ಶನಿವಾರ, ಮಾರ್ಚ್ 6, 2021
20 °C
ನಗರ ಸಂಚಾರ

ನಗರಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು

ಅನಿಲ್‌ ಕುಮಾರ ಜಿ.ಸಿ. Updated:

ಅಕ್ಷರ ಗಾತ್ರ : | |

ನಗರಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು

ಮಡಿಕೇರಿ: ಮಂಜಿನ ನಗರಿ ಎಂದು ಖ್ಯಾತಿ ಪಡೆದಿರುವ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರ ಕಣ್ಗಾವಲಿನೊಂದಿಗೆ ವಿನೂತನ ಮಾದರಿಯ ಸಿಸಿಟಿವಿ ಕ್ಯಾಮೆರಾಗಳನ್ನು ₨ 19 ಲಕ್ಷ ವೆಚ್ಚದಲ್ಲಿ ಅಳವಡಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.ಹೆಚ್ಚಿನ ಜನ ಸಂದಣಿ ಇರುವ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ನಗರದೊಳಗೆ ಗಲಭೆ ಅಥವಾ ಕಾನೂನು ಬಾಹಿರ ಕೃತ್ಯಗಳಂತಹ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶವನ್ನು ಪೊಲೀಸ್‌ ಇಲಾಖೆ ಹೊಂದಿದೆ.ಮೊದಲ ಹಂತವಾಗಿ ಇಲ್ಲಿನ ಖಾಸಗಿ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ನಗರಸಭೆ ಮುಂಭಾಗ, ಇಂದಿರಾ ಗಾಂಧಿ ವೃತ್ತದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಈಗಾಗಲೇ ಅಳವಡಿಸಲಾಗಿದೆ.ಎರಡನೇ ಹಂತದಲ್ಲಿ ಸುದರ್ಶನ ವೃತ್ತ, ಜನರಲ್‌ ತಿಮ್ಮಯ್ಯ ವೃತ್ತ, ನಗರ ಪೊಲೀಸ್‌ ಠಾಣೆ, ವೆಬ್‌ ರಸ್ತೆ, ಕಾಲೇಜು ರಸ್ತೆ, ರಾಜಾಸೀಟು, ಮಾರುಕಟ್ಟೆ ಹಾಗೂ ಜಾಮಿಯಾ ಮಸೀದಿಯ ಹತ್ತಿರ ಸೇರಿದಂತೆ ಒಟ್ಟು 19 ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಲು ಪೊಲೀಸ್‌ ಇಲಾಖೆ ಚಿಂತನೆ ನಡೆಸಿದೆ. ಈ ಎಲ್ಲಾ ಕ್ಯಾಮೆರಾಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ಕಚೇರಿ ಹಾಗೂ ಕಂಟ್ರೋಲ್‌ ರೂಂನಲ್ಲಿ ನಿಯಂತ್ರಿಸುವ ವ್ಯವಸ್ಥೆ ಮಾಡಲಾಗಿದೆ.ಸಾರ್ವಜನಿಕರ ಹಿತ ಕಾಯುವ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಪ್ರಮುಖ ನಗರಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಪೊಲೀಸ್‌ ಇಲಾಖೆಗೆ ನೇರವಾಗಿ ಹಣ ಸಂದಾಯ ಮಾಡಿದ್ದು, ಮಡಿಕೇರಿ ನಗರಕ್ಕೆ ₨ 19 ಲಕ್ಷ ಬಿಡುಗಡೆ ಮಾಡಲಾಗಿದೆ.ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಿಸುವ ಸವಾರರು, ರಾತ್ರಿ ವೇಳೆ ಕಳ್ಳತನ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಕೃತ್ಯಗಳಿಗೆ ಸಿಸಿಟಿವಿಗಳು ಬ್ರೇಕ್‌ ಹಾಕಲು  ಸಹಕಾರಿಯಾಗಲಿವೆ ಎಂದು ಸಾರ್ವಜನಿಕರ ಅಭಿಪ್ರಾಯ.‘ಅಪರಾಧ ನಿಯಂತ್ರಣ’

ದುಷ್ಕೃತ್ಯಗಳನ್ನು ನಡೆಸುವ ಅಪರಾಧಿಗಳನ್ನು ಬಂಧಿಸಲು ಸಿಸಿಟಿವಿ ಕ್ಯಾಮೆರಾಗಳು ಸಹಕಾರಿಯಾಗಲಿವೆ. ಅಪರಾಧ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ಇವುಗಳಿಂದ ಸಹಾಯವಾಗಲಿದೆ.

– ಪ್ರಸನ್ನ ವಿ. ರಾಜು, ಡಿವೈಎಸ್‌ಪಿಕ್ಯಾಮೆರಾ ವಿಶೇಷತೆ

ಸಿಸಿಟಿವಿ ಕ್ಯಾಮೆರಾಗಳನ್ನು ಉತ್ಕೃಷ್ಟ ಗುಣ ಮಟ್ಟದಿಂದ ತಯಾರಿಸಲಾಗಿದ್ದು, 3 ತಿಂಗಳವರೆಗೂ ಚಿತ್ರಿಸಿದ ವಿಡಿಯೊ ಚಿತ್ರವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಎಲ್ಲ ರೀತಿಯ ವಾಹನಗಳ ನಂಬರ್‌ಗಳನ್ನು ದೂರದಿಂದಲೇ ಸೆರೆಹಿಡಿಯುವ ತಂತ್ರಜ್ಞಾನವನ್ನು ಇದಕ್ಕೆ ಅಳವಡಿಸಲಾಗಿದೆ. ದಿನದ 24 ಗಂಟೆಯೂ ನಿರಂತರವಾಗಿ ಚಿತ್ರೀಕರಣ ಕಾರ್ಯ ನಡೆಸಬಲ್ಲ ಕ್ಯಾಮೆರಾ ಇದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.