ಭಾನುವಾರ, ಜೂನ್ 13, 2021
25 °C

ನರ್ಗಿಸ್‌ ಫಕ್ರಿ ಸ್ವಂತ ಬಿಕಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಂದಾಸ್‌ ನಟನೆಯಿಂದ ಹದಿಹರೆಯಗಳಿಗೆ ಕಿಚ್ಚು ಹಚ್ಚಿರುವ ಬಾಲಿವುಡ್‌ ನಟಿ ನರ್ಗಿಸ್‌ ಫಕ್ರಿ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿರುವ ‘ಮೈ ತೇರಾ ಹೀರೊ’ ಚಿತ್ರದಲ್ಲಿ ಬಿಕಿನಿ ತೊಟ್ಟಿದ್ದಾರೆ.ಆದರೆ ಈ ಬಿಕಿನಿ ಅವರದೇ ವಾರ್ಡ್‌ರೋಬ್‌ ಸಂಗ್ರಹದಿಂದ ಖುದ್ದು ಅವರೇ ಆರಿಸಿಕೊಂಡಿದ್ದು ಅನ್ನೋದು ಸುದ್ದಿ.ಈ ಚಿತ್ರದ ಒಂದು ಹಾಡಿಗೆ ಬಿಕಿನಿ ತೊಡಬೇಕಾಗುತ್ತದೆ ಎಂದು ತಿಳಿದಾಗ ಅವರು ಆನಂದತುಂದಿಲರಾದರಂತೆ. ಮಾತ್ರವಲ್ಲ, ತಾವು ಇತ್ತೀಚಿಗಷ್ಟೇ ಖರೀದಿಸಿದ ನೇರಳೆ ಬಣ್ಣದ ಬಿಕಿನಿಯನ್ನೇ ತೊಡುವುದಾಗಿ ಒತ್ತಾಯಿಸಿದರಂತೆ. ಇಷ್ಟು ಸಾಲದು ಎಂಬಂತೆ ಚಿತ್ರದ ಸ್ಟೈಲಿಸ್ಟ್‌ ವಿಭಾಗದವರನ್ನೂ ಕರೆದು ತಮ್ಮ ಬಿಕಿನಿಯನ್ನು ತೋರಿಸಿ ಇದು ಹೇಗಿದೆ ನೋಡಿ ಎಂದು ಕೇಳಿಯೇಬಿಟ್ಟರಂತೆ. ಅವರೂ ಪ್ರತ್ಯಕ್ಷ ಕಂಡ ಮೇಲೆ ಓಕೆ ಅಂದರಂತೆ.ಮೈಚಳಿ ಬಿಟ್ಟು ನಟಿಸಿ ‘ರಾಕ್‌ಸ್ಟಾರ್‌’ ಎಂದೇ ಕರೆಸಿಕೊಳ್ಳುತ್ತಿರುವ ನರ್ಗಿಸ್‌ ಅಂತೂ ಇಂತೂ ಬಿಕಿನಿಯಲ್ಲಿ ಪ್ರೇಕ್ಷಕರಲ್ಲಿ ಕಾವೇರಿಸಲಿದ್ದಾರೆ. ಏಪ್ರಿಲ್‌ 4ರಂದು ಈ ಚಿತ್ರ ತೆರೆಕಾಣಲಿದೆ.    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.