ಶುಕ್ರವಾರ, ಜೂನ್ 18, 2021
22 °C

ನಗರದಲ್ಲಿ ಇಂದು - - ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಇಂದು - - ನಾಳೆ

ಸಾಂಸ್ಕೃತಿಕ ಕಾರ್ಯಕ್ರಮಗಳು

ಸುಮಧ್ವ ಸೇವಾ ಸಮಿತಿ ಟ್ರಸ್ಟ್: ನಂ.1, ಶಾಕಾಂಬರಿ ನಗರ, ಬನಶಂಕರಿ ದೇವಸ್ಥಾನದ ಎದುರು. ಶನಿವಾರ ಹಾಗೂ ಭಾನುವಾರ ರಾಚೂರಿ ರಾಘವೇಂದ್ರಾಚಾರ್ ಅವರಿಂದ ಪ್ರವಚನ. ಸಂಜೆ 7.ಅನನ್ಯ: ನಿರಂತರ ಕಾರ್ಯಕ್ರಮದಡಿ ಶನಿವಾರ ಸಂಜೆ 6.30ಕ್ಕೆ ರಾಧಿಕಾ ಬಾಲಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಆನಂದ ವಿಶ್ವನಾಥನ್ (ವಯಲಿನ್), ಸುನಿಲ್ ಸುಬ್ರಹ್ಮಣ್ಯ (ಮೃದಂಗ).ಭಾನುವಾರ ಸಂಜೆ 6ಕ್ಕೆ ಸಂಗೀತ ಸಭಾ ಏರ್ಪಡಿಸಿದ್ದ ಗಾಯನ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ. ಬಳಿಕ ಸಿಂಧು ಸುಚೇತನ್ ಹಾಗೂ ಸ್ಮಿತಾ ಎಚ್.ಎಂ. ಅವರಿಂದ ವಯಲಿನ್ ಜುಗಲ್‌ಬಂದಿ. ಅನಿರುದ್ಧ್ ಭಟ್ (ಮೃದಂಗ), ಭಾರ್ಗವ ಹಾಲಂಬಿ (ಖಂಜರಿ).

ಸ್ಥಳ: ಅನನ್ಯ 91/2, 4ನೇ ಮುಖ್ಯರಸ್ತೆ, ಮಲ್ಲೇಶ್ವರ.ಬಿ.ಟಿ.ಎಂ. ಕಲ್ಚರಲ್ ಅಕಾಡೆಮಿ: ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ದಿ ಬ್ಲೈಂಡ್, 3ನೇ ಕ್ರಾಸ್, 3ನೇ ಹಂತ, ಜೆ.ಪಿ. ನಗರ, ರಾಗಿಗುಡ್ಡದ ಹತ್ತಿರ. ಗಾನಗೋಷ್ಠಿ, ಕೃತೀಸ್ ಮಹಿಳಾ ಸಂಗೀತ ವೃಂದದಿಂದ. ತಂಬೂರಿ-ವೃಂದಾ ಆಚಾರ್ಯ, ವಯೊಲಿನ್- ಎಚ್.ಎಮ್.ಸ್ಮಿತಾ, ಮೃದಂಗ- ಬಿ.ಆರ್. ಶ್ರೀನಿವಾಸ್, ಖಂಜಿರ- ಭಾರ್ಗವ ಹಾಲಂಬಿ. ಶನಿವಾರ ಸಂಜೆ 5.30.ಸಂಸ್ಕೃತ, ಕನ್ನಡ ಕಾವ್ಯ ಸಂಗೀತ ಸುಧೆ; ತಂಬೂರಿ- ಡಾ.ಟಿ.ಎಸ್.ಸತ್ಯವತಿ, ವಯೊಲಿನ್- ಬಿ. ರಘುರಾಮ್, ಮೃದಂಗ- ಎಚ್.ಎಸ್.ಸುಧೀಂದ್ರ, ಘಟಂ- ದಯಾನಂದ ಮೋಹಿತೆ ಭಾನುವಾರ. ಸಂಜೆ 5.30.ಸುಚಿತ್ರ: ಕಿ.ರಂ.ನುಡಿಮನೆ, ಸುಚಿತ್ರ ಸಭಾಂಗಣ, ನಂ.36, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ `ಸೃಜನಶೀಲ ದಂಪತಿ ವೈಶಿಷ್ಟ್ಯ~. ಆರ್.ಜಿ.ಹಳ್ಳಿ ನಾಗರಾಜ್-ಡಾ.ಎಚ್.ಎಲ್.ಪುಷ್ಪ ಅವರ ಬದುಕು ಬರಹ, ಕೃತಿವಾಚನ, ಸಲ್ಲಾಪ ಸಂವಾದ. ಸಂಜೆ 5.30.ಉದಯಭಾನು ಕಲಾಸಂಘ ಹಾಗೂ ಉನ್ನತ ಅಧ್ಯಯನ ಕೇಂದ್ರ: ಸಾಂಸ್ಕೃತಿಕ ಭವನ, ಸಮಿತಿ ಸಭಾಂಗಣ (ಮೊದಲ ಮಹಡಿ), ಗವಿಪುರ ಸಾಲು ಛತ್ರಗಳ ಎದುರು, ಕೆಂಪೇಗೌಡನಗರ. ತಿಂಗಳ ಚಿಂತನ ಮಾಲೆ-3. ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀರಾಮಭಟ್ಟ ಅವರಿಂದ ತಾತ್ವಿಕ ಡಿ.ವಿ.ಜಿ. ವಿಷಯದ ಬಗ್ಗೆ ಉಪನ್ಯಾಸ. ಸಂಜೆ 6.ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರ. ಕೆ.ವಿ.ಪಾರ್ವತಿ ಹಾಗೂ ತಂಡದವರಿಂದ ಗಾಯನ ಕಾರ್ಯಕ್ರಮ. ಸಂಜೆ 6.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.