ಶನಿವಾರ, ಮಾರ್ಚ್ 6, 2021
32 °C

ನಟರ ಅಂಚೆಚೀಟಿ, ಚಿತ್ರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟರ ಅಂಚೆಚೀಟಿ, ಚಿತ್ರ ಪ್ರದರ್ಶನ

ಬೆಂಗಳೂರು: ಸತ್ಯಜಿತ್‌ರೇ, ರಾಜ್‌ ಕಪೂರ್‌, ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌, ಮಧುಬಾಲ, ಮೀನಾಕುಮಾರಿ, ರಾಜೇಶ್‌ ಖನ್ನಾ  ಭಾವಚಿತ್ರಗಳಿರುವ ಮನ ಸೆಳೆಯುವ, ಅಪರೂಪದ ಅಂಚೆ ಚೀಟಿಗಳು.ಭಾರತೀಯ ಅಂಚೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯು  ಮಹಾತ್ಮ ಗಾಂಧಿ ರಸ್ತೆಯ ರಂಗೋಲಿ ಮೆಟ್ರೊ ಕಲಾಕೇಂದ್ರದಲ್ಲಿ ಶನಿವಾರದಿಂದ  ‘ಕನ್ನಡ ಚಿತ್ರರಂಗದ ಹೆಜ್ಜೆಗಳು’ ಹಾಗೂ ಭಾರತೀಯ ಚಲನಚಿತ್ರ ನೋಟದ ಅಂಚೆ ಚೀಟಿಗಳ ಪ್ರದರ್ಶನವನ್ನು ಆಯೋಜಿಸಿದೆ.ಕನ್ನಡ ಚಲನಚಿತ್ರಗಳ ಆರಂಭದ ಚಿತ್ರಗಳಿಂದ ಹಿಡಿದು ಇಂದಿನ ಚಿತ್ರಗಳವರೆಗಿನ ಸ್ಥಿರ ಚಿತ್ರಗಳ ಪ್ರದರ್ಶನವೂ ಇದೆ.

ಈ ಕುರಿತು ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಜಗನ್ನಾಥ ಪ್ರಕಾಶ್, ‘ಇಲ್ಲಿ ಒಟ್ಟು 2,000 ಅಂಚೆ ಚೀಟಿಗಳನ್ನು ಪ್ರದರ್ಶನ ಮಾಡಲಾಗಿದೆ. ಇದರಲ್ಲಿ ಭಾರತದ 115 ಅಂಚೆ ಚೀಟಿಗಳು ಪ್ರದರ್ಶನದಲ್ಲಿವೆ. ಅವುಗಳಲ್ಲಿ ವಿಶೇಷವಾಗಿ ಕನ್ನಡದ ಡಾ.ರಾಜ್‌­ಕುಮಾರ್‌ ಮತ್ತು ವಿಷ್ಣುವರ್ಧನ್‌ ಅವರ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಗಿದೆ’ ಎಂದರು.‘ಹೊರದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ನಟಿ ಐಶ್ವರ್ಯ, ಕಾಜೋಲ್‌, ಶಾರುಖ್‌ ಇವರ ಅಂಚೆ ಚೀಟಿ ಹಾಗೂ ವಿಶ್ವದಲ್ಲಿಯೇ ಜನಪ್ರಿಯವಾಗಿರುವ ಚಾರ್ಲಿ ಚಾಪ್ಲಿನ್‌, ಮರ್ಲಿನ್‌ ಮನ್ರೋ ಅಂಚೆ ಚೀಟಿಗಳಿವೆ’ ಎಂದು ಹೇಳಿದರು.‘ಒಟ್ಟು 150 ಸಿನಿಮಾದ ಛಾಯಾಚಿತ್ರಗಳಿವೆ. 1934 ರಿಂದ ಆರಂಭವಾಗಿ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಟಿಸಿದ ಆರಂಭದ ಕನ್ನಡ ಸಿನಿಮಾಗಳಾದ ಸತಿ ಸುಲೋಚನ, ಭಕ್ತ ಧ್ರುವದಿಂದ ಹಿಡಿದು ಭಕ್ತ ಪ್ಲಹ್ಲಾದ,  ಸಂಸಾರ ನೌಕೆ, ಸತ್ಯ ಹರಿಶ್ಚಂದ್ರ, ಗಂಧದ ಗುಡಿ, ಸಂಸ್ಕಾರ, ಜನುಮದ ಜೋಡಿ ಈ ವರ್ಷ ಬಿಡುಗಡೆಯಾದ ಲೂಸಿಯಾ ಚಲನಚಿತ್ರಗಳ ಛಾಯಾಚಿತ್ರ ಪ್ರದರ್ಶನವಿದೆ’ ಎಂದು ತಿಳಿಸಿದರು. ಪ್ರದರ್ಶನವು ಮಾರ್ಚ್‌ 3 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಇರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.