜಿಸ್ಮ್~ ಬಂದಾಗ ಬಿಪಾಶ ಬಸು - ಜಾನ್ ಅಬ್ರಹಾಂ ಪ್ರಣಯ ಉಂಟುಮಾಡಿದ್ದ ರೋಮಾಂಚನದ ದುಪ್ಪಟ್ಟನ್ನು ಸನ್ನಿ ಲಿಯೋನ್ ಈ ಚಿತ್ರದಲ್ಲಿ ಮೂಡಿಸಿದ್ದಾರೆ ಎಂದು ಚಿತ್ರದ ನಿರ್ದೇಶಕಿ ಪೂಜಾ ಭಟ್ ತಮ್ಮ ತೀಡಿಕೊಂಡ ಹುಬ್ಬು ಹಾರಿಸುತ್ತಾ ಹೇಳಿಕೊಂಡಿರುವುದಕ್ಕೆ ಪುರಾವೆಯಂತಿದೆ ಈ ಪ್ರೋಮೋ.

ಸನ್ನಿ ಲಿಯೋನ್ಗೆ ಇದು ಭಾರತದಲ್ಲಿ ಮೊದಲ ಚಿತ್ರ. ಆದರೆ, ಲೆಕ್ಕವಿಲ್ಲದಷ್ಟು ನೀಲಿಚಿತ್ರಗಳಲ್ಲಿ ಅದಾಗಲೇ ನುಲಿದಾಡಿದ ಅನುಭವ ಅವರ ಬೆನ್ನಿಗಿದೆ. ಇಂಡೋ-ಕೆನಡಾ ವನಿತೆಯೆಂಬುದು ಸನ್ನಿ ಲಿಯೋನ್ಗೆ ಸದ್ಯಕ್ಕೆ ವರವೇ ಆಗಿದೆ. ಅವರು `ಆಧುನಿಕ ರತಿ ಮನರಂಜನಾ ಲೋಕ~ದಲ್ಲಿ ತಮ್ಮದೇ ವರ್ಚಸ್ಸು ಇಟ್ಟುಕೊಂಡಿರುವ ನಟಿ.

ಸಾಮಾನ್ಯವಾಗಿ `ಪೋರ್ನ್ ಸ್ಟಾರ್~ಗಳು ತಮ್ಮ ವಿವಾಹದ ವಿಷಯವನ್ನು ಗುಟ್ಟಾಗಿ ಇಡುತ್ತಾರೆ. ಆದರೆ, ಸನ್ನಿ ಹಾಗಲ್ಲ. ಅವರು ಎಲ್ಲಿ ಹೋದರೂ ಜೊತೆಯಲ್ಲಿ ಪತಿ ಡೇನಿಯಲ್ ವೆಬರ್ ಇರುತ್ತಾರೆ. ಆಕೆ ಪಕ್ಕಾ ವೃತ್ತಿಪರಳು!

ಮೊನ್ನೆ ಮುಂಬೈಗೆ `ಜಿಸ್ಮ್ 2~ ಪ್ರಚಾರಕ್ಕೆಂದು ಸನ್ನಿ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅಭಿಮಾನಿಗಳ ಸಣ್ಣ ಮಟ್ಟದ ಸಮಾವೇಶವೇ ಅಲ್ಲಿ ನಡೆಯಿತು. ಸನ್ನಿ ತಮ್ಮ ತುಟಿಗಳನ್ನು ನಾಜೂಕಾಗಿ ಅಗಲ ಮಾಡಿ, ತುಸುವೇ ನಕ್ಕ ಕ್ಷಣವನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಕೃತಾರ್ಥರಾದರು.

ಕ್ಯಾಮೆರಾ ಕಣ್ಣುಗಳು ಫಳಫಳ್ಳೆಂದವು. ತಮ್ಮ ಪತ್ನಿಗೆ ಈಗಾಗಲೇ ಭಾರತದಲ್ಲಿ ಇಷ್ಟೊಂದು ಅಭಿಮಾನಿಗಳಿರುವರೇ ಎಂದು ಇಂಗ್ಲಿಷ್ನಲ್ಲಿ ಹೇಳಿ ಆನಂದತುಂದಿಲರಾದ ಡೇನಿಯಲ್ ವೆಬರ್, ತಾವೂ ಒಂದು ಕ್ಯಾಮೆರಾ ಹೊರತೆಗೆದು ಮುತ್ತು ತೇಲಿಬಿಡುವ ಅಭಿಮಾನಿಗಳ ಚಿತ್ರಗಳನ್ನು ತೆಗೆದರು. ತಮ್ಮ ಪತ್ನಿಗೆ ಯಾರ್ಯಾರೋ ಮುತ್ತು ತೇಲಿಬಿಡುವುದನ್ನು ಕಂಡು ಹರ್ಷಗೊಳ್ಳುವ ಅಪರೂಪದ ಗಂಡ ವೆಬರ್.

ಸನ್ನಿ-ವೆಬರ್ ನಡುವೆ ದಾಂಪತ್ಯ ಚೆನ್ನಾಗಿಯೇ ಇದೆಯಂತೆ. ಸೆಕ್ಸ್ಗೂ ದಾಂಪತ್ಯಕ್ಕೂ ಸ್ಪಷ್ಟ ಗೆರೆ ಎಳೆದುಕೊಂಡೇ ಇಬ್ಬರೂ ಬದುಕುತ್ತಿದ್ದಾರೆ. ಹಾಗಾಗಿ ಸನ್ನಿ ಬೇರೆ ನಟನ ಜೊತೆ ಮಂಚದ ಮೇಲೆ ಕೇಳಿಯಾಡಿದರೆ ವೆಬರ್ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಾರೆ.

