ಬುಧವಾರ, ಜನವರಿ 29, 2020
29 °C

ನಟ ಅರ್ಮಾನ್‌ ಕೊಹ್ಲಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬಯಿ(ಪಿಟಿಐ): ಪಾಕಿಸ್ತಾನಿ ಮೂಲದ ಬ್ರಿಟಿಷ್‌ ನಟಿ ಸೋಫಿಯಾ ಹಯಾತ್‌ ಮೇಲೆ ಹಲ್ಲೆಗೆ ಸಂಬಂಧಿಸಿ­ದಂತೆ ಬಿಗ್‌ಬಾಸ್‌ ಸ್ಪರ್ಧಿ, ನಟ ಅರ್ಮಾನ್‌ ಕೊಹ್ಲಿ­ಯನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.ರಿಯಾಲಿಟಿ ಷೋ ಬಿಗ್‌ಬಾಸ್‌ ಸ್‍ಪರ್ಧೆ­ಗಾಗಿ ಲೋನವಾಲದಲ್ಲಿರುವ ಬಂಗಲೆ­ಯಲ್ಲಿ ವಾಸ್ತವ್ಯವಿದ್ದಾಗ ತನ್ನ ಮೇಲೆ ಅರ್ಮಾನ್‌ ಹಲ್ಲೆ ನಡೆಸಿದ್ದಾ­ರೆಂದು ಸೋಫಿಯಾ ಹಯಾತ್‌ ಡಿ.11ರಂದು  ಸಾಂತಾಕ್ರೂಸ್‌ ಪೊಲೀಸ್‌ ಠಾಣೆ­ಯಲ್ಲಿ ದೂರು ನೀಡಿದ್ದರು. ಹೀಗಾಗಿ ಅರ್ಮಾನ್‌ರನ್ನು ಲೋನ­ವಾಲಾ ಬಿಗ್‌ಬಾಸ್‌ ಬಂಗಲೆಯಿಂದಲೇ ನಗರ ಪೊಲೀಸರು ಬಂಧಿಸಿದ್ದು, ಜಾಮೀನಿನ ಮೇಲೆ ಅವರು ಬಿಡುಗಡೆ ಆಗಿದ್ದಾರೆ.  ಬಿಗ್‌ಬಾಸ್‌ ಮನೆಯನ್ನು ಮತ್ತೆ ಸೇರಿದ್ದಾರೆ.ಅರ್ಮಾನ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದಕ್ಕೆ ನಟಿ ಸೋಫಿಯಾ ಹಯಾತ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)