ಮೀರ್ಪುರ (ಪಿಟಿಐ): ಎರಡು ಸಲ ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ತಂಡ ಬಾಂಗ್ಲಾದೇಶ ಎದುರು ಇಂಥದ್ದೊಂದು ಆಘಾತವನ್ನು ನಿರೀಕ್ಷೆಯೇ ಮಾಡಿರಲಿಲ್ಲವೇನೋ? ಸರಣಿ ಗೆಲುವಿನ ಕನಸು ಹೊತ್ತು ಇಲ್ಲಿಗೆ ಬಂದಿದ್ದ ದೋನಿ ಪಡೆ ಭಾರಿ ಮುಖಭಂಗಕ್ಕೆ ಒಳಗಾಗಿದೆ.

ಮೊದಲ ಎರಡೂ ಪಂದ್ಯಗಳಲ್ಲಿ ಅಪೂರ್ವ ಸಾಮರ್ಥ್ಯ ತೋರಿದ ಆತಿಥೇಯ ತಂಡ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿತು. ಇಲ್ಲಿನ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಬಾಂಗ್ಲಾ ಆರು ವಿಕೆಟ್ಗಳ ಜಯಭೇರಿ ಮೊಳಗಿಸಿತು. ಮೊದಲ ಪಂದ್ಯದಲ್ಲಿ 79 ರನ್ಗಳ ಗೆಲುವು ಸಾಧಿಸಿತ್ತು.

ಟಾಸ್ ಗೆದ್ದ ದೋನಿ ಪಡೆ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ ಪರದಾಡಿದ ಪ್ರವಾಸಿ ತಂಡ 45 ಓವರ್ಗಳಲ್ಲಿ 200 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಈ ನಡುವೆ ಮಳೆಯೂ ಪಂದ್ಯಕ್ಕೆ ಕೊಂಚ ಅಡ್ಡಿಪಡಿಸಿತು. ಆದ್ದರಿಂದ ಬಾಂಗ್ಲಾ ತಂಡಕ್ಕೆ 47 ಓವರ್ಗಳಲ್ಲಿ 200 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. ಈ ಸುಲಭ ಗುರಿಯನ್ನು ಮುಷ್ರಫೆ ಮುರ್ತಜಾ ನಾಯಕತ್ವದ ಬಾಂಗ್ಲಾ 38 ಓವರ್ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಮುಟ್ಟಿತು.

ಏಕದಿನ ಇತಿಹಾಸದಲ್ಲಿ ಭಾರತದ ಎದುರು ಬಾಂಗ್ಲಾ ತಂಡ ಪಡೆದ ಐದನೇ ಗೆಲುವು ಇದಾಗಿದೆ. 2004, 2007 ಮತ್ತು 2012ರಲ್ಲಿ ಜಯ ಸಾಧಿಸಿತ್ತು. ‘ಹುಲಿ’ಗಳು ತವರಿನ ಅಂಗಳದಲ್ಲಿ ಪಡೆದ ಸತತ ಹತ್ತನೇ ಗೆಲುವು ಇದು. ಬಾಂಗ್ಲಾ ತಂಡ ಜಿಂಬಾಬ್ವೆ ಎದುರು ಮೂರು, ಪಾಕ್ ಎದುರು ಐದು ಮತ್ತು ಭಾರತ ವಿರುದ್ಧ ಎರಡು ಪಂದ್ಯಗಳನ್ನು ಜಯಿಸಿದೆ.

ವೈಫಲ್ಯ: ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಹಾಗೂ ಅಂಬಟಿ ರಾಯುಡು ರನ್ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಉಪನಾಯಕ ವಿರಾಟ್ ಕೊಹ್ಲಿ (23) ಮತ್ತು ಸುರೇಶ್ ರೈನಾ (34) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.

ಬಾಂಗ್ಲಾ ತಂಡದ ಯುವ ಬೌಲರ್ ಮುಸ್ತಫಿಜರ್ ಚುರುಕಿನ ದಾಳಿಗೆ ದಂಗಾದ ಭಾರತಕ್ಕೆ ವೇಗವಾಗ ರನ್ ಗಳಿಸಲು ಸಾಧ್ಯವಾಗಲಿಲ್ಲ. ಧವನ್ (53, 60ಎಸೆತ, 7ಬೌಂಡರಿ) ಮತ್ತು ದೋನಿ (47, 75ಎಸೆತ, 3 ಬೌಂಡರಿ) ಅಲ್ಪ ಆಸರೆಯಾದರು. ಮುಸ್ತಫಿಜರ್ ಆರು ವಿಕೆಟ್ ಕಬಳಿಸಿ ಭಾರತದ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡಿದರು. ಈ ಬೌಲರ್ ಎರಡು ಏಕದಿನ ಪಂದ್ಯಗಳಿಂದ ಒಟ್ಟು ಹನ್ನೊಂದು ವಿಕೆಟ್ ಪಡೆದು ಭಾರತದ ಬ್ಯಾಟ್ಸ್ಮನ್ಗಳನ್ನು ಇನ್ನಿಲ್ಲದಂತೆ ಕಾಡಿದರು.

ಸಂಘಟಿತ ಹೋರಾಟ: ಗಳಿಸಿದ್ದ ಅಲ್ಪ ಮೊತ್ತದಲ್ಲಿಯೇ ಆತಿಥೇಯ ತಂಡವನ್ನು ಕಟ್ಟಿ ಹಾಕುವ ಭಾರತದ ಆಸೆ ಈಡೇರಲಿಲ್ಲ. ಬಾಂಗ್ಲಾ ತಂಡದ ಸಂಘಟಿತ ಹೋರಾಟದ ಮುಂದೆ ದೋನಿ ಪಡೆ ಶರಣಾಗಬೇಕಾಯಿತು. ಶಕೀಬ್ ಅಲ್ ಹಸನ್ (ಔಟಾಗದೆ 51, 62ಎಸೆತ, 5 ಬೌಂಡರಿ) ಮತ್ತು ಲಿಟ್ಟನ್ ದಾಸ್ (36, 41ಎಸೆತ, 5 ವಿಕೆಟ್) ಜವಾಬ್ದಾರಿಯುತ ಆಟವಾಡಿ ಗೆಲುವು ತಂದುಕೊಟ್ಟರು.

ಕಡಿಮೆ ಮೊತ್ತದ ಗುರಿಯಿದ್ದ ಕಾರಣ ಬಾಂಗ್ಲಾ ಒತ್ತಡಕ್ಕೆ ಒಳಗಾಗದೇ ಸರಾಗವಾಗಿ ರನ್ ಕಲೆ ಹಾಕಿತು. ಮೇಲಿನ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಸೌಮ್ಯ ಸರ್ಕಾರ್ (34) ಮತ್ತು ಮುಷ್ಫೀಕರ್ ರಹೀಮ್ (31) ಗೆಲುವಿಗೆ ಕಾರಣರಾದರು. 38ನೇ ಓವರ್ನಲ್ಲಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಶಬ್ಬೀರ್ ಥರ್ಡ್ ಮ್ಯಾನ್ ಬಳಿ ಒಂದು ರನ್ ಬಾರಿಸಿ ಜಯ ತಂದುಕೊಟ್ಟರು. ಈ ವೇಳೆ ಬಾಂಗ್ಲಾ ಆಟಗಾರರು ಮೈದಾನದೊಳಗೆ ಓಡಿ ಬಂದ ಪರಸ್ಪರ ಬಿಗಿದಪ್ಪಿ ಸಂಭ್ರಮಿಸಿದರು. ಅಭಿಮಾನಿಗಳ ಖುಷಿಗಂತೂ ಪಾರವೇ ಇರಲಿಲ್ಲ.

ಮೊದಲ ಸರಣಿ: ಐಸಿಸಿ ವಿಶ್ವ ರ್ಯಾಂಕಿಂಗ್ನಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಭಾರತ ಎದುರು ಆತಿಥೇಯರು ಸರಣಿ ಜಯಿಸಿದ್ದು ಇದೇ ಮೊದಲು. ಮೂರು ಬಾರಿ ಸರಣಿ ಆಡಿದ್ದಾಗಲೂ ಭಾರತವೇ ಗೆಲುವು ಪಡೆದಿತ್ತು. ಈ ಗೆಲುವಿನ ಮೂಲಕ ರೇಟಿಂಗ್ ಪಾಯಿಂಟ್ಸ್ ಹೆಚ್ಚಿಸಿಕೊಂಡ ಬಾಂಗ್ಲಾ 2017ರಲ್ಲಿ ಇಂಗ್ಲೆಂಡ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೂ ಅರ್ಹತೆ ಗಿಟ್ಟಿಸಿಕೊಂಡಿತು.

ಸ್ಕೋರ್ಕಾರ್ಡ್
ಭಾರತ 200 (45 ಓವರ್ಗಳಲ್ಲಿ)
ರೋಹಿತ್ ಶರ್ಮಾ ಸಿ ಶಬ್ಬೀರ್ ಬಿ ಮುಸ್ತಫಿಜರ್ ರಹಮಾನ್ 00
ಶಿಖರ್ ಧವನ್ ಸಿ ಲಿಟ್ಟನ್ ದಾಸ್ ಬಿ ನಾಸೀರ್ ಹೊಸೈನ್ 53
ವಿರಾಟ್ ಕೊಹ್ಲಿ ಎಲ್ಬಿಡಬ್ಲ್ಯು ಬಿ ನಾಸೀರ್ ಹೊಸೈನ್ 23
ಮಹೇಂದ್ರಸಿಂಗ್ ದೋನಿ ಸಿ ಸೌಮ್ಯ ಸರ್ಕಾರ್ ಬಿ ಮುಸ್ತಫಿಜರ್ ರಹಮಾನ್ 47
ಅಂಬಟಿ ರಾಯುಡು ಸಿ ನಾಸೀರ್ ಹೊಸೈನ್ ಬಿ ರುಬೆಲ್ ಹೊಸೈನ್ 00
ಸುರೇಶ್ ರೈನಾ ಸಿ ಲಿಟ್ಟನ್ ದಾಸ್ ಬಿ ಮುಸ್ತಫಿಜರ್ ರಹಮಾನ್ 34
ರವೀಂದ್ರ ಜಡೇಜ ಬಿ ಮುಸ್ತಫಿಜರ್ ರಹಮಾನ್ 19
ಅಕ್ಷರ್ ಪಟೇಲ್ ಎಲ್ಬಿಡಬ್ಲ್ಯು ಬಿ ಮುಸ್ತಫಿಜರ್ ರಹಮಾನ್ 00
ರವಿಚಂದ್ರನ್ ಅಶ್ವಿನ್ ಸಿ ಲಿಟ್ಟನ್ ದಾಸ್ ಬಿ ಮುಸ್ತಫಿಜರ್ ರಹಮಾನ್ 04
ಭುವನೇಶ್ವರ್ ಕುಮಾರ್ ಸಿ ಲಿಟ್ಟನ್ ದಾಸ್ ಬಿ ರುಬೆಲ್ ಹೊಸೈನ್ 03
ಧವಳ್ ಕುಲಕರ್ಣಿ ಔಟಾಗದೆ 02
ಇತರೆ: (ಲೆಗ್ ಬೈ–6, ವೈಡ್–8, ನೋ ಬಾಲ್–1) 15

ವಿಕೆಟ್ ಪತನ: 1–0 (ರೋಹಿತ್; 0.2), 2–74 (ಕೊಹ್ಲಿ; 12.3), 3–109 (ಧವನ್; 20.5), 4–110 (ರಾಯುಡು; 21.4), 5–163 (ರೈನಾ; 35.3), 6–174 (ದೋನಿ; 39.3), 7–174 (ಅಕ್ಷರ್; 39.4), 8–184 (ಅಶ್ವಿನ್; 41.6), 9–196 (ಜಡೇಜ; 43.6), 10–200 (ಧವಳ್: 44.6)

ಬೌಲಿಂಗ್: ಮುಸ್ತಫಿಜರ್ ರಹಮಾನ್ 10–0–43–6, ತಸ್ಕಿನ್ ಅಹ್ಮದ್ 4–0–24–0, ಮುಷ್ರಫೆ ಮುರ್ತಜಾ 7–0–35–0, ನಾಸೀರ್ ಹೊಸೈನ್ 10–0–33–2, ರುಬೆಲ್ ಹೊಸೈನ್ 7–0–26–2, ಶಕೀಬ್ ಅಲ್ ಹಸನ್ 7–0–33–0.

ಬಾಂಗ್ಲಾದೇಶ 4ಕ್ಕೆ 200 (38 ಓವರ್ಗಳಲ್ಲಿ)
ತಮೀಮ್ ಇಕ್ಬಾಲ್ ಸಿ ಶಿಖರ್ ಧವನ್ ಬಿ ಧವಳ್ ಕುಲಕರ್ಣಿ 13
ಸೌಮ್ಯ ಸರ್ಕಾರ್ ಎಲ್ಬಿಡಬ್ಲ್ಯು ಬಿ ರವಿಚಂದ್ರನ್ ಅಶ್ವಿನ್ 34
ಲಿಟ್ಟನ್ ದಾಸ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಅಕ್ಷರ್ ಪಟೇಲ್ 36
ಮುಷ್ಫೀಕರ್ ರಹೀಮ್ ರನ್ ಔಟ್ (ರೋಹಿತ್ ಶರ್ಮಾ/ದೋನಿ) 31
ಶಕೀಬ್ ಅಲ್ ಹಸನ್ ಔಟಾಗದೆ 51
ಶಬ್ಬೀರ್ ರಹಮಾನ್ ಔಟಾಗದೆ 22
ಇತರೆ: (ಲೆಗ್ ಬೈ–4, ವೈಡ್–9) 13

ವಿಕೆಟ್ ಪತನ: 1–34 (ತಮೀಮ್; 6.2), 2–86 (ಸೌಮ್ಯ; 16.4). 3–98 (ಲಿಟ್ಟನ್; 19.2), 4–152 (ಮುಷ್ಪೀಕರ್; 29.1)
ಬೌಲಿಂಗ್: ಭುವನೇಶ್ವರ್ ಕುಮಾರ್ 5–0–32–0, ಧವಳ್ ಕುಲಕರ್ಣಿ 7–0–42–1, ರವಿಚಂದ್ರನ್ ಅಶ್ವಿನ್ 10–2–32–1, ರವೀಂದ್ರ ಜಡೇಜ 7–0–28–0, ಅಕ್ಷರ್ ಪಟೇಲ್ 7–0–48–1, ಸುರೇಶ್ ರೈನಾ 2–0–14–0.

ಫಲಿತಾಂಶ: ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶಕ್ಕೆ 6 ವಿಕೆಟ್ ಗೆಲುವು ಹಾಗೂ ಸರಣಿಯಲ್ಲಿ 2–0ರಲ್ಲಿ ಮುನ್ನಡೆ.
ಪಂದ್ಯಶ್ರೇಷ್ಠ: ಮುಸ್ತಫಿಜರ್ ರಹಮಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.