ಯಾಕೆಂದರೆ, ಇಬ್ಬರೂ ಸೇರಿ `ಸನ್-ಸಿನೆ~ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಆ ಸಂಸ್ಥೆಯು ಒಂದಾದ ಮೇಲೊಂದರಂತೆ ಕಾಮಕೇಳಿ ಚಿತ್ರಗಳನ್ನು (ಸಾಫ್ಟ್ಪೋರ್ನ್ ಫಿಲ್ಮ್ಸ್) ನಿರ್ಮಿಸುತ್ತಾ ದುಡ್ಡು ಮಾಡುತ್ತಿದೆ.

ಇಂಥ ಹಿನ್ನೆಲೆಯ ಸನ್ನಿ `ಬಿಗ್ ಬಾಸ್~ ರಿಯಾಲಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಾಗ ಅವರ ಮೇಲೆ ಪೂಜಾ ಭಟ್ ಕಣ್ಣು ಬಿತ್ತು. ಮಹೇಶ್ ಭಟ್ ಸಿದ್ಧಪಡಿಸಿದ್ದ `ಜಿಸ್ಮ್ 2~ ಸ್ಕ್ರಿಪ್ಟ್ಗೆ ಈ ನಟಿ ಹೊಂದುತ್ತಾರೆ ಎಂದೆನಿಸಿದ್ದೇ ಇಬ್ಬರೂ ಕಾಲ್ಷೀಟ್ಗಾಗಿ ಯತ್ನಿಸಿದರು. ಅದನ್ನು ಪಡೆಯುವಲ್ಲಿ ಯಶಸ್ವಿಯೂ ಆದರು. `ಬಿಗ್ ಬಿ~ ಕಾರ್ಯಕ್ರಮ ನಡೆಯುತ್ತಿದ್ದ ಜಾಗದಲ್ಲೇ ಸನ್ನಿ ಲಿಯೋನ್ ಈ ಚಿತ್ರದ ಒಪ್ಪಂದಕ್ಕೆ ಸಹಿ ಹಾಕಿದ್ದು.

ಏಪ್ರಿಲ್ನಲ್ಲಿ ಚಿತ್ರೀಕರಣ ಶುರುವಾದಾಗಿನಿಂದ ಸನ್ನಿ ಲಿಯೋನ್ ಕಡೆ ಬೆರಗುಗಣ್ಣು ಬಿಡುವವರು ಕಾಣತೊಡಗಿದರು. ಜೈಪುರ, ಗೋವಾದಲ್ಲಿ ಚಿತ್ರೀಕರಣ ನಡೆಯುವಾಗ ಮೆಲ್ಲಮೆಲ್ಲಗೆ ಪೂಜಾ ಸಣ್ಣ ಸಣ್ಣ ಸುದ್ದಿಗಳನ್ನು ತೇಲಿಬಿಟ್ಟರು. ಪೋಸ್ಟರ್ ಬಿಡುಗಡೆಗೂ ಒಂದು ಸಮಾರಂಭ ಮಾಡಿ ಸನ್ನಿ ಎಷ್ಟು ಸೆಕ್ಸಿ ಎಂಬುದರ ಬಗ್ಗೆ ಉಪನ್ಯಾಸ ಕೊಟ್ಟರು.

ಈಗ ಚಿತ್ರ ಬಿಡುಗಡೆಯಾಗಿದೆ. ಪೂಜಾ ಭಟ್ ನಿರ್ದೇಶಕಿಯಾಗಿ ಗೆಲ್ಲಲೇಬೇಕು ಎಂದುಕೊಂಡು ಮಾಡಿರುವ ದೊಡ್ಡವರ ಸಿನಿಮಾ ಇದು. ಮಹೇಶ್ ಭಟ್ ನಿರ್ದೇಶನದ `ಅರ್ಥ್~ ಹಿಟ್ ಆಗುವ ಮೊದಲು ಅವರ ನಾಲ್ಕು ಚಿತ್ರಗಳು ಸೋತಿದ್ದವು.

ತಮ್ಮ ವೃತ್ತಿ ಬದುಕಿನಲ್ಲೂ ನಿರ್ದೇಶಕಿಯಾಗಿ ನಾಲ್ಕು ಸೋಲುಂಡಿರುವ ಪೂಜಾ ಈ ಚಿತ್ರ ತಮಗೆ ಬ್ರೇಕ್ ನೀಡೀತೆಂಬ ನಿರೀಕ್ಷೆಯಲ್ಲಿದ್ದಾರೆ. `ಜಿಸ್ಮ್ 2~ ಅರ್ಥಾತ್ `ಎರಡನೇ ದೇಹ~ (ಹೀಗೆ ಗೇಲಿ ಮಾಡಬಹುದು) ತೆರೆಮೇಲಿದೆ. ಸನ್ನಿ ಲಿಯೋನ್, ರಣದೀಪ್ ಹೂಡಾ, ಅರುಣೋದಯ್ ಸಿಂಗ್ ಮೂವರ ನಡುವಿನ ಕಥಾನಕ, ಕಾಮಕೇಳಿ ಬಾಕ್ಸಾಫೀಸ್ನಲ್ಲಿ ಯಾವ ಪರಿಯ ಸದ್ದು ಉಂಟು ಮಾಡಲಿದೆಯೋ ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.