ಧಾರವಾಡ ಹೈಕೋರ್ಟ್ ಬೆಂಚ್ (ಪೀಠ) ಸ್ಥಾಪನೆಯ ದಿವಸವಾದ ಜುಲೈ 4 ರಂದು ಉತ್ತರ ಕರ್ನಾಟಕದವರು ಹಿರಿಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರನ್ನು ನೆನಪಿಸಿಕೊಳ್ಳಬೇಕು. ಅವರ ಧೀಮಂತಿಕೆಯಿಂದಾಗಿಯೇ ಇಲ್ಲಿ ಹೈಕೋರ್ಟ್ ಬೆಂಚ್ ಸ್ಥಾಪನೆಯಾಯ್ತು ಎಂಬುದನ್ನು ಮರೆಯಬಾರದು.

ಪದೋನ್ನತಿ ಪಡೆದು ಸುಪ್ರೀಮ್ ಕೋರ್ಟಿಗೆ ಹೋಗುವ ಮೊದಲು ಅಂದರೆ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಹುದ್ದೆಯನ್ನು ಬಿಟ್ಟುಕೊಡುವ ವೇಳೆ ಸಿರಿಯಾಕ್ ಜೋಸೆಫ್ ಅವರು ಈ ಭಾಗದ ದಶಕಗಳ ಒತ್ತಾಯದ ಕಡೆ ಗಮನ ಕೊಟ್ಟು ಹೈಕೋರ್ಟ್ ಬೆಂಚ್ ಸ್ಥಾಪಿಸಲೇಬೇಕು ಎಂಬ ಗಟ್ಟಿ ತೀರ್ಮಾನ ತೆಗೆದು ಕೊಂಡಿದ್ದರಿಂದಲೇ, ಈ ಭಾಗದವರ ಬೆಂಗಳೂರಿಗೆ ಎಡತಾಕುವ ತ್ರಾಸು ಕೊನೆಗೊಂಡಿತು.

ಉತ್ತರ ಕರ್ನಾಟಕದವರು ಈಗಿರುವ ಸರ್ಕಿಟ್ ಬದಲು `ಪರ್ಮನೆಂಟ್ ಬೆಂಚ್~ಗೆ (ಕಾಯಂ ಪೀಠ) ಬೇಡಿಕೆಯಿಟ್ಟಿದ್ದಾರೆ ಎಂಬುದು ಇತ್ತೀಚಿನ ಸುದ್ದಿ. ಸರ್ಕಿಟ್ (ಸಂಚಾರಿ) ಮತ್ತು ಪರ್ಮನೆಂಟ್ ಬೆಂಚ್ ನಡುವೆ ಬಹಳ ಅಂತರವಿಲ್ಲ.

ಕಂಪೆನಿ, ಪರಿಸರ, ಸಾರ್ವಜನಿಕ ಹಿತಾಸಕ್ತಿ ಇವೇ ಮೊದಲಾದ ಕೆಲವೇ ಕೆಲವು ಪ್ರಕರಣಗಳಿಗೆ ಸಂಬಂಧಿಸಿದ ಖಟ್ಲೆಗಳನ್ನು ಬಿಟ್ಟರೆ ಬಹುತೇಕ ಎಲ್ಲ ನಮೂನೆಯ ಖಟ್ಲೆಗಳನ್ನು ಸರ್ಕಿಟ್ ಬೆಂಚ್ನಲ್ಲೇ ದಾಖಲು ಮಾಡಿ ನ್ಯಾಯ ನಿರ್ಣಯ ಪಡೆಯಬಹುದು.

ಕಂಪೆನಿ, ಪರಿಸರ, ಸಾರ್ವಜನಿಕ ಹಿತಾಸಕ್ತಿ ಮುಂತಾದ ವಿಷಯಗಳ ಮೇಲಿನ ಪ್ರಕರಣಗಳನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲೇ ದಾಖಲಿಸಬೇಕಾಗುತ್ತದೆ ಮತ್ತು ಅವುಗಳ ವಿಚಾರಣೆ ಮತ್ತು ನ್ಯಾಯ ನಿರ್ಣಯ ಅಲ್ಲೇ ನಡೆಯುತ್ತದೆ.

