ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಪ್ರದೇಶಗಳ ಅಭಿವೃದ್ಧಿ: 12.3 ಕೋಟಿ ಡಾಲರ್ ಎಡಿಬಿ ಸಾಲ

Last Updated 18 ಡಿಸೆಂಬರ್ 2010, 8:40 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಕರ್ನಾಟಕದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) 12.3 ಕೋಟಿ ಡಾಲರ್ ಕಡಿಮೆ ಬಡ್ಡಿ ದರದ ಸಾಲ ನೀಡಲು ಮುಂದಾಗಿದೆ. ‘ಉತ್ತರ ಕರ್ನಾಟಕ ನಗರ ಪ್ರದೇಶ ಬಂಡವಾಳ ಹೂಡಿಕೆ ಕಾರ್ಯಕ್ರಮ’ಕ್ಕೆ ಕೇಂದ್ರ ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ ಮೋಹನ್ ಮತ್ತು ಎಡಿಬಿ ನಿರ್ದೇಶಕ ಹುನ್ ಕಿಮ್ ಸಹಿ ಹಾಕಿದ್ದಾರೆ.

 ಈ ಯೋಜನೆಯಡಿ ಒಟ್ಟು 27 ಕೋಟಿ ಡಾಲರ್ ಬಂಡವಾಳ ಹೂಡಲು ಎಡಿಬಿ ಒಪ್ಪಿಕೊಂಡಿದ್ದು, ಈಗ ಎರಡನೇ ಕಂತಾಗಿ 12.3 ಕೋಟಿ ಡಾಲರ್ ನೀಡಲು ಮುಂದಾಗಿದೆ. ಮೊದಲನೇ ಕಂತಿನ ಹಣ 33 ದಶಲಕ್ಷ ಡಾಲರ್ ಹಣವನ್ನು 2008ರ ಜನವರಿಯಲ್ಲಿ ನೀಡಲಾಗಿತ್ತು. ನಗರ, ಪಟ್ಟಣ ಪ್ರದೇಶದ ಸ್ಥಳೀಯ ಸಂಸ್ಥೆಗಳಲ್ಲಿ ಪುನರ್ವಸತಿ ಮತ್ತು ಹೊಸದಾಗಿ ಮೂಲಭೂತ ಸೌಕರ್ಯ ಕಲ್ಪಿಸಲು ಈಗ ನೀಡುತ್ತಿರುವ ಎರಡನೇ ಕಂತಿನ ಸಾಲದ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
 ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ, ಕೊಳೆಗೇರಿಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಈ ಹಣದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.

ಸ್ಥಳೀಯಾಡಳಿತದ ಕಟ್ಟಡಗಳಲ್ಲದೇ ಅಗ್ನಿಶಾಮಕ ಠಾಣೆ ನಿರ್ಮಾಣ, ಜಿಲ್ಲಾ ಮಾಹಿತಿ ಕೇಂದ್ರ ಮತ್ತು ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲು ಸಹ ಈ ಹಣವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.  ಬಾದಾಮಿ, ಬಸವಕಲ್ಯಾಣ, ಬಳ್ಳಾರಿ, ಬೆಳಗಾವಿ, ಬೀದರ್, ವಿಜಾಪುರ, ಧಾರವಾಡ,  ಗದಗ-ಬೆಟ್ಟಗೇರಿ, ಗಂಗಾವತಿ, ಗೋಕಾಕ್, ಗುಲ್ಬರ್ಗ, ಹಾವೇರಿ, ಹೊಸಪೇಟೆ, ಹುಬ್ಬಳ್ಳಿ, ಜಮಖಂಡಿ, ಕೊಪ್ಪಳ, ನಿಪ್ಪಾಣಿ, ರಬಕವಿ, ಬನಹಟ್ಟಿ, ರಾಣೆಬೆನ್ನೂರು, ಶಹಾಬಾದ್, ಸಿಂಧನೂರು ಮತ್ತು ಯಾದಗಿರಿ ಮುಂತಾದ ಸ್ಥಳೀಯ ಸಂಸ್ಥೆಗಳಿಗೆ ಈ ಸಾಲದ ಪ್ರಯೋಜನ ದೊರೆಯಲಿದೆ.

ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ  ಕಾರ್ಯದರ್ಶಿ ಎಸ್.ಡಿ.ಮೀನಾ ಮತ್ತು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅರವಿಂದ ಶ್ರೀವಾಸ್ತವ ಕರ್ನಾಟಕ ಸರ್ಕಾರದ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT