ಬೆಂಗಳೂರು: `ರಾಜ್ಯವನ್ನು ಹಗರಣ, ಭ್ರಷ್ಟಾಚಾರಗಳಿಂದ ಮುಕ್ತಗೊಳಿಸಿ, ಉತ್ತಮ ಆಡಳಿತ ನೀಡಿದ್ದಕ್ಕೆ ನಾಯಕತ್ವ ಬದಲಾವಣೆಯೇ? ನನ್ನಿಂದ ಅಂತಹ ಪ್ರಮಾದ ಏನಾಗಿದೆ?~

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮಂಗಳವಾರ ಸಂಜೆ ತಮ್ಮ ನಿವಾಸದಲ್ಲಿ ಆಪ್ತರ ಎದುರು ಈ ಪ್ರಶ್ನೆಗಳನ್ನು ಇಟ್ಟಿದ್ದಾರೆ. `ನಾಯಕತ್ವ ಬದಲಾವಣೆಗೆ ವರಿಷ್ಠರು ಒಲವು ತೋರಿದರೆ ಅವರ ಮುಂದೆಯೂ ಇದೇ ಪ್ರಶ್ನೆ ಇಡುತ್ತೇನೆ~ ಎಂದು ಅವರು ಬೇಸರದಿಂದ ನುಡಿದಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ ಎಂಬ ಭಾವನೆ ಪಕ್ಷದ ವಲಯದಲ್ಲಿ ಮೂಡಿದೆ. ಇದರಿಂದ ರಾಜಕೀಯ ಚಟುವಟಿಕೆಗಳೂ ಗರಿಗೆದರಿವೆ. ಇದೇ ಕಾರಣಕ್ಕೆ ಮುಖ್ಯಮಂತ್ರಿಯವರು ತಮಗೆ ಆಪ್ತರಾಗಿರುವ ಕೆಲವು ಸಚಿವರು ಮತ್ತು ಶಾಸಕರನ್ನು ಮನೆಗೆ ಕರೆಸಿಕೊಂಡು ಮಾತನಾಡಿದ್ದಾರೆ.

`ಬಿ.ಎಸ್.ಯಡಿಯೂರಪ್ಪ ಬಣದ ಅಸಹಕಾರದ ನಡುವೆಯೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇನೆ. ಸಕಾಲ ಅಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. 20 ಖಾತೆಗಳನ್ನು ನಿಭಾಯಿಸಿದ್ದೇನೆ. ಎಲ್ಲೂ ಲೋಪವಾಗಿಲ್ಲ. ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಇದಕ್ಕಿಂತ ಉತ್ತಮ ಸಾಧನೆ ಏನು ಬೇಕು~ ಎಂದು ಮನದಾಳದ ಮಾತುಗಳನ್ನು ಸದಾನಂದ ಗೌಡ ಅವರು ಆಪ್ತರ ಬಳಿ ತೋಡಿಕೊಂಡಿದ್ದಾರೆ.

`ಮುಖ್ಯಮಂತ್ರಿ ಸ್ಥಾನದಿಂದ ನನ್ನನ್ನು ಇಳಿಸಲೇಬೇಕು ಎಂದು ಒಂದು ವೇಳೆ ತೀರ್ಮಾನ ಕೈಗೊಂಡರೆ, ನನ್ನನ್ನು ಆಯ್ಕೆ ಮಾಡಿದ ರೀತಿಯಲ್ಲೇ ಹೊಸ ನಾಯಕನ ಆಯ್ಕೆ (ಚುನಾವಣೆ) ಆಗಬೇಕು. ಇದಕ್ಕೆ ಪಟ್ಟುಹಿಡಿಯುವುದು ಗ್ಯಾರಂಟಿ~ ಎಂದೂ ಹೇಳಿಕೊಂಡಿದ್ದಾರೆ.

`ನಾಯಕತ್ವ ಬದಲಾವಣೆ ಕುರಿತು ಪಕ್ಷದ ಯಾರೊಬ್ಬರೂ ನನ್ನ ಜತೆ ಮಾತನಾಡಿಲ್ಲ. ಅಧಿಕಾರದಲ್ಲಿ ಮುಂದುವರಿಯುವ ವಿಶ್ವಾಸ ನನಗಿದೆ. ನಾಯಕತ್ವ ಬದಲಾವಣೆಗೆ ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಸದಾನಂದಗೌಡರಿಂದ ಚುನಾವಣೆಗೆ ದುಡ್ಡು ಹೊಂದಿಸಲು ಸಾಧ್ಯ ಇಲ್ಲ ಎಂಬ ಕಾರಣವನ್ನು ಮುಂದಿಟ್ಟು ಅವರು ಈ ಆಗ್ರಹ ಮಾಡಿದ್ದಾರೆ. ಇದು ಯಾವ ತರ್ಕ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ನನ್ನ ಅವಧಿಯಲ್ಲಿ ಕಾನೂನು ಉಲ್ಲಂಘಿಸಿ ಒಂದೇ ಒಂದು ಕೆಲಸ ಮಾಡಿಲ್ಲ. ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಲ್ಲ. ನಾನು ಗುಂಪುಗಾರಿಕೆಯಿಂದಲೂ ದೂರ.

ಕುರ್ಚಿ ಉಳಿಸಿಕೊಳ್ಳಲು ಮುಂದೆಯೂ ಯಾರ ಬಳಿಗೂ ಹೋಗಿ ಲಾಬಿ ನಡೆಸುವುದಿಲ್ಲ. ಅದು ನನ್ನ ಜಾಯಮಾನಕ್ಕೆ ಒಗ್ಗುವುದಿಲ್ಲ~ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೋಮವಾರ ರಾತ್ರಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, `ನಿಮ್ಮನ್ನು ಅಧಿಕಾರದಲ್ಲಿ ಉಳಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ. ಒಂದು ವೇಳೆ ಪಕ್ಷದ ಹೈಕಮಾಂಡ್ ನಾಯಕತ್ವ ಬದಲಾಗಬೇಕು ಎಂದು ಬಯಸಿದರೆ ನೀವೆಲ್ಲ ನನ್ನ ಪರ ನಿಲ್ಲಬೇಕು ಎಂದು ಕೇಳಿದ್ದಾರೆ~ ಎಂದು ಮೂಲಗಳು ತಿಳಿಸಿವೆ.

ಜಿಂದಾಲ್ನಿಂದ ಮನೆಗೆ: ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಮೂರು ದಿನಗಳಿಂದ ವಿಶ್ರಾಂತಿ ಪಡೆದ ಯಡಿಯೂರಪ್ಪ ಅವರು ಮಂಗಳವಾರ ಸಂಜೆ ಡಾಲರ್ಸ್ ಕಾಲೊನಿ ಮನೆಗೆ ವಾಪಸಾದರು. ಬಳಿಕ ಅವರನ್ನು ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಮತ್ತು ಎಂ.ಪಿ.ರೇಣುಕಾಚಾರ್ಯ ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಇದೇ 28ರ ಬದಲಿಗೆ, 29ರ ಬೆಳಿಗ್ಗೆ ನಗರಕ್ಕೆ ಬರುತ್ತಿದ್ದಾರೆ. ಅಂದು ಹೆಚ್ಚಿನ ಸಂಖ್ಯೆಯ ಶಾಸಕರನ್ನು ಸೇರಿಸುವ ಕುರಿತೂ ಚರ್ಚೆ ನಡೆದಿದೆ. ಪ್ರಧಾನ್ ಅವರನ್ನು ಭೇಟಿ ಮಾಡಿ ಶಾಸಕರು ತಮ್ಮ ಅಭಿಪ್ರಾಯ ತಿಳಿಸುವ ಹಾಗೆ ವ್ಯವಸ್ಥೆ ಮಾಡಬೇಕು ಎಂದು ಯಡಿಯೂರಪ್ಪ ಬಣ ತೀರ್ಮಾನಿಸಿದೆ.

ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಒಕ್ಕಲಿಗ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗಬಹುದು. ಇದನ್ನು ತಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಯಡಿಯೂರಪ್ಪ ಬಣ ಚರ್ಚಿಸಿದೆ. ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿ, ಉಪಮುಖ್ಯಮಂತ್ರಿಯಾಗಿ ಒಕ್ಕಲಿಗ ಮುಖಂಡರೊಬ್ಬರನ್ನು ನೇಮಿಸುವ ಕುರಿತೂ ಚರ್ಚಿಸಲಾಯಿತು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.