ಈಗಿನ ಸರ್ಕಿಟ್ ಹೋಗಿ ಪರ್ಮನೆಂಟ್ ಬೆಂಚ್ ಆದಮೇಲೂ ಇದಕ್ಕೆ ಧಾರವಾಡ ಹೈಕೋರ್ಟ್ ಅಂತ ಕರೆಯುವುದಿಲ್ಲ. ಈಗಿರುವ ಹೆಸರಿನಲ್ಲಿ `ಸರ್ಕಿಟ್~ ಮಾಯವಾಗಿ ಕರ್ನಾಟಕ ಹೈಕೋರ್ಟಿನ ಧಾರವಾಡ ಬೆಂಚ್ ಅಂತ ನಾಮಕರಣವಾಗುತ್ತದೆ.

ಪರ್ಮನೆಂಟ್ ಬೆಂಚ್ ಬಂದರೂ ಕೂಡಾ ಇಲ್ಲಿ ಸ್ವತಂತ್ರ ಮುಖ್ಯ ನ್ಯಾಯಾಧೀಶರ ನೇಮಕ ಆಗುವುದಿಲ್ಲ. ಯಾಕೆಂದರೆ ಬೆಂಚ್ಗಳು ಒಂದಕ್ಕಿಂತ ಹೆಚ್ಚಿದ್ದರೂ ಒಂದು ರಾಜ್ಯಕ್ಕೆ ಒಬ್ಬರೇ ಮುಖ್ಯ ನ್ಯಾಯಾಧೀಶರು. ಈ ಹಿನ್ನೆಲೆಯಲ್ಲಿ ಪರ್ಮನೆಂಟ್ ಬೆಂಚ್ಗೆ ಒತ್ತಾಯ ಮಾಡುವ ಬದಲು ಬೆಂಗಳೂರಿನಲ್ಲಿರುವ ಪ್ರಧಾನ ಪೀಠವನ್ನೇ ಇಲ್ಲಿಗೆ ಸ್ಥಳಾಂತರಿಸಲು ಒತ್ತಾಯ ಪಡಿಸುವುದು ಹೆಚ್ಚು ಸೂಕ್ತ.

ಬೆಂಗಳೂರು ಇವತ್ತು ಕೇವಲ ಕರ್ನಾಟಕ ರಾಜಧಾನಿಯಾಗಿ ಉಳಿದಿಲ್ಲ. ಐ.ಟಿ. ಕೈಗಾರಿಕೆ ವಿಸ್ತಾರಗೊಂಡಂತೆ ಹೊರ ರಾಜ್ಯ - ರಾಷ್ಟ್ರಗಳ ಜನರು ವಲಸೆ ಬಂದು ಇಲ್ಲೇ ಠಿಕಾಣಿ ಹೂಡಿದ್ದಾರೆ. ಸದಾ ಗಡಿಬಿಡಿ, ಒತ್ತಡ, ಗೊಂದಲ, ಹೆಚ್ಚುತ್ತಿರುವ ಅಪರಾಧಗಳು, ಮಲಿನತೆಯಿಂದ ವಿಪರೀತ ಯಾತನೆಗೀಡಾದ ಬದುಕಿನಿಂದ ಬೆಂಗಳೂರಿನ ಮೂಲನಿವಾಸಿಗಳೇ ಬೇಸತ್ತಿದ್ದಾರೆ.

ನಿರ್ಮಲ ಪರಿಸರ, ನಿವಾಂತ ವಾತಾವರಣ, ಪರಿಶುದ್ಧ ಹವೆಯಿಂದ ಆ ಮಹಾನಗರ ವಂಚಿತಗೊಂಡಿದೆ. ಇದ್ಯಾವುದೇ ಸಮಸ್ಯೆಯಿಲ್ಲದ ಧಾರವಾಡ, ಪ್ರಧಾನ ಪೀಠಕ್ಕೆ ಹೇಳಿ ಮಾಡಿಸಿದ ಸ್ಥಳ, ಪರ್ಮನೆಂಟ್ ಬದಲು ಪ್ರಧಾನ ಬೆಂಚ್ಗೆ ಒತ್ತಾಯ ಪಡಿಸಲು ಇದು ಯೋಗ್ಯ ಸಮಯ.

ಹೈಕೋರ್ಟಿನ ಪರ್ಮನೆಂಟ್ ಬೆಂಚ್ಗಳು ರಾಜ್ಯ ರಾಜಧಾನಿಯಲ್ಲೇ ಇರಬೇಕೆಂಬ ಕಡ್ಡಾಯವಿಲ್ಲ. ರಾಜಸ್ತಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕೇರಳ ಈ ನಾಲ್ಕೂ ರಾಜ್ಯಗಳಲ್ಲಿ ಹೈಕೋರ್ಟ್ ಪ್ರಧಾನ ಬೆಂಚ್ಗಳು ರಾಜಧಾನಿಯಲ್ಲಿಲ್ಲ. ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಹೈಕೋರ್ಟ್ ಬೆಂಚ್ ಇದೆ. ಆದರೆ ಹೈಕೋರ್ಟಿನ ಪ್ರಧಾನ ಪೀಠ ದೂರದ ಜೋಧಪುರದಲ್ಲಿ. ಇವೆರಡು ಷಹರಗಳ ನಡುವಿನ ಅಂತರ 330 ಕಿಲೋಮೀಟರ್.

ಉತ್ತರ ಪ್ರದೇಶದ ರಾಜಧಾನಿ ಲಕ್ನೊ. ಆದರೆ ಹೈಕೋರ್ಟಿನ ಪ್ರಧಾನ ಪೀಠ 200 ಕಿಲೋಮೀಟರ್ ಪೂರ್ವಕ್ಕೆ ಇರುವ ಅಲಹಾಬಾದ್ನಲ್ಲಿ. ರಾಜಧಾನಿಯಲ್ಲಿರುವ ಬೆಂಚಿಗೆ ಉತ್ತರಪ್ರದೇಶ ಹೈಕೋರ್ಟ್ ಅಂತ ಕರೆಯುವುದಿಲ್ಲ. ಅದರ ಹೆಸರು ಅಲಹಾಬಾದ್ ಹೈಕೋರ್ಟಿನ ಲಕ್ನೊ ಬೆಂಚ್.

ಉತ್ತರ ಪ್ರದೇಶ ಭೌಗೋಳಿಕವಾಗಿ ಕರ್ನಾಟಕಕ್ಕಿಂತಲೂ ವಿಶಾಲ ರಾಜ್ಯ. ಆದರೂ ಅಲ್ಲಿ ಎರಡಕ್ಕಿಂತ ಹೆಚ್ಚು ಹೈಕೋರ್ಟ್ ಪೀಠಗಳಿಲ್ಲ. ಅದರಂತೆ ವಿಶಾಲವಾದ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಹೈಕೋರ್ಟಿನ ಯಾವ ಬೆಂಚೂ ಇಲ್ಲ.

ಎಂ.ಪಿ. ಹೈಕೋರ್ಟಿನ ಪ್ರಧಾನ ಪೀಠ 300 ಕಿಲೋಮೀಟರ್ ಪೂರ್ವಕ್ಕೆ ಇರುವ ಜಬಲ್ಪುರದಲ್ಲಿ. ಇಂದೋರ್ ಮತ್ತು ಗ್ವಾಲಿಯರ್ ಹೀಗೆ ಇನ್ನೂ ಎರಡು ಹೈಕೋರ್ಟ್ ಪೀಠಗಳು ಆ ರಾಜ್ಯದಲ್ಲಿದ್ದು ಸ್ಥಾಪನೆಗೊಂಡಾಗ ಸರ್ಕಿಟ್ ಆಗಿದ್ದ ಅವು ನಂತರ ಪರ್ಮನೆಂಟ್ಗೆ ಬಡ್ತಿ ಪಡೆದವು.

ಇನ್ನು ಕೇರಳದ ವಿಚಾರ. 1956 ರಲ್ಲಿ ಭಾಷಾವಾರು ರಾಜ್ಯ ಮರುವಿಂಗಡಣೆ ನಂತರ ರೂಪುಗೊಂಡ ಈಗಿನ ಕೇರಳದ ದಕ್ಷಿಣ ತುದಿಯಲ್ಲಿರುವ ತಿರುವನಂತಪುರಂ ರಾಜಧಾನಿಯಾಯಿತಾದರೂ, ಹೈಕೋರ್ಟ್ ಪೀಠ ಅಲ್ಲಿಗೆ ಬರಲಿಲ್ಲ. ತಿರುವಾಂಕೂರು ಅರಸೊತ್ತಿಗೆಯ ಕಾಲದಲ್ಲೇ ಹೈಕೋರ್ಟ್ ಪೀಠ ಪಡೆದ್ದ್ದಿದ ಕೊಚ್ಚಿ ಉರುಫ್ ಎರ್ನಾಕುಲಂ ಈಗಲೂ ಆ ಪೀಠವನ್ನು ಉಳಿಸಿಕೊಂಡಿದೆ.

