ದೇಶದಲ್ಲಿ ಮೂರು ಲಕ್ಷ ಜನರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಉದ್ಯೋಗ ಅಥವಾ ಸರ್ಕಾರದ ಬೇರೆ ಲಾಭಗಳನ್ನು ಗಿಟ್ಟಿಸಿರುವ ಸುದ್ದಿ ದಿಗ್ಭ್ರಮೆ ಹುಟ್ಟಿಸುವಂಥದ್ದು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭ್ರಷ್ಟಾಚಾರದ ಮತ್ತೊಂದು ರೂಪ ಇದು.

ಪರಿಶಿಷ್ಟ ಮತ್ತು ದುರ್ಬಲ ವರ್ಗದ ಜನರಿಗಾಗಿ ಸಂವಿಧಾನಾತ್ಮಕವಾಗಿ ರೂಪಿಸಲಾಗಿರುವ ಮೀಸಲಾತಿಯನ್ನು ಸವರ್ಣೀಯರು ಮತ್ತು ಮೇಲ್ವರ್ಗದವರು ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟು ಕಬಳಿಸಿದರೆ ಮೀಸಲಾತಿಯ ಅರ್ಥವೇ ಕಳೆದುಹೋಗಿ ದುರ್ಬಲರು ಎಂದೂ ಮೇಲೆ ಬರಲು ಸಾಧ್ಯವಾಗುವುದಿಲ್ಲ.

ಲಂಚ ಕೊಟ್ಟು ಪ್ರಮಾಣಪತ್ರ ಪಡೆಯುವುದು ಕಷ್ಟವೇನಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದರಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿರಲೇಬೇಕು. ರಾಜ್ಯದಲ್ಲಿ 25 ಸಾವಿರ ಜನರು ಈ ರೀತಿ ಸುಳ್ಳು ಜಾತಿ ಪತ್ರದ ಆಧಾರದ ಮೇಲೆ ಉದ್ಯೋಗ ಗಿಟ್ಟಿಸಿದ್ದು, ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನ್ಯಾಯಾಲಯ ಆದೇಶಿಸಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಹೇಳಿರುವುದು ವ್ಯವಸ್ಥೆಯ ವಿಡಂಬನೆ.

ಭಾಷಣ ಮಾಡುವ ಬದಲು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಸಚಿವರೇ ಪ್ರಯತ್ನಿಸಬೇಕು. ಇದು ಹೀಗೆಯೇ ಬೆಳೆಯುತ್ತ ಹೋದರೆ, ಮುಂದೊಂದು ದಿನ ದುರ್ಬಲರು ಬೀದಿಗಿಳಿದರೆ, ಹಕ್ಕಿನ ಹೋರಾಟ ಹಿಂಸೆಗೆ ತಿರುಗಬಹುದು.

ನೂರಾರು ವರ್ಷಗಳಿಂದ ಜಾತಿ ವ್ಯವಸ್ಥೆಯ ನೋವಿನಲ್ಲಿ ನರಳಿದ ಪರಿಶಿಷ್ಟ ಮತ್ತು ದುರ್ಬಲ ವರ್ಗಗಳ ಜನರು, ಸ್ವಾತಂತ್ರ್ಯದ ನಂತರ ಸಂವಿಧಾನದ ಮೂಲಕ ದೊರೆತ ಸೌಲಭ್ಯಗಳಿಂದ ವಂಚಿತರಾಗುವುದು ಸಾಮಾಜಿಕ ನ್ಯಾಯಕ್ಕೆ ಮಾಡಿದ ಅಪಚಾರ.

ದೇಶದ ಪ್ರತಿಯೊಂದು ಹಳ್ಳಿಯಲ್ಲಿ ಇನ್ನೂ ಅಸ್ಪೃಶ್ಯತೆ ಇದೆ ಎಂಬುದೂ ನಾಚಿಕೆಗೇಡಿನ ವಿಷಯ. ಈ ವಿಷಯದಲ್ಲಿ ಬಲವಾದ ಕಾನೂನು ಇದ್ದರೂ ಯಾರೂ ಏನೂ ಮಾಡುತ್ತಿಲ್ಲ ಎಂದರೆ ತಪ್ಪಿತಸ್ಥರಿಗೆ ರಾಜಕೀಯ ಬೆಂಬಲ ಇದೆ ಎಂಬ ಅರ್ಥ ಬರುತ್ತದೆ. ಇದರಿಂದ ಸಮಾಜ ಒಡೆಯುತ್ತಲೇ ಹೋಗುತ್ತದೆ ಎಂಬ ಅರಿವು ಇವರ್ಯಾರಿಗೂ ಇದ್ದಂತಿಲ್ಲ.

ಮೈಸೂರು ಜಿಲ್ಲೆಯ ಕಾಡು ಕುರುಬ ಜನಾಂಗದವರಿಗೆ, ಅರಣ್ಯ ಕಾಯ್ದೆಅಡಿಯಲ್ಲಿ ಐದು ಸಾವಿರ ಎಕರೆ ಜಮೀನು ನೀಡಬೇಕು ಎಂದು ಕೇಂದ್ರ ಸರ್ಕಾರ ನೀಡಿರುವ ಆದೇಶ ಇನ್ನೂ ಕಾಗದದ ಮೇಲೆಯೇ ಉಳಿದಿರುವುದು ರಾಜ್ಯ ಸರ್ಕಾರದ ದೊಡ್ಡ ಲೋಪ. ಇಲ್ಲೂ ಪ್ರಭಾವಿ ಕೈಗಳೇ ಕೆಲಸ ಮಾಡುತ್ತಿವೆ ಎಂದೇ ಹೇಳಬೇಕಾಗುತ್ತದೆ.

ರಾಜ್ಯದಲ್ಲಿ ಶೇ. 90 ರಷ್ಟು ದಲಿತರಿಗೆ ಭೂಮಿ ಇಲ್ಲ, ಗ್ಯಾಸ್, ಗೊಬ್ಬರ ಸಬ್ಸಿಡಿ ಇಲ್ಲ ಎಂದು ಹೇಳಿರುವ ಸಚಿವರು ತಮ್ಮದೇ ಸರ್ಕಾರವನ್ನು ಈ ಎಲ್ಲ ಸಮಸ್ಯೆಗಳ ವಿರುದ್ಧ ತರಾಟೆಗೆ ತೆಗೆದುಕೊಳ್ಳಬೇಕು.

ದುರ್ಬಲರ ನ್ಯಾಯಯುತ ಬೇಡಿಕೆಗಳಿಗೆ ಪರಿಶಿಷ್ಟ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಸಚಿವರು ಮತ್ತು ರಾಜಕಾರಣಿಗಳಿಂದ ಪ್ರಾಮಾಣಿಕ ಬೆಂಬಲ ದೊರೆತಾಗ ಮಾತ್ರ ಸರ್ಕಾರವನ್ನು ಸರಿದಾರಿಗೆ ತರಲು ಸಾಧ್ಯ. ದೇಶ ಸ್ವತಂತ್ರವಾಗಿ ಆರು ದಶಕಗಳು ಕಳೆದರೂ ಸಾಮಾಜಿಕ ನ್ಯಾಯ ಇಲ್ಲ ಎನ್ನುವುದು ಎಲ್ಲರೂ ತಲೆತಗ್ಗಿಸುವ ವಿಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.