ಮಂಗಳವಾರ, ಮೇ 11, 2021
27 °C
ವರ್ಷಕ್ಕೆ 3 ಸಾವಿರ ಲೀಟರ್ ರಕ್ತ ಅವಶ್ಯಕತೆ

`ನಗರದಲ್ಲಿ ರಕ್ತ ವಿಭಜನಾ ಘಟಕ ಆರಂಭ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ನಗರದ ವೈದ್ಯ ಸಮೂಹ ನಿರ್ಮಿಸಿದ ಐಎಂಎ ರಕ್ತ ಭಂಡಾರದ ನೂತನ ಕಟ್ಟಡದಲ್ಲಿ `ರಕ್ತ ವಿಭಜನಾ ಘಟಕ' ಕಾರ್ಯಾರಂಭ ಮಾಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಡಾ.ರಾಜ ಶೇಖರ ಪವಾಡಶೆಟ್ಟರ ತಿಳಿಸಿದರು.ರಕ್ತ ವಿಭಜನಾ ಘಟಕಕ್ಕೆ ಅಂದಾಜು ರೂ. 45 ಲಕ್ಷ ವೆಚ್ಚ ಮಾಡಲಾಗಿದೆ. ಶಾಸಕರು, ಸಂಸದರ ಸ್ಥಳೀಯ ಅನು ದಾನ ರೂ. 13 ಲಕ್ಷ ಹಾಗೂ ವೈದ್ಯರು, ದಾನಿಗಳು ನೀಡಿದ ಆರ್ಥಿಕ ನೆರವಿನಿಂದ ಘಟಕ ತಲೆ ಎತ್ತಿದೆ. ದಾನಿ ನೀಡಿದ ರಕ್ತವನ್ನು ಈ ಘಟಕದಲ್ಲಿ ನಾಲ್ಕು ವಿಭಾಗಗಳಾಗಿ ಬೇರ್ಪಡಿಸಿ ನಾಲ್ವರಿಗೆ ನೀಡಬಹುದು. ಒಬ್ಬ ವ್ಯಕ್ತಿ ರಕ್ತದಾನ ದಿಂದ ನಾಲ್ಕು ಮಂದಿ ಜೀವ ಉಳಿಸುವ ಸಾಧ್ಯತೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ರಾಜಶೇಖರ ಅಭಿಪ್ರಾಯಪಟ್ಟರು.ರಕ್ತ ವಿಭಜನಾ ಘಟಕದಲ್ಲಿ ರಕ್ತವನ್ನು ಕೆಂಪು ರಕ್ತ ಕಣ, ಪ್ಲೇಟ್‌ಲೇಟ್ಸ್, ಪ್ಲಾಸ್ಮಾ ಮತ್ತು ಹೆಪ್ಪುಗಟ್ಟುವ ಫ್ಯಾಕ್ಚರ್ಸ್‌ ಹೀಗೆ ನಾಲ್ಕು ವಿಭಾಗವಾಗಿ ವಿಂಗಡಿಸಬಹುದು. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಶಸ್ತ್ರಚಿಕಿತ್ಸೆಗೆ ಸಂಪೂರ್ಣ ರಕ್ತದ ಅವಶ್ಯಕತೆ ಇದೆ. ಶಸ್ತ್ರಚಿಕಿತ್ಸೆ, ರಕ್ತ ಹೀನತೆ, ರಕ್ತಸ್ರಾವ, ಅನುವಂಶಿಕ ರೋಗಗಳ ಥೆಲಿಸಿಮಿಯಾ, ಕ್ಯಾನ್ಸರ್ ರೋಗಕ್ಕೆ ಕೆಂಪು ರಕ್ತ ಕಣ, ಡೆಂಗೆ, ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಪ್ಲೇಟಲೇಟ್ಸ್, ಸುಟ್ಟಗಾಯಕ್ಕೆ ಪ್ಲಾಸ್ಮಾ ಹಾಗೂ ರಕ್ತ ಸೋರುವಿಕೆ ರೋಗಗ ಳಾದ ಹಿಮೋಫಿಲಿಯಾ ವ್ಹಾನ್ ವಿಲಿ ಬ್ರ್ಯಾಂಡ್ ಡಿಸಿಸ್‌ಗೆ ಹೆಪುಗಟ್ಟುವ ಪ್ಯಾಕ್ಚರ್ಸ್‌ ಬೇಕಾಗುತ್ತದೆ ಎಂದು ಅವರು ವಿವರಿಸಿದರು.ಯಾರು ಬೇಕಾದರೂ ಉಚಿತವಾಗಿ ರಕ್ತ ದಾನ ಮಾಡಬಹುದು. ರಕ್ತ ಪರೀಕ್ಷೆಯ ಬಳಿಕ ರೋಗಿಗೆ ಅವಶ್ಯಕತೆ ಇರುವ ರಕ್ತ ನೀಡಲಾಗುವುದು. ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ವೈದ್ಯರ ಶಿಫಾರಸ್ಸು ಪತ್ರ ಆಧರಿಸಿ ಉಚಿತವಾಗಿ ಕೊಡಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ ರಕ್ತ ಚಾಲನಾ ಪರಿಷತ್ ನಿಗದಿ ಪಡಿಸಿದ ಶುಲ್ಕ ಪಡೆದು ನೀಡಲಾಗುವುದು ಎಂದರು.