ರಾಜಧಾನಿಯಿಂದ ಅದು 200 ಕಿಲೋಮೀಟರ್ ಉತ್ತರದಲ್ಲಿದ್ದರೂ ಕೇರಳದಲ್ಲಿ ಬೇರೆ ಪೀಠ ಸ್ಥಾಪನೆಯಾಗಿಲ್ಲ. 1960ರಲ್ಲಿ ನಿರ್ಮಾಣಗೊಂಡ ಮಹಾರಾಷ್ಟ್ರದಲ್ಲಿ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಬಾಂಬೆ ಹೈಕೋರ್ಟ್ ಇದ್ದ ಜಾಗದಲ್ಲೇ ಇದೆ. ಊರ ಹೆಸರು ಬದಲಾಗಿ ಮುಂಬೈ ಆದರೂ ಬಾಂಬೆ ಹೈಕೋರ್ಟಿನ ಹೆಸರು ಹಾಗೇ ಇದೆ.

ಆ ರಾಜ್ಯದಲ್ಲಿ ನಾಗಪುರ ಮತ್ತು ಔರಂಗಾಬಾದ್ ಅಲ್ಲದೆ ನೆರೆ ರಾಜ್ಯ ಗೋವಾದಲ್ಲಿ ಬಾಂಬೆ ಹೈಕೋರ್ಟಿನ ಬೆಂಚ್ಗಳಿವೆ. ಅವನ್ನು ನಾಗಪೂರ ಹೈಕೋರ್ಟ್ ಅಥವಾ ಔರಂಗಾಬಾದ್ ಹೈಕೋರ್ಟ್ ಅಂತ ಕರೆಯುವುದಿಲ್ಲ. ಗೋವಾ ಸ್ವತಂತ್ರ ರಾಜ್ಯವಾದರೂ ಕೂಡಾ, ಅಲ್ಲಿನ ಹೈಕೋರ್ಟಿಗೆ ಬಾಂಬೆ ಹೈಕೋರ್ಟ್ನ ಗೋವಾ ಬೆಂಚ್ ಅನ್ನುತ್ತಾರೆ.

ಇವೆಲ್ಲವನ್ನು ನೋಡಿದಾಗ, ಪರ್ಮನೆಂಟ್ ಬೆಂಚ್ ಸಲುವಾಗಿ ಬಡಿದಾಡುವ ಬದಲು ಹೈಕೋರ್ಟಿನ ಪ್ರಧಾನ ಪೀಠಕ್ಕಾಗಿ ಪ್ರಯತ್ನಿಸಬೇಕು. ಜೊತೆಗೆ ಸುಪ್ರೀಂಕೋರ್ಟ್ನ ದಕ್ಷಿಣ ಭಾರತ ಪೀಠವನ್ನೂ ಧಾರವಾಡದಲ್ಲೇ ಸ್ಥಾಪಿಸುವಂತೆ ಹಟ ಹಿಡಿಯಬೇಕು.

ಯಾಕೆಂದರೆ ಧಾರವಾಡದಂಥ ನಿವಾಂತ ಪರಿಸರ ಮತ್ತು ಕಾಯ್ದೆ ವ್ಯಾಸಂಗವೂ ಸೇರಿ ಅನೇಕ ರಂಗಗಳಲ್ಲಿ ಹೆಸರುಗಳಿಸಿ ಮುಂಚೂಣಿಯಲ್ಲಿರುವ, ಮಹಾನಗರಗಳ ವ್ಯಾಧಿಗಳಿಂದ ದೂರವಿರುವ ಈ ಪಟ್ಟಣ ಸುಪ್ರಿಂ ಪೀಠಕ್ಕೆ ಇಡೀ ದಕ್ಷಿಣ ಭಾರತದಲ್ಲೇ ಯೋಗ್ಯ ಮತ್ತು ಕೇಂದ್ರ ಸ್ಥಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.