ಎಚ್.ಡಿ.ಕೋಟೆ: ಎಚ್.ಡಿ. ಕೋಟೆ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಗಸನಹುಂಡಿ ಅರಣ್ಯ ವಲಯದ ಸುಡುಗುಣಿ ಕಟ್ಟೆ ಸಮೀಪ ಗಂಡಾನೆಯೊಂದು ಶುಕ್ರವಾರ ಮೃತಪಟ್ಟಿದೆ.

ರಾಷ್ಟ್ರೀಯ ಉದ್ಯಾನದ ಸುಡುಗುಣಿ ಕಟ್ಟೆಯ ಬಳಿ ಶುಕ್ರವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ನೀರು ಕುಡಿದ ಆನೆ ಸ್ವಲ್ಪ ಸಮಯದ ನಂತರ ಕಿರುಚಾಡಿ ಮೃತಪಟ್ಟಿತು. ಇದನ್ನು ಈ ಕಟ್ಟೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದವರು ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು.

ಸ್ಥಳಕ್ಕೆ ಎ.ಸಿ.ಎಫ್. ತಮ್ಮಯ್ಯ, ಆರ್.ಎಫ್.ಓ. ಪ್ರವೀಣ್ ಕುಮಾರ್, ವನಪಾಲಕರಾದ ಮಲೇಗೌಡ, ಸೋಮರಾಧ್ಯ, ವಿನೋದ್ ಭೇಟಿ ನೀಡಿದ್ದರು. ಡಾ. ವೆಂಕಟರಾಮು ಅವರು ಆನೆಯ ಶವ ಪರೀಕ್ಷೆ ನಡೆಸಿದರು. ಆನೆಗೆ ಸುಮಾರು 60 ರಿಂದ 70 ವರ್ಷ ವಯಸ್ಸಾಗಿರುವುದರಿಂದ ಸಹಜವಾಗಿ ಮೃತ ಪಟ್ಟಿದೆ ಎಂದು ಅವರು ತಿಳಿಸಿದರು. ಆನೆಯ ಭಾರೀ ಗಾತ್ರದ ದಂತವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಮರಣೋತ್ತರ ಪರೀಕ್ಷೆ ನಂತರ ಶವ ಸಂಸ್ಕಾರ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.