ಸ್ವಯಂ ಪ್ರೇರಿತರಾಗಿ ರಕ್ತ ದಾನ ಮಾಡುವ ದಾನಿಯ ಹೆಸರು ನೋಂದಣಿ ಮಾಡಿಕೊಳ್ಳಲಾಗುವುದು. ಅಗತ್ಯ ಬಿದ್ದ ಸಂದರ್ಭದಲ್ಲಿ ದಾನಿಯ ಅವಲಂಬಿತರಿಗೆ ಉಚಿತವಾಗಿ ರಕ್ತ ನೀಡಲಾಗುವುದು. ಅತಿ ವಿರಳ ಗುಂಪಿನ ರಕ್ತ ಹೊಂದಿರುವ ವ್ಯಕ್ತಿಗಳ ದೂರ ವಾಣಿಗಳನ್ನು ಸಹ ಸಂಗ್ರಹಿಸಿ ಇಟ್ಟು ಕೊಳ್ಳಲಾಗಿದೆ ಎಂದು ನುಡಿದರು.ಪ್ರತಿ ವರ್ಷ ಜಿಲ್ಲೆಗೆ 3 ರಿಂದ 3,500 ಲೀಟರ್ ರಕ್ತದ ಬೇಡಿಕೆ ಇದೆ. ಆದರೆ ಎರಡು ಸಾವಿರ ಲೀಟರ್ ಮಾತ್ರ ಲಭ್ಯವಿದೆ. ರಕ್ತದಾನ ಕುರಿತು ಸಾರ್ವ ಜನಿಕರಿಗೆ ಜಾಗೃತಿ ಮೂಡಿಸಲು ಶಿಬಿರ ಏರ್ಪಡಿಸಲಾಗುವುದು. ರಕ್ತ ದಾನ ಮಾಡಲು ದಾನಿಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.ಸ್ಟೇಷನ್ ರಸ್ತೆಯಲ್ಲಿರುವ ಐಎಂಎ ರಕ್ತ ಭಂಡಾರದ ಮೊದಲ ಮಹಡಿ ಯಲ್ಲಿ ನಿರ್ಮಿಸಿರುವ ರಾಜ್ಯದ 79ನೇ ಘಟಕದ ಉದ್ಘಾಟನೆಯನ್ನು ಇದೇ 16ರಂದು ಬೆಳಿಗ್ಗೆ 11 ಗಂಟೆಗೆ ಸಚಿವ ಎಚ್.ಕೆ.ಪಾಟೀಲ ನೆರವೇರಿಸುವರು. ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ರಾಜ್ಯ ರಕ್ತ ಚಾಲನಾ ಪರಿಷತ್ ನಿರ್ದೇಶಕ ಮನೋಜಕುಮಾರ ತ್ರಿಪಾಠಿ, ಡಾ. ಶೇಖರ ಸಜ್ಜನರ  ಭಾಗವಹಿಸುವರು ಎಂದರು.ಗೋಷ್ಠಿಯಲ್ಲಿ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಉದಯ ಕುಲಕರ್ಣಿ, ಡಾ.ರೇಷ್ಮೆ, ಡಾ.ರಾಧಿಕ  ಕುಲಕರ್ಣಿ, ಡಾ.ಆರ್.ಎನ್.ಪಾಟೀಲ ಹಾಜರಿದ್ದರು.ಮೋದಿಗೆ ಪ್ರಧಾನಿ ಪಟ್ಟ ಬೇಡ: ಪಾಟೀಲ

ಲಕ್ಷ್ಮೇಶ್ವರ: ಕೋಮುವಾದಿ ಭಾವನೆ ಹೊಂದಿರುವ ಗುಜರಾತ್ ಮುಖ್ಯ ಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪರಮೋಚ್ಛ ನಾಯಕ ಎಂದು ಬಿಂಬಿಸಬಾರದು. ಅದಕ್ಕೆ ಬದ ಲಾಗಿ ಎಲ್.ಕೆ. ಅಡ್ವಾಣಿ ಅವರನ್ನೇ ಬಿಜೆಪಿಯ ರಾಷ್ಟ್ರೀಯ ನಾಯಕರನ್ನಾಗಿ ಮಾಡುವುದು ಸೂಕ್ತ ಎಂದು ಮಾಜಿ ಶಾಸಕ ಎಸ್.ಎನ್. ಪಾಟೀಲ ತಿಳಿಸಿದ್ದಾರೆ.ಈ ಕುರಿತು ಗುರುವಾರ ಪ್ರಜಾವಾಣಿ ಯೊಂದಿಗೆ ಮಾತನಾಡಿದ ಅವರು ಬಿಜೆಪಿ ಬೆಳೆಸುವಲ್ಲಿ ಅಡ್ವಾಣಿಯವರ ಸಾಧನೆ ನಿಜಕ್ಕೂ ಶ್ಲಾಘನೀಯ, ಯಾವುದೇ ಕೋಮಿಗೆ ಅಂಟಿ ಕೊಳ್ಳ ದಂತ ವ್ಯಕ್ತಿತ್ವವನ್ನು ಅಡ್ವಾಣಿ ಬೆಳೆಸಿ ಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.