ಯಾವುದೇ ಚಲನಚಿತ್ರದ ಬಿಡುಗಡೆಗೆ ಮೊದಲು ಸೆನ್ಸಾರ್ ಮಂಡಳಿಯ ಒಪ್ಪಿಗೆ ಪಡೆಯಬೇಕೆಂಬ ನಿಯಮವಿದೆ. . ಆದರೆ ನಾಟಕಗಳಿಗೆ ಈ ನಿಯಮ ಇಲ್ಲ. ನಾಟಕ ಪ್ರಾರಂಭವಾದ ಮೇಲೆ ಮಧ್ಯೆ ನಿಲ್ಲುವಂತಿಲ್ಲ. ದೋಷವಿರಲಿ, ಅದನ್ನು ತಿರಸ್ಕರಿಸುವಂತಿಲ್ಲ. ಒಪ್ಪಿಕೊಳ್ಳಬೇಕು. ಅದು ಅನಿವಾರ್ಯ.

ಸಿನಿಮಾಗಳಲ್ಲಿ ಆಕ್ಷೇಪಾರ್ಹ ಮಾತು, ದೃಶ್ಯಗಳನ್ನು ಕತ್ತರಿಸುವಂತೆ ಸೆನ್ಸಾರ್ ಮಂಡಲಿ ಕಟ್ಟುನಿಟ್ಟಿನ ಸೂಚನೆ ನೀಡುತ್ತದೆ. ಈ ಸೂಚನೆಯನ್ನು ಪಾಲಿಸದರೆ ಮಾತ್ರ ಚಿತ್ರದ ಪ್ರದರ್ಶನಕ್ಕೆ ಅವಕಾಶ. ನಾಟಕದಲ್ಲಿ ಹಾಗಿಲ್ಲ. ರಂಗದ ಮೇಲೆ ಆಡಿದ ಮಾತಿಗೆ ಕತ್ತರಿ ಹಾಕುವುದು ಸಾಧ್ಯವಿಲ್ಲ.

ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಆಗಾಗ ಪೌರಾಣಿಕ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಇವುಗಳಲ್ಲೂ ಅಶ್ಲೀಲ, ಅಸಂಬದ್ಧ ಮಾತುಗಳು ಬಳಕೆಯಾಗುತ್ತವೆ.
ಅತಿರೇಕ ಅನ್ನಿಸುವಂತಹ ಪ್ರಣಯ ಸನ್ನಿವೇಶಗಳಿರುತ್ತವೆ. ರಂಗ ಗೀತೆಗಳನ್ನು ಬಿಟ್ಟು ಸಿನಿಮಾ ಗೀತೆಗಳ ಧಾಟಿಯ ಹಾಡುಗಳು ಬಳಕೆಯಾಗುತ್ತಿವೆ. ದ್ವಂದ್ವಾರ್ಥದ ಸಂಭಾಷಣೆಗಳು, ವಿಚಿತ್ರ ಆಂಗಿಕ ಭಾಷೆ, ಪ್ರಚೋದಕ ಹಾವಭಾವಗಳು ಹೆಚ್ಚಾಗಿವೆ.

ಇವನ್ನೆಲ್ಲ ನೋಡಿದರೆ ನಾಟಕ ರಂಗಕ್ಕೂ ಸೆನ್ಸಾರ್ ಅಗತ್ಯವಿದೆ ಅನ್ನಿಸುತ್ತದೆ. ಇದಕ್ಕೆ ರಂಗಭೂಮಿಯ ಕಲಾವಿದರು ಏನು ಹೇಳುತ್ತಾರೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.