ಭಾನುವಾರ, ಮೇ 9, 2021
18 °C
ವಾರ್ಷಿಕ ಅತಿ ಹೆಚ್ಚು ಹಣ ಗಳಿಸುತ್ತಿರುವ ವಿಶ್ವದ 100 ಕ್ರೀಡಾಪಟುಗಳು

ದೋನಿಗೆ 16ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋನಿಗೆ 16ನೇ ಸ್ಥಾನ

ನ್ಯೂಯಾರ್ಕ್ (ಪಿಟಿಐ): ವಾರ್ಷಿಕ ಅತಿ ಹೆಚ್ಚು ಹಣ ಗಳಿಸುತ್ತಿರುವ ವಿಶ್ವದ ಕ್ರೀಡಾಪಟುಗಳ ಸಾಲಿನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ 16ನೇ ಸ್ಥಾನ ಪಡೆದಿದ್ದಾರೆ. ಭಾರತದ ಶ್ರೀಮಂತ ಕ್ರೀಡಾಪಟು ಎನಿಸಿರುವ ಅವರು ಈ ವರ್ಷ 15 ಸ್ಥಾನ ಮೇಲೇರಿ ದ್ದಾರೆ.31 ವರ್ಷ ವಯಸ್ಸಿನ ದೋನಿ ಅವರ ವಾರ್ಷಿಕ ಒಟ್ಟು ಹಣ ಗಳಿಕೆ 180 ಕೋಟಿ ರೂಪಾಯಿ. ಅವರು ಪಂದ್ಯ ಸಂಭಾವನೆ ರೂಪದಲ್ಲಿ 20 ಕೋಟಿ ಹಾಗೂ ಜಾಹೀರಾತು ಮೂಲಕ 160 ಕೋಟಿ ರೂ. ದುಡಿಯುತ್ತಿದ್ದಾರೆ. 2012ರಲ್ಲಿ ದೋನಿ 31ನೇ ಸ್ಥಾನದಲ್ಲಿದ್ದರು.2013ರ ವಿಶ್ವದ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯನ್ನು ಶುಕ್ರವಾರ ಫೋಬ್ಸ್ ನಿಯತಕಾಲಿಕ ಪ್ರಕಟಿಸಿದೆ. ಇದರಲ್ಲಿ ಅಮೆರಿಕದ ಗಾಲ್ಫರ್ ಟೈಗರ್ ವುಡ್ಸ್ ಅಗ್ರಸ್ಥಾನದಲ್ಲಿದ್ದಾರೆ. ಅವರು ವಾರ್ಷಿಕ ಒಟ್ಟು 445 ಕೋಟಿ ರೂ. ಸಂಪಾದಿಸುತ್ತಿದ್ದಾರೆ. ಕೇವಲ ಜಾಹೀರಾತಿನಿಂದ ಅವರಿಗೆ 370 ಕೋಟಿ ರೂ. ಬರುತ್ತಿದೆ. ನಂತರದ ಸ್ಥಾನದಲ್ಲಿ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ (407 ಕೋಟಿ ರೂ.), ಅಮೆರಿಕದ ಕೋಬ್ ಬ್ರಯಾಂಟ್ (353 ಕೋಟಿ ರೂ.) ಇದ್ದಾರೆ. 2012ರಲ್ಲಿ ಫೋಬ್ಸ್ ಪ್ರಕಟಿಸಿದ್ದ ಪಟ್ಟಿಯಲ್ಲಿ ಫೆಡರರ್ ಅಗ್ರಸ್ಥಾನದಲ್ಲಿದ್ದರು.ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ನೂರರ ಪಟ್ಟಿಯಲ್ಲಿರುವ ಭಾರತದ ಮತ್ತೊಬ್ಬ ಆಟಗಾರ. 51ನೇ ಸ್ಥಾನದಲ್ಲಿರುವ ಅವರು ವಾರ್ಷಿಕ 125 ಕೋಟಿ ರೂ. ಹಣ ಸಂಪಾದಿಸುತ್ತಿದ್ದಾರೆ. ಮಹಿಳಾ ಕ್ರೀಡಾಪಟುಗಳಲ್ಲಿ ಟೆನಿಸ್ ತಾರೆ ರಷ್ಯಾದ ಮರಿಯಾ ಶರ್ಪೋವಾ 22ನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಹಣ ಗಳಿಸುತ್ತಿರುವ ಮಹಿಳಾ ಕ್ರೀಡಾಪಟು ಕೂಡ. ಅವರು ವಾರ್ಷಿಕ 165 ಕೋಟಿ ರೂ. ಸಂಪಾದಿಸುತ್ತಿದ್ದಾರೆ. ಅಮೆರಿಕದ ಸೆರೆನಾ ವಿಲಿಯಮ್ಸ (117 ಕೋಟಿ ರೂ.) 68ನೇ ಸ್ಥಾನ ಹಾಗೂ ಚೀನಾದ ಲೀ ನಾ (104 ಕೋಟಿ. ರೂ) 85ನೇ ಸ್ಥಾನದಲ್ಲಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.