ಮಂಗಳವಾರ, ಮೇ 11, 2021
28 °C

ಧರ್ಮದಲ್ಲಿ ರಾಜಕೀಯ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಧರ್ಮದಲ್ಲಿ ರಾಜಕೀಯ ಸೇರಬಾರದು. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದು ಹೇಳಿ ಸಮಾಜದಲ್ಲಿ ಒಡಕು ಮೂಡಿಸುವುದು ಸಲ್ಲದು ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.ಇಲ್ಲಿನ ತ್ರೀಪುರಾಂತ ಮರಿದೇವರ ಗುಡ್ಡದ ಘನಲಿಂಗ ರುದ್ರಮುನಿ ಗವಿಮಠದಲ್ಲಿ ಮಂಗಳವಾರ ಹಮ್ಮಿಕೊಂಡ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮತ್ತು ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.ಪಂಚಪೀಠಗಳು ಎಲ್ಲ ಜಾತಿಧರ್ಮದವರನ್ನು ಸಮನಾಗಿ ನೋಡುತ್ತವೆ. ದೂರವಿದ್ದು ದೂರುವುದನ್ನು ಬಿಟ್ಟು ಸಮೀಪ ಬಂದು ನೋಡಿದರೆ ಅದು ಗೊತ್ತಾಗುತ್ತದೆ. ವೀರಕ್ತರು ಮತ್ತು ಪಂಚಾಚಾರ್ಯರ ಹೆಸರಲ್ಲಿ ಸಮಾಜವನ್ನು ಒಡೆಯುವ ಹುನ್ನಾರ ಮೊದಲಿನಿಂದಲೂ ನಡೆಯುತ್ತಿದೆ ಎಂದು ಪುನರುಚ್ಚರಿಸಿದರು.ಉದ್ಘಾಟನೆ ನೆರವೆರಿಸಿದ ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ ನಾಡಿನಲ್ಲಿ ಶಾಂತಿ, ಸೌಹಾರ್ದತೆ ಉಳಿಯುವಲ್ಲಿ ವೀರಶೈವ ಮಠಾಧೀಶರ ಪಾತ್ರ ಪ್ರಮುಖವಾಗಿದೆ ಎಂದರು. ಮಳೆ ಆಧಾರಿತ ಪ್ರದೇಶದ ರೈತರು ಸಂಕಟದಲ್ಲಿದ್ದು ಇದಕ್ಕಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ತಡೋಳಾ ರಾಜೇಶ್ವರ ಶಿವಾಚಾರ್ಯರು ಮಾತನಾಡಿ ಘನಲಿಂಗ ರುದ್ರಮುನಿ ಗವಿಮಠದಲ್ಲಿ ಬೃಹತ್ ಭವನ ನಿರ್ಮಿಸಿ ಸಿದ್ಧಾಂತ ಶಿಖಾಮಣಿಯ ಶ್ಲೋಕಗಳನ್ನು ಕೆತ್ತಿಸಬೇಕಾಗಿದೆ ಎಂದರು. ಮಠಾಧಿಪತಿ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ ರೇಣುಕಾಚಾರ್ಯರ ಜಯಂತಿಯ ಮಹತ್ವವನ್ನು ಹೇಳಿದರು.ಮಾಜಿ ಶಾಸಕ ಎಂ.ಜಿ.ಮುಳೆ, ಹಿರಿಯ ಮುಖಂಡ ಬಿ.ನಾರಾಯಣರಾವ, ಯುವ ಮುಖಂಡ ಲಿಂಗರಾಜ ಪಾಟೀಲ ಅಟ್ಟೂರ್ ಮಾತನಾಡಿದರು. ಗುರುಲಿಂಗ ಮಹಾಸ್ವಾಮೀಜಿ ಹೂವಿನಹಳ್ಳಿ, ಸದ್ಲಾಪುರ ಸಿದ್ಧಲಿಂಗ ಶಿವಾಚಾರ್ಯರು, ಸಾಯಗಾಂವ ಶಿವಾನಂದ ದೇವರು, ಮುಖಂಡರಾದ ಸುನಿಲ ಪಾಟೀಲ, ಜಯದ್ರತ್ ಮಾಡ್ಜೆ, ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದ್ರೆ, ಶಿವರಾಜ ನರಶೆಟ್ಟಿ, ಶರಣಬಸಪ್ಪ ಬಿರಾದಾರ, ಪ್ರಭುಲಿಂಗಯ್ಯ ಟಂಕಸಾಲಿಮಠ, ಡಾ.ಬಸವರಾಜ ಸ್ವಾಮಿ, ಕೇಶವರಾವ ತಳಘಟಕರ್ ಉಪಸ್ಥಿತರಿದ್ದರು.ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಕಾಂತ ಸ್ವಾಮಿ ನಾರಾಯಣಪುರ ಸ್ವಾಗತಿಸಿದರು. ರಮೇಶ ರಾಜೋಳೆ ನಿರೂಪಿಸಿದರು. ಈ ಸಂದರ್ಬದಲ್ಲಿ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶರಣಪ್ಪ ಬಿರಾದಾರ ಅವರಿಗೆ ಪ್ರಶಸ್ತಿಕೊಟ್ಟು ಸನ್ಮಾನಿಸಲಾಯಿತು.  

  

ಕಾರ್ಯಕ್ರಮದ ಮೊದಲು ಬಸವೇಶ್ವರ ದೇವಸ್ಥಾನದಿಂದ ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಹಾರಕೂಡ ಚೆನ್ನವೀರ ಶಿವಾಚಾರ್ಯರು ಮೆರವಣಿಗೆ ಉದ್ಘಾಟಿಸಿದರು. ಅನೇಕ ಭಕ್ತರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.