ಕಾರವಾರ: ಒಂದು ವರ್ಷದಲ್ಲಿ ಆಗದಿರುವ ಕೆಲವಸನ್ನು ಒಂದೇ ವಾರದಲ್ಲಿ ಪೂರ್ಣಗೊಳಿಸಲು ಸಾಧ್ಯವೇ? ಇದು ಅಸಾಧ್ಯದ ಮಾತು. ಆದರೆ, ಇಲ್ಲಿಯ ನಗರಸಭೆ ಇಂತಹದೊಂದು ಸಂದಿಗ್ಧತೆಯಲ್ಲಿ ಸಿಲುಕಿದೆ. ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಒಂದು ವರ್ಷದಿಂದ ಸುಮ್ಮನಿದ್ದು ಏನು? ಎತ್ತ? ಎಂದು ಕೇಳದ ಅಧಿಕಾರಿಗಳಿಗೆ ದಿಢೀರ್ ಜ್ಞಾನೋದಯವಾಗಿದ್ದು ಹತ್ತು ದಿನ, ಒಂದು ವಾರದಲ್ಲಿ ನಳದ ಸಂಪರ್ಕ ಕೊಡಬೇಕು ಎಂದು ನಗರಸಭೆಗೆ ಗಂಟು ಬಿದ್ದಿದ್ದಾರೆ.

ಎರಡು ತಿಂಗಳ ಹಿಂದೆ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಡಾ. ಉದಯಕುಮಾರ ಶೆಟ್ಟಿ ನಗರದಲ್ಲಿ ಕುಡಿಯುವ ನೀರಿನ ಸಂಪರ್ಕದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕೇವಲ 900 ಸಂಪರ್ಕ ಮಾತ್ರ ಇದೆ ಎನ್ನುವುದನ್ನು ನೋಡಿ ಆಶ್ಚರ್ಯಪಟ್ಟರು. ತಕ್ಷಣ ಜಲ ಮಂಡಳಿ ಅಧಿಕಾರಿಗಳನ್ನು ಸಂಪರ್ಕ ಮಾಡಿ ವಿವರ ಪಡೆದರು.

ನಗರವಾಸಿಗಳು ನಳದ ಸಂಪರ್ಕ ಪಡೆಯಲು ವಿರೋಧ ಮಾಡುತ್ತಿದ್ದಾರೆ ಎನ್ನುವುದನ್ನು ಅರಿತು ಶುದ್ಧ ನೀರಿನ ಮಹತ್ವ ತಿಳಿಸಲು ನಗರಸಭೆ ಜನಪ್ರತಿನಿಧಿಗಳನ್ನು ಅಂಕೋಲಾ ತಾಲ್ಲೂಕಿನ ಅಗಸೂರಿನಲ್ಲಿರುವ ಜಾಕ್ವೆಲ್ ಮತ್ತು ನಗರದ ಹೈಚರ್ಚ್ನಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಕರೆದುಕೊಂಡು ಹೋಗಿ ನೀರು ಶುದ್ಧಿಕರಿಸುವ ವಿಧಾನ ಮತ್ತು ಬಾವಿ, ನೀರಿಗೂ ಶುದ್ಧೀಕರಿಸಿದ ನೀರಿಗೂ ಇರುವ ವ್ಯತ್ಯಾಸ ತಿಳಿಸಿದರು.

ಒಟ್ಟು 11 ಸಾವಿರ ನಳದ ಸಂಪರ್ಕ ಕೊಡಲು ಜಲಮಂಡಳಿ ನಗರದಲ್ಲಿ ಅಂದಾಜು 130 ಕಿಲೋ ಮೀಟರ್ ಪೈಪ್ಲೈನ್ ಅಳವಡಿಸಿದೆ. ಇಷ್ಟು ದೊಡ್ಡ ಪ್ರಮಾಣದ ಸಂಪರ್ಕವನ್ನು ಬೆರಳೆಣಿಕೆಯಷ್ಟು ದಿನಗಳಲ್ಲಿ ಕಲ್ಪಿಸಲು ಹೇಗೆ ಸಾಧ್ಯ.

ಇದು ಅಸಾಧ್ಯವೆಂದು ಗೊತ್ತಿದ್ದರೂ ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿಕೋಶದ ಕೆಲ ಹಿರಿಯ ಅಧಿಕಾರಿಗಳು ನಳದ ಸಂಪರ್ಕ ಕೊಡುವ ಬಗ್ಗೆ ಜನಪ್ರತಿನಿಧಿಗಳಿಗೆ ಅವೈಜ್ಞಾನಿಕ ಸಲಹೆಗಳನ್ನು ನೀಡುತ್ತಿರುವುದರಿಂದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಿರಿಕಿರಿ ಅನುಭವಿಸುವಂತಾಗಿದೆ.

ಸಚಿವರ ಸಭೆ: ನಳದ ಸಂಪರ್ಕ ಕಲ್ಪಿಸುವುದಕ್ಕೆ ಸಂಬಂಧಪಟ್ಟಂತೆ ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ ಅವರು ಪೌರಾಯುಕ್ತ, ಜಲ ಮಂಡಳಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ನಗರಸಭೆ ಸದಸ್ಯರೊಂದಿಗೆ ಗುರುವಾರ ಸುದೀರ್ಘ ಚರ್ಚೆ ನಡೆಸಿದರು.

ಬೇಸಿಗೆ ಪ್ರಾರಂಭವಾಗಿದ್ದು ನಳದ ಸಂಪರ್ಕ ಕಲ್ಪಿಸುವಂತೆ ಜನರಿಂದ ಒತ್ತಾಯ ಕೇಳಿ ಬರುತ್ತಿದ್ದು ಆದಷ್ಟು ಬೇಗ ಯೋಜನೆಯೊಂದನ್ನು ಸಿದ್ಧಪಡಿಸಿ ಕಾರ್ಯಗತಗೊಳಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಆದೇಶ ನೀಡಿದರು.

ನಗರಸಭೆ ಉಪಾಧ್ಯಕ್ಷೆ ನಯನಾ ಮಾಳ್ಸೇಕರ್, ಸದಸ್ಯ ದೇವಿದಾಸ ನಾಯ್ಕ, ಮಾಲಾ ಹುಲಸ್ವಾರ, ಮಹೇಶ ಥಾಮಸೆ, ರಂಜು ಮಾಸೇಲಕರ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.