ಬುಧವಾರ, ಮೇ 25, 2022
30 °C

ನಾಣ್ಯ- ನೋಟಿನೊಂದಿಗೆ ನಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಶ್ರೀಗಂಧದ ಸುವಾಸನೆ ಬೀರುವ ಅಂಚೆಚೀಟಿ, ಗುಲಾಬಿ ಹೂವಿನ ಪರಿಮಳವಿರುವ ಪ್ರೇಮಿಗಳ ದಿನದ ಗ್ರೀಟಿಂಗ್ಸ್, ಪ್ರಾಚೀನ ಕಾಲದ ನಾಣ್ಯ ‘ರಾಮಟಕ್ಕೆ’ಯಿಂದ ಹಿಡಿದು ಕಳೆದ ವರ್ಷ ಬಿಡುಗಡೆ ಆದ ಬಸಣ್ಣನ ನಾಣ್ಯ, ದೇಶಿ, ವಿದೇಶಿ ನೋಟು ಸೇರಿದಂತೆ ವಿವಿಧ ಬಗೆಯ ಪೋಸ್ಟ್ ಕಾರ್ಡ್‌ಗಳನ್ನು ನಗರದ ನದ್ದನಗದ್ದಾದ ನಿವಾಸಿ ಸರ್ವೇಶ್ ಮಾಂಜ್ರೇಕರ್ ಸಂಗ್ರಹಿಸಿದ್ದಾರೆ.ಬಾಲ್ಯದಲ್ಲಿ ಮುಂಬೈಗೆ ಹೋಗಿದ್ದಾಗ ವ್ಯಕ್ತಿಯೊಬ್ಬರ ಬಳಿಯಿದ್ದ ಅಂಚೆ ಚೀಟಿ ಸಂಗ್ರಹ ನೋಡಿ ಆಕರ್ಷಿತರಾದ ಸರ್ವೇಶ್ ಪ್ರೌಢಶಾಲೆಯಲ್ಲಿರುವಾಗಲೇ ಅಂಚೆಚೀಟಿ, ನಾಣ್ಯ, ದೇಶಿ, ವಿದೇಶಿ ನೋಟು, ಪೋಸ್ಟ್ ಕಾರ್ಡ್, ಇಸ್ಪೀಟು ಎಲೆ ಸಂಗ್ರಹಿಸುವ ಗೀಳು ಅಂಟಿಸಿಕೊಂಡರು.ಇಂದಿರಾಗಾಂಧಿ, ಮಹಾತ್ಮಗಾಂಧಿ, ಭಗತ್‌ಸಿಂಗ್, ಬಸವಣ್ಣ ಸೇರಿದಂತೆ ದೇಶದ ಮಹನೀಯ ವ್ಯಕ್ತಿಗಳ ಹೆಸರಲ್ಲಿ ತಂದಿರುವ ನಾಣ್ಯ, ಅಂಚೆಚೀಟಿಗಳನ್ನು ಕಳೆದ 20 ವರ್ಷಗಳಿಂದ