ಚನ್ನಗಿರಿ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕಳೆದ ಒಂದು ವರ್ಷದ ಹಿಂದೆ ಪ್ರಾರಂಭಗೊಂಡ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ!

ಸಮರ್ಪಕ ಶೌಚಾಲಯವೇ ಇಲ್ಲದೇ ಇರುವುದರಿಂದ ಕ್ರೀಡಾಪಟುಗಳು ನೈಸರ್ಗಿಕ ಕರೆಗೆ, ಬಯಲಿನತ್ತ ಮುಖ ಮಾಡುವಂತಾಗಿದೆ.
ಯುವಜನ ಸೇವೆ ಮತ್ತು ಕ್ರೀಡೆ ಇಲಾಖೆ ವತಿಯಿಂದ ₨ 2.5 ಕೋಟಿ ವೆಚ್ಚದಲ್ಲಿ ತಾಲ್ಲೂಕು ಕ್ರೀಡಾಂಗಣವನ್ನು ಕಳೆದ ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ ಶೌಚಾಲಯ ಮಾತ್ರ ನಿರ್ಮಾಣವಾಗಿರಲಿಲ್ಲ.

ನಂತರ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಪಟ್ಟಣ ಪಂಚಾಯ್ತಿಯ ಬಿಆರ್ಜಿಎಫ್ ಯೋಜನೆ ಅಡಿ ₨ 11.14 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಶೌಚಾಲಯ ನಿರ್ಮಾಣದ ಗುತ್ತಿಗೆಯನ್ನು ಭೂ ಸೇನಾ ನಿಗಮದವರು ಪಡೆದುಕೊಂಡಿದ್ದರು.

ಆದರೆ ನಿಗದಿತ ಅವಧಿಯೊಳಗೆ ಈ ಶೌಚಾಲಯ ಕಾಮಗಾರಿಯನ್ನು ಮುಕ್ತಾ ಯ ಗೊಳಿಸದೇ ಇರುವುದರಿಂದ ಕ್ರೀಡಾಪಟುಗಳಿಗೆ ತೀವ್ರ ತೊಂದರೆ ಯಾಗಿದೆ.

ಸಂಬಂಧಪಟ್ಟ ಇಲಾಖೆಯವರು ಆದಷ್ಟು ಶೀಘ್ರದಲ್ಲಿಯೇ ಕಾಮಗಾರಿ ಯನ್ನು ಮುಕ್ತಾಯಗೊಳಿಸಿ ಕ್ರೀಡಾಪಟು ಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆನ್ನುತ್ತಾರೆ ಕ್ರೀಡಾಪಟುಗಳಾದ ರಾಕೇಶ್.

ಬೇರೆ ಕಾಮಗಾರಿಯಲ್ಲಿ ನಿರತ ವಾಗಿದ್ದರಿಂದ ಈ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿತ್ತು. ಇನ್ನು ಹದಿನೈದು ದಿನಗಳಲ್ಲಿ ಈ ಶೌಚಾಲಯ ಕಾಮಗಾರಿ ಮುಕ್ತಾಯ ಗೊಳಿಸಲು ಅಗತ್ಯವಾದ ಕ್ರಮ ಕೈಗೊಳ್ಳ ಲಾಗುವುದು ಎಂದು ಭೂ ಸೇನಾ ನಿಗಮದ ಎಇಇ ಬಸವನಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.