ದೋಸೆ ಹಿಟ್ಟಿನ ತಯಾರಿಯಲ್ಲಿನ ಕಲಾತ್ಮಕತೆಯೇ ದೋಸೆಯ ರುಚಿಗೆ ಮೂಲ. ದೋಸೆ ಜತೆಗೆ ನೀಡುವ ಸಾಂಬಾರ್, ಚಟ್ನಿ, ಗಸಿಯಂತಹ ಖಾದ್ಯಗಳೂ ರುಚಿಯನ್ನು ಹೆಚ್ಚಿಸುತ್ತವೆ.

ಹಲಸಿನ ಕಾಯಿ, ಹಲಸಿನ ಹಣ್ಣು, ಬಾಳೆ ಹಣ್ಣು, ರಾಗಿ, ಮೆಂತೆ ಮೊದಲಾದ ಹತ್ತಾರು ಬಗೆಯ ದೋಸೆಗಳನ್ನು ಮನೆಗಳಲ್ಲೂ ಮಾಡಲಾಗುತ್ತದೆ. ಅಮ್ಮನ ಕೈಯಲ್ಲಿ ಸಿದ್ಧವಾಗುವ ಇಂತಹ ದೋಸೆಗಳ ರುಚಿಯನ್ನು ತಿಂದೇ ಅರಿಯಬೇಕು. ಅದನ್ನು ಮತ್ತೆ ನೆನಪಿಸುವಂತಹ ಪ್ರಯತ್ನಕ್ಕೆ ಸಜ್ಜುಗೊಂಡಿದೆ ಬಸವನಗುಡಿಯಲ್ಲಿರುವ `ದೋಸೆಮನೆ~.ತನ್ನ ಪ್ರಥಮ ವರ್ಷಾಚರಣೆಯ ಅಂಗವಾಗಿ ಏಪ್ರಿಲ್ 1ರಿಂದ 8ರವರೆಗೆ ದೋಸೆಹಬ್ಬ ಆಯೋಜಿಸಿದೆ.

ದೋಸೆಹಬ್ಬಕ್ಕೆ `ದೋಸೆಮನೆ~ ಹೋಟೆಲ್ ಸಜ್ಜುಗೊಂಡಿದೆ. ದೋಸೆಪ್ರಿಯರಿಗೆ ಇಲ್ಲಿ ಒಂದಲ್ಲ, ಎರಡಲ್ಲ ನೂರಾರು ಬಗೆಯ ದೋಸೆಯ ರುಚಿ ನೋಡಲು ಅವಕಾಶವಿದೆ.

ಅಮ್ಮ ದೋಸೆ ಹೊಯ್ದು ಕೊಟ್ಟರೆ ಅದರ ರುಚಿ ದುಪ್ಪಟ್ಟು. ಅಮ್ಮನ ಕೈರುಚಿಯಂತಹದೇ ರುಚಿಯೊಂದಿಗೆ ಇಲ್ಲಿ ನೂರಕ್ಕೂ ಅಧಿಕ ವೈವಿಧ್ಯದ ದೋಸೆ ಒಂದೇ ಸೂರಿನಡಿ ದೊರಕಲಿವೆ. `ದೋಸೆಮನೆ~ ದೋಸೆಹಬ್ಬದ ಪ್ರಯುಕ್ತ ಏ.1ರಂದು (ಭಾನುವಾರ) ಗಜಗಾತ್ರದ ದೋಸೆ ಅನಾವರಣಗೊಂಡಿತು. ಈ ದೋಸೆ ಬರೋಬ್ಬರಿ 12 ಅಡಿ ಉದ್ದದ್ದು. ಗಜಗಾತ್ರದ ದೋಸೆಯನ್ನು ನಟಿ ನೀತು ಅನಾವರಣಗೊಳಿಸಿದರು.

ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ದೋಸೆಯನ್ನು ಇಷ್ಟಪಡದವರೇ ಇಲ್ಲ. ದೋಸೆ ಎಂದರೆ ಮಸಾಲೆ, ರವಾ, ಸೆಟ್ ದೋಸೆಗಳಷ್ಟೇ ಅಲ್ಲ. ಇದರಲ್ಲೂ ನಾನಾ ನಮೂನೆಗಳಿವೆ.

ವಿವಿಧ ಬಗೆಯ ಹಣ್ಣು, ತರಕಾರಿಗಳ ಸಹಿತ ನಮ್ಮ ನಿತ್ಯ ಬಳಕೆಯ ಹತ್ತಾರು ವಸ್ತುಗಳಿಂದ ದೋಸೆ ತಯಾರಿಸಲು ಸಾಧ್ಯವಿದೆ. ಅವುಗಳಿಗೆ ನೆಂಚ್ಚಿಕೊಳ್ಳಲು ಸಹ ವಿಧ ವಿಧದ ಸಾಂಬಾರ್ಗಳು, ಚಟ್ನಿಗಳು ಇವೆ. ಇವೆಲ್ಲವನ್ನೂ ಒಂದೆಡೆಯಲ್ಲೇ ನೀಡುವ ಪ್ರಯತ್ನ ಈ ದೋಸೆಮನೆ ಹಬ್ಬದಲ್ಲಿ ನಡೆಸಲಾಗುತ್ತದೆ. ಶುಚಿ ರುಚಿಯಲ್ಲಿ ಯಾವುದೇ ರಾಜಿ ಇಲ್ಲದೆ, ಮತ್ತೆ ಮತ್ತೆ ಇಲ್ಲಿಗೆ ಬಂದು ದೋಸೆ ತಿನ್ನುವ ಬಯಕೆ ಹುಟ್ಟಿಸುವ ರೀತಿಯಲ್ಲಿ ಇಲ್ಲಿ ದೋಸೆ ತಯಾರಾಗುತ್ತಿದೆ.

`ಎಲ್ಲದಕ್ಕೂ ಒಂದೇ ಬೆಲೆ ಎಂಬುದು ಕೂಡ ದೋಸೆ ಹಬ್ಬದ ವಿಶೇಷ. ದೋಸೆಹಬ್ಬದ ಅಂಗವಾಗಿ ಹೋಟೆಲ್ನ ಗ್ರೌಂಡ್ಪ್ಲೋರ್ನಲ್ಲಿ ಗ್ರಾಹಕರಿಗೆ ಎಲ್ಲ ಬಗೆಯ ದೋಸೆಗಳು ರೂ.20ಕ್ಕೆ ಲಭ್ಯವಿದೆ. ದಾಖಲೆಯ ಉದ್ದೇಶ ಹಾಗೂ ಜನಾಕರ್ಷಣೆ ಈ ಕಾರ್ಯಕ್ರಮದ ವೈಶಿಷ್ಟ್ಯ~ ಎನ್ನುತ್ತಾರೆ ದೋಸೆಮನೆ ಹಬ್ಬದ ರೂವಾರಿ ವೆಂಕಟರಾಜ ಭಟ್.

ವರ್ಷಾಚರಣೆ ಅಂಗವಾಗಿ ಕಡಲೇ ಬೇಳೆ ಹೋಳಿಗೆ, ಕಾಯಿಹೋಳಿಗೆ, ಖರ್ಜೂರ ಹೋಳಿಗೆಗಳು ಸೇರಿದಂತೆ ಬಿಸಿಬಿಸಿ ಹೋಳಿಗೆ, ಬಜ್ಜಿ, ವೈವಿಧ್ಯಮಯ ಬೋಂಡಾ, ಐಸ್ ಕ್ರೀಂ ಸೇರಿದಂತೆ ಅನೇಕ ತಿನಿಸುಗಳಿಗೆ ಕೇವಲ 10 ರೂ. ದರ ನಿಗದಿಪಡಿಸಿದೆ. ಬಿಸಿಲ ಬೇಗೆಗೆ ಬಾಯಾರಿಕೆ ತಣಿಸಲು ಉಚಿತ ಮಜ್ಜಿಗೆ ವ್ಯವಸ್ಥೆ ದೋಸೆಮನೆ ಹಬ್ಬದಲ್ಲಿ ಕಲ್ಪಿಸಲಾಗಿದೆ.

ಇತರ ತಿನಿಸುಗಳೊಂದಿಗೆ ಮಿನಿದೋಸೆ ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಎಲ್ಲಾ ತಿಂಡಿ ತಿನಿಸುಗಳ ಮೇಲೆ ಶೇ 20 ರಿಯಾಯಿತಿ ನೀಡಲಾಗುವುದು.
ಸ್ಥಳ : ದೋಸೆಮನೆ, ವಿವಿಪುರಂ ಜೈನ್ ಕಾಲೇಜು ಎದುರು, ಬಸವನಗುಡಿ. ಮಾಹಿತಿಗೆ : 98450 65870.

ಲಭ್ಯವಿರುವ ದೋಸೆಗಳು: ಮೈಸೂರು ಮಸಾಲೆ ದೋಸೆ, ಸ್ಪೆಷಲ್ ಮೈಸೂರು ಮಸಾಲೆ, ಓಪನ್ ಮಸಾಲೆ, ಬೆಣ್ಣೆ ಮಸಾಲೆ, ಪೇಪರ್ ಮಸಾಲೆ, ಸಾಗು ಮಸಾಲೆ, ಸಿಜ್ಹ್ವಾನ ಮಸಾಲೆ, ಸಿಜ್ಜ್ವಾನ ಚೀಸ್ ಮಸಾಲೆ, ಸಿಜ್ಹ್ವಾನ ಪನ್ನೀರ್ ಮಸಾಲೆ, ಪಾಲಕ್ ಮಸಾಲೆ, ಈರುಳ್ಳಿ ದೋಸೆ, ತರಕಾರಿ ದೋಸೆ, ಡ್ರೈಫ್ರೂಟ್ಸ್ ದೋಸೆ, ಬ್ರೆಡ್ ದೋಸೆ, ಸ್ವೀಟ್ಕಾರ್ನ್ ದೋಸೆ, ಅವರೆಕಾಳು ದೋಸೆ, ಮೊಳಕೆಕಾಳು ದೋಸೆ,

ಟೊಮೊಟಾ ಈರುಳ್ಳಿ ಉತ್ತಪ್ಪ, ಆಲೂ ಉತ್ತಪ್ಪ, ಕೊಕನಟ್ ದೋಸೆ, ಪನ್ನೀರ್ ಉತ್ತಪ್ಪ, ಟೊಮೊಟಾ ಉತ್ತಪ್ಪ, ಫ್ರೂಟ್ಸ್ ಉತ್ತಪ್ಪ, ಸಿಕ್ಸರ್ ಉತ್ತಪ್ಪ, ಪೆಸರೊಟ್ಟು, ಅಡೆ ದೋಸೆ, ನಾನಾ ಬಗೆಯ ರವಾ ದೋಸಾ, ಬರಿ ಅಕ್ಕಿ ದೋಸೆ, ಕೊತ್ತಂಬರಿ ಸೊಪ್ಪು ಬರಿ ಅಕ್ಕಿ ದೋಸೆ, ಪಾಲಕ್ ಬರಿ ಅಕ್ಕಿ ದೋಸೆ, ಖಾರ ನೀರು ದೋಸೆ, ಉಪ್ಪು ಹುಳಿ ಖಾರ ದೋಸೆಗಳು,

ಪತ್ರೊಡೆ ಖಾರ ದೋಸೆ, ದೀವಿ ಹಲಸು ಖಾರ ದೋಸೆ, ಗುಳ್ಳ ಬದನೆ ಖಾರ ದೋಸೆ, ಹೀರೆಕಾಯಿ ಖಾರ ದೋಸೆ, ಬಾಳೆಕಾಯಿ ಖಾರ ದೋಸೆ, ದೊಡ್ಡಪತ್ರೆ ಖಾರ ದೋಸೆ, ಈರುಳ್ಳಿ ಸ್ಲೈಸ್ ಖಾರ ದೋಸೆ, ಮಿಕ್ಸೆಡ್ ಖಾರ ದೋಸೆ, ಸಿಹಿ ದೋಸೆ ಸಾಫ್ಟ್, ಸಿಹಿ ದೋಸೆ ರೋಸ್ಟ್, ಸೌತೆಕಾಯಿ ಸಿಹಿ ದೋಸೆ, ಬಾಳೆಹಣ್ಣು ಸಿಹಿ ದೋಸೆ, ಡ್ರೈಫ್ರೂಟ್ಸ್ ಸಿಹಿ ದೋಸೆ, ಸ್ವೀಟ್ಕಾರ್ನ್ ಸಿಹಿ ದೋಸೆ, ಮಿಕ್ಸ್ಡ್ ಫ್ರೂಟ್ಸ್ ಸಿಹಿ ದೋಸೆ.

ದೋಸೆ ಇತಿಹಾಸ ಗೊತ್ತಾ ?
ದೋಸೆಗೂ, ಕರ್ನಾಟಕಕ್ಕೂ; ಅದರಲ್ಲೂ ಮುಖ್ಯವಾಗಿ ಉಡುಪಿಗೂ ಬಹಳ ಹತ್ತಿರದ ಸಂಬಂಧ ಇರುವುದು ಇತಿಹಾಸದಿಂದ ಗೊತ್ತಾಗುತ್ತದೆ. ದೋಸೆ ಉಗಮವಾದುದು ಉಡುಪಿಯಲ್ಲೇ ಎಂದು ಆಂಗ್ಲ ಆಹಾರ ಲೇಖಕರಾದ ಪ್ಯಾಟ್ ಚಾಂಪ್ಮನ್ ಮತ್ತು ಲೀಸಾ ರೇನರ್ ಹಾಗೂ ತಂಗಪ್ಪನ್ ನಾಯರ್ ಪ್ರತಿಪಾದಿಸುತ್ತಾರೆ.

ಕನ್ನಡ ನೆಲದಲ್ಲಿ ಎರಡು ಸಾವಿರಕ್ಕೂ ಅಧಿಕ ವರ್ಷದಿಂದ ದೋಸೆಯ ಘಮ ಘಮ ಹರಡಿರಬಹುದು. ಆದರೆ ಆ ದೋಸೆ ಹೊಟ್ಟೆ ತುಂಬಿಸಿತೇ ಹೊರತು ಪುಸ್ತಕದ ಒಳಗೆ ಹೋಗಿ ಕುಳಿತುಕೊಳ್ಳಲಿಲ್ಲ.

ಹೀಗಾಗಿ `ತಮಿಳು ಸಂಗಂ~ನಲ್ಲಿ ದೋಸೆಯ ಬಗ್ಗೆ ಉಲ್ಲೇಖ ಇರುವುದರಿಂದ ತಮಿಳು ನೆಲದಲ್ಲೇ ಇದು ಮೊದಲಾಗಿ ಮೈದಳೆಯಿತು ಎಂಬ ಭಾವನೆ ನೆಲೆಸಿದೆ.

ಉಡುಪಿ ಮೂಲದ ಹೋಟೆಲ್ಗಳು ದೇಶದ ಉದ್ದಗಲಕ್ಕೆ ತಲೆ ಎತ್ತಿದ್ದು, ಅವುಗಳೆಲ್ಲಾ ವಿವಿಧ ಬಗೆಯ ದೋಸೆಗಳನ್ನು ನೀಡುತ್ತಿರುವುದನ್ನು ನೊಡಿದರೆ ದೋಸೆಯ ಮೂಲ ಕರ್ನಾಟಕ ಎಂಬ ವಾದಕ್ಕೆ ಬಲವಾದ ಪುಷ್ಠಿ ಸಿಕ್ಕಂತಾಗುತ್ತದೆ. ದೋಸೆಯ ಮೂಲ ಏನೇ ಇರಲಿ, ಇಂದು ರುಚಿ, ಶುಚಿ ಮತ್ತು ವೈವಿಧ್ಯದ ದೋಸೆ ನೀಡುವಲ್ಲಿ ಕರ್ನಾಟಕವನ್ನು ಹಿಂದಿಕ್ಕುವ ಇನ್ನೊಂದು ರಾಜ್ಯವಿಲ್ಲ ಎಂಬುದಂತೂ ನಿಶ್ಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.