ಬುಧವಾರ, ಜುಲೈ 28, 2021
21 °C

ನವಜಾತ ಹೆಣ್ಣು ಶಿಶು ಜೀವಂತ ಸಮಾಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೀತಾಪುರ (ಉ.ಪ್ರದೇಶ) (ಪಿಟಿಐ): ಹುಟ್ಟಿದ ಮಗು ಹೆಣ್ಣು ಎಂಬ ಕಾರಣಕ್ಕೆ ಕುಟುಂಬದ ಸದಸ್ಯರು ನವಜಾತ ಶಿಶುವನ್ನು ಸಜೀವವಾಗಿ ಸಮಾಧಿ ಮಾಡಿದ ದಾರುಣ ಘಟನೆ ಖೈರಾಬಾದ್ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರ್ದೊಯಿ ನಿವಾಸಿ ಸಂಗೀತ ಎಂಬ ಮಹಿಳೆ ಮೇ ಒಂದರಂದು ಖೈರಾಬಾದ್‌ನ ಆಸ್ಪತ್ರೆಯೊಂದರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅದರಲ್ಲಿ ಒಂದು ಗಂಡು ಹಾಗೂ ಇನ್ನೊಂದು ಹೆಣ್ಣು ಮಗುವಾಗಿತ್ತು. ಗಂಡು ಶಿಶು ನಿಶ್ಶಕ್ತಿಯಿಂದ ಬಳಲುತ್ತಿದ್ದುದರಿಂದ ಹುಟ್ಟಿದ ಕೂಡಲೇ ಸತ್ತು ಹೋಗಿತ್ತು. ಆದರೆ ಹೆಣ್ಣು ಮಗು ಆರೋಗ್ಯದಿಂದ ಇತ್ತು.

ಎರಡೂ ಶಿಶುಗಳನ್ನು ವೈದ್ಯರು ಕುಟುಂಬದ ಸದಸ್ಯರಿಗೆ ನೀಡಿದ ಬಳಿಕ, ಸಮೀಪದ ಸ್ಮಶಾನದಲ್ಲಿ ಸತ್ತ ಶಿಶುವೊಂದಿಗೆ ಹೆಣ್ಣು ಶಿಶುವನ್ನೂ ಅವರು ಹೂತಿದ್ದರು.ಸ್ಮಶಾನದ ಸಮೀಪದಲ್ಲೇ ಇದ್ದ ಟ್ಯಾಕ್ಸಿ ಚಾಲಕನೊಬ್ಬ ಶಿಶುಗಳನ್ನು ಹೂಳುತ್ತಿದ್ದುದನ್ನು ನೋಡಿದ್ದ.

ಸಂಶಯಗೊಂಡ ಆತ ಕುಟುಂಬ ಸದಸ್ಯರು ತೆರಳಿದ ಕೂಡಲೇ ಶಿಶುಗಳನ್ನು ಹೂತಿದ್ದ ಹೊಂಡವನ್ನು ಮತ್ತೆ ಅಗೆದು, ಹೆಣ್ಣು ಶಿಶು ರಕ್ಷಿಸಿ, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದ. ಚಿಕಿತ್ಸೆಗೆ ಸ್ಪಂದಿಸದ ಶಿಶು ಮಂಗಳವಾರ ಬೆಳಿಗ್ಗೆ ಮೃತಪಟ್ಟಿತು ಎಂದು  ತಿಳಿಸಿದ್ದಾರೆ.ಈ ಪ್ರಕರಣದ ಸಂಬಂಧ ಮಹಿಳೆಯ ತಂದೆಯನ್ನು ಬಂಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.