ಗುರುವಾರ , ಏಪ್ರಿಲ್ 15, 2021
24 °C

ನಾಟಕ ಎಲ್ಲರನ್ನೂ ಒಗ್ಗೂಡಿಸುತ್ತದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ನಾಟಕಕ್ಕೆ ಜಾತಿ-ಕುಲದ ಬಂಧಗಳಿಲ್ಲ. ಇದಕ್ಕೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ತಿಳಿಸಿದರು.ರೇವಣಸಿದ್ದೇಶ್ವರ ಬೆಟ್ಟದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನಾಟಕ ಕಮ್ಮಟ ಸಮಾರೋಪ ಸಮಾರಂಭ ಹಾಗೂ ಕಮ್ಮಟದಲ್ಲಿ ತರಬೇತಿ ಪಡೆದ ಅಮ್ಮನಪುರ ತಾಂಡದ ಯುವ ಜನತೆ ಪ್ರಸ್ತುತಪಡಿಸಿದ `ಒಡಲಾಳ~ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಲಾವಿದರಿಗೆ ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದು ಸದಾ ಕಟ್ಟಿಟ್ಟಬುತ್ತಿ. ಅದನ್ನೆಲ್ಲ ಜೀರ್ಣಿಸಿಕೊಂಡು, ಸಮಾಜದ ಫಸಲಿಗೆ ಕಲಾವಿದರು ಗೊಬ್ಬರವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ರಾಜು ಮಾತನಾಡಿ, ಕುಗ್ರಾಮದ ಯುವಕರನ್ನು ರಂಗತಜ್ಞ ಡಾ. ಗೋವಿಂದಸ್ವಾಮಿ ಮತ್ತು ಸ್ನೇಹಿತರು ನಾಟಕಕ್ಕೆ ಸಿದ್ಧ ಮಾಡಿರುವ ಶ್ಲಾಘನೀಯ. ಇಂತಹ ಕೆಲಸಕ್ಕೆ ಸ್ಥಳೀಯರು ಸಹಕರಿಸಬೇಕು ಎಂದರು.ಜಾನಪದಲೋಕದ ರಂಗನಿರ್ದೇಶಕ ಬೈರ‌್ನಳ್ಳಿ ಶಿವರಾಮ್ ಮಾತನಾಡಿ, ಲಂಬಾಣಿ ತಾಂಡದ ಯುವಕ, ಯುವತಿಯರು ಸಾಮಾನ್ಯವಾಗಿ ಆಡುವ ಕನ್ನಡ ಅಸ್ಪಷ್ಟವಾಗಿರುತ್ತದೆ. ಸಾಕವ್ವ ಪಾತ್ರದಲ್ಲಿ ಚೈತ್ರಾಬಾಯಿ ಅವರು  ಉಮಾಶ್ರೀ ಅವರ ನಟನೆಯನ್ನು ನೆನಪಿಸಿದರು ಎಂದರು. ನಾಟಕ ಅಕಾಡೆಮಿ ರಿಜಿಸ್ಟ್ರಾರ್ ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ದೇವರಾಜ್, ಬಂಜಾರ ಅಕಾಡಮಿ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ ಗೋವಿಂದಸ್ವಾಮಿ, ಸ್ಥಳಿಯರಾದ ಚಿಕ್ಕಕೆಂಪಣ್ಣ, ಎಚ್,ಎಸ್.ದೇವರಾಜ್, ಆರ್.ಮೂರ್ತಿನಾಯಕ್, ಪಾಪಣ್ಣ, ಆನಂದಗಿರಿ, ಗೋವಿಂದ ರಾಮನಾಯಕ್, ಶಿವಲಿಂಗಯ್ಯ, ಸಾವಿತ್ರಿಬಾಯಿ, ಸೂರ್ಯಕುಮಾರ್, ಎ.ಆರ್.ಗಣೇಶ, ಪಾರುಪತ್ತೇದಾರ, ಶ್ರೀನಿವಾಸಮೂರ್ತಿ ಗುರುಮೂರ್ತಪ್ಪ ಉಪಸ್ಥಿತರಿದ್ದರು.ಕಲಾವಿದರು: ಅಮ್ಮಪುರದ ಚೈತ್ರಾಬಾಯಿ, ಶ್ವೇತಬಾಯಿ, ಗೋವಿಂದನಾಯ್ಕ, ದೇವರಾಜ, ಆನಂದಗಿರಿ, ಪಾಪಣ್ಣ, ಶ್ರೀಧರ, ಶ್ರೀದೇವಿ, ಮಹದೇವ ನಾಯ್ಕ, ಸಾಗರ (ನರಸಿಂಹನಾಯ್ಕ), ಅನಿತಾಬಾಯಿ, ಗೀತಾಬಾಯಿ, ನಾಗೇಶನಾಯ್ಕ, ರಮೇಶನಾಯ್ಕ, ದೇವರ ದೊಡ್ಡಿಯ ವೀನುನಾಯ್ಕ, ರಾಜೇಶನಾಯ್ಕ ಮುಂತಾದವರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.