ಗುರುವಾರ , ಮೇ 19, 2022
23 °C

ನಾಟಕಗಳ ಸುಗ್ಗಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಂಕ್ರಾಂತಿ’

ರಂಗ ದರ್ಶನ: ಶುಕ್ರವಾರ ಯುವ ಕಲಾರಂಗದ ನಾಟಕೋತ್ಸವದಲ್ಲಿ ಪ್ರದರ್ಶನ ಕಲಾ ಕೇಂದ್ರ ತಂಡದಿಂದ ಪಿ. ಲಂಕೇಶರ ‘ಸಂಕ್ರಾಂತಿ’ (ನಿರ್ದೇಶನ: ಮೈಕೊ ಶಿವಶಂಕರ, ನಿರ್ವಹಣೆ: ರಾಜೇಶ್ ಬಾಬು, ಎಂ. ಚನ್ನಕೇಶವ ಮೂರ್ತಿ) ನಾಟಕ ಪ್ರದರ್ಶನ.

12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವಣ್ಣನವರ ಕಾಲದಲ್ಲಿ ನಡೆದ ಸಂಘರ್ಷ, ಅದರಿಂದಾದ ಪರಿಣಾಮ ಗಳನ್ನು ಬಿಂಬಿಸುವ ವಸ್ತು ವಿಷಯವನ್ನು ನಾಟಕ ಒಳಗೊಂಡಿದೆ.ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6. ಮಾಹಿತಿಗೆ: 99005 66686ರಂಗಶಂಕರದಲ್ಲಿ

ರಂಗಶಂಕರ: ಗುರುವಾರ ರಂಗ ಮಂಟಪ ತಂಡದಿಂದ ‘ಗಾಂಧಿ ಬಂದ’.ಎಚ್. ನಾಗವೇಣಿ ಅವರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಗಾಂಧಿ ಬಂದ’ ಕಾದಂಬರಿಯ ರಂಗರೂಪ ಇದು. ಮಹಾತ್ಮನ ಬದುಕು, ಆದರ್ಶ, ತತ್ವ ಚಿಂತನೆಗಳು ನಮ್ಮ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಉತ್ತರವಾಗಬಹುದು ಎಂಬುದನ್ನು ಇಲ್ಲಿ ಬಿಂಬಿಸಲಾಗಿದೆ. ಸ್ತ್ರೀ ಸ್ವಾತಂತ್ರ್ಯ, ಆಕೆಯ ಬೇಕು ಬೇಡಗಳು, ಅವರಿಗೆ ದಕ್ಕಿರುವ ಸ್ಥಾನಮಾನ ಹಾಗೂ ಬದಲಾಗಬೇಕಾದ ಅಗತ್ಯದ ಬಗ್ಗೆ ನಾಟಕ ಚರ್ಚಿಸುತ್ತದೆ.  ಪಾತ್ರವರ್ಗದಲ್ಲಿ: ರಾಜಕುಮಾರ, ಡಿ. ಹನುಮಕ್ಕ, ರೇಣುಕಾರೆಡ್ಡಿ, ವರ್ಷಾ, ಆರ್. ರೋಹಿತ್ ಮತ್ತಿತರರು. ನಿರ್ದೇಶನ: ಚಂಪಾಶೆಟ್ಟಿ, ನಿರ್ವಹಣೆ: ವೇಣು ನೆಪೋಲಿಯನ್, ಸಂಗೀತ: ಪ್ರಕಾಶ್ ಶೆಟ್ಟಿ, ಸರ್ವೇಶ, ನಿಕಿಲ್ ಭಾರದ್ವಾಜ್, ಟಿ. ಲಕ್ಷ್ಮೀನಾರಾಯಣ).

ಶುಕ್ರವಾರ ಸಂಕೇತ್ ತಂಡದಿಂದ ‘ನೀನಾನಾದ್ರೆ ನಾನೀನೇನಾ’ (ರಚನೆ ಮತ್ತು ನಿರ್ದೇಶನ: ಎಸ್.ಸುರೇಂದ್ರನಾಥ) ನಾಟಕ. ಇದು ಶೇಕ್ಸ್‌ಪಿಯರ್‌ನ ಕಾಮಿಡಿ ಆಫ್ ಎರರ್ಸ್ ಆಧರಿಸಿದ ನಗೆ ನಾಟಕ. ಕಲಾವಿದರು: ಸಿಹಿಕಹಿ ಚಂದ್ರು, ಜಹಂಗೀರ್, ಕಲ್ಪನಾ ನಾಗನಾಥ್, ಶ್ರೀನಾಥ್ ವಸಿಷ್ಠ ಮತ್ತಿತರರು.ಸ್ಥಳ: ರಂಗಶಂಕರ, ಜೆ.ಪಿ. ನಗರ. ಸಂಜೆ 7.30. ಮಾಹಿತಿಗೆ: 98800 36611.ಹಾಸ್ಯ ನಾಟಕಗಳು

ಕಲಾ ನವರಂಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ: ಕುವೆಂಪು ಸ್ಮರಣಾರ್ಥ ಮೂರು ದಿನಗಳ ರಾಜ್ಯಮಟ್ಟದ ಹಾಸ್ಯ ನಾಟಕೋತ್ಸವ ಹಾಗೂ ‘ಆದರ್ಶ ದಂಪತಿಗಳು’, ವಿಶ್ವಮಾನವ ರಾಷ್ಟ್ರಕವಿ ಕುವೆಂಪು ರತ್ನ ಪ್ರಶಸ್ತಿ’ ಪ್ರದಾನ. ಶುಕ್ರವಾರ ಗೆಜ್ಜೆ ಹೆಜ್ಜೆ ಕಲಾತಂಡದಿಂದ ‘ಕುಡಿತಾಯಣ’ (ರಚನೆ, ನಿರ್ದೇಶನ: ಮೈಸೂರು ರಮಾನಂದ್), ಸ್ನೇಹ ಸಿಂಚನ ಹಾಸ್ಯ ಕಲಾತಂಡದಿಂದ ‘ಸುಂದರಿ ಸ್ವಯಂವರ’ (ರಚನೆ, ನಿರ್ದೇಶನ: ರಾಧಿಕಾ ರಘು), ಸ್ಫೂರ್ತಿ ಕಲಾವಿದರಿಂದ ‘ಅಳಿಯ ದೇವರು’ (ರಚನೆ: ದಾಶರಥಿ ದೀಕ್ಷಿತ್, ನಿ: ಕೆ. ರಾಮಕೃಷ್ಣಬಾಬು), ಕುಮಾರ್ ಕಲ್ಚರಲ್ ಅಕಾಡೆಮಿ ‘ನಿರುದ್ಯೋಗವೇ ಮಹಾ ಭಾಗ್ಯ’ (ರಚನೆ, ನಿರ್ದೇಶನ: ಬಿ.ಶಾಂತಕುಮಾರ್) ಹಾಸ್ಯ ನಾಟಕ. ಉದ್ಘಾಟನೆ: ಕೆ.ವಿ ನಾಗರಾಜಮೂರ್ತಿ. ಅತಿಥಿಗಳು: ಸಿದ್ದರಾಜು, ಎಂ.ಎಸ್.ಹಿರಿಯಣ್ಣ.

ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಮಧ್ಯಾಹ್ನ 3.ಈಶಾನ್ಯದ ನಾಟಕಗಳು

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಘಟಕ: ಮಾರ್ಚ್ 24 ರಿಂದ 31ರ ವರೆಗೆ ಈಶಾನ್ಯ ರಾಜ್ಯಗಳ 8ನೇ ನಾಟಕೋತ್ಸವ. ಗುರುವಾರ ಅಸ್ಸಾಂನ ಉತ್ಸಾ ತಂಡದಿಂದ ಅಸ್ಸಾಮಿ ಭಾಷೆಯ ‘ಗುಟಿ ಫುಲೋರ್ ಗಮುಸಾ (ನಿ: ಬಿದ್ಯಾವತಿ ಪುಕನ್), ಶುಕ್ರವಾರ ದಿ ಇಂಫಾಲ್ ಥಿಯೇಟರ್ ತಂಡದಿಂದ ಮಣಿಪುರಿ ಭಾಷೆಯ ‘ಮೊಯಿರಂಗ್ ಪರ್ವ್’ (ನಿ: ಲೊಯಿತೊಂಗ್ ಬಾಮ್ ದೊರೇಂದ್ರ) ನಾಟಕ ಪ್ರದರ್ಶನ.ಸ್ಥಳ: ಗುರುನಾನಕ ಭವನ, ಮಿಲ್ಲರ್ಸ್ ಟ್ಯಾಂಕ್ ಬಂಡ್ ರಸ್ತೆ. ನಿತ್ಯ ಸಂಜೆ 7.ಮಹಾಭಾರತ ನಾಟಕೋತ್ಸವದಲ್ಲಿ...

ರಂಗಮಂಡಲ ಸಾಂಸ್ಕೃತಿಕ ಸಂಸ್ಥೆ: ಮಹಾಭಾರತ ನಾಟಕೋತ್ಸವದಲ್ಲಿ ಗುರುವಾರ ‘ರಂಗಭೂಮಿ ಹಾಗೂ ಮಹಾಭಾರತ ವಿಚಾರ ಸಂಕಿರಣ’. ಡಾ.ಲಕ್ಷ್ಮಣದಾಸ (ವೃತ್ತಿ ರಂಗಭೂಮಿ ಮೇಲೆ ಮಹಾಭಾರತದ ಪ್ರಭಾವ), ಪ್ರೊ. ಎಲ್.ಎನ್. ಮುಕುಂದರಾಜ್ (ಆಧುನಿಕ ರಂಗಭೂಮಿಯ ಮೇಲೆ ಮಹಾಭಾರತದ ಪ್ರಭಾವ). ನಂತರ ತುಮಕೂರು ಜಿಲ್ಲೆಯ ಕಲ್ಲೇಶ್ವರ ಯಕ್ಷಗಾನ ಮಂಡಲಿ ತಂಡದಿಂದ ‘ಕರ್ಣಾರ್ಜುನ ಕಾಳಗ’ (ನಿರ್ದೇಶನ: ಭಾಗವತ ಚನ್ನಬಸವಯ್ಯ). ಅಧ್ಯಕ್ಷತೆ: ನಾಟಕಕಾರ ಸಿದ್ದಗಂಗಯ್ಯ ಕಂಬಾಳ.

ಶುಕ್ರವಾರ ಸಮಾರೋಪ. ಬಂಡ್ಲಳ್ಳಿ ವಿಜಯಕುಮಾರ್ ಮತ್ತು ತಂಡದಿಂದ ಜನಪದ ಮಹಾಭಾರತ ಗೀತಗಾಯನ. ಅತಿಥಿಗಳು: ಎಲ್. ಕೃಷ್ಣಪ್ಪ, ಚಂದ್ರಕುಮಾರ್‌ಸಿಂಗ್. ರಂಗನುಡಿ: ಇಂಡಸ್ ಜಯರಾಮ್ ಮತ್ತು ಹಲ್ಲೇಗೆರೆ ಶಂಕರ್.ಸ್ಥಳ: ಸೇವಾಸದನ, 14ನೇ ಅಡ್ಡ ರಸ್ತೆ, ಮಲ್ಲೇಶ್ವರ, ಸಂಜೆ 6.ಸಹಿ ರೀ ಸಹಿ

ಗುರು ಸಂಸ್ಥೆ: ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಶುಕ್ರವಾರದಿಂದ ಮೂರು ದಿನಗಳ ‘ಮೈಯ್ಯೆಸ್ ರಂಗಾವಳಿ’ ಹಾಸ್ಯ ನಾಟಕೋತ್ಸವ. ‘ಸದಭಿರುಚಿಯ ಹಾಸ್ಯ: ನಾಟಕದ ನಂತರ ಆರೋಗ್ಯವಂತ ಊಟ’ ಇದರ ವಿಶೇಷ. ಶುಕ್ರವಾರ ‘ಸಹಿ ರೀ ಸಹಿ’ (ಮರಾಠಿ ಮೂಲ: ಕೇದಾರ ಶಿಂಧೆ. ಅನುವಾದ ಮತ್ತು ನಿರ್ದೇಶನ, ಅಭಿನಯ: ಯಶವಂತ ಸರದೇಶಪಾಂಡೆ). ಶನಿವಾರ ಮತ್ತು ಭಾನುವಾರ ‘ಆಲ್ ದಿ ಬೆಸ್ಟ್ ಮತ್ತು ಒಂದ ಆಟ ಭಟ್ಟರದು’.ಸ್ಥಳ: ಡಾ. ರಾಜ್‌ಕುಮಾರ್ ಕಲಾಕ್ಷೇತ್ರ (ಆರ್‌ಟಿಒ ಕಚೇರಿ ಆವರಣ), ರಾಜಾಜಿನಗರ. ಸಂಜೆ 6.30. ಮಾಹಿತಿಗೆ: 99007 93265, 97401 15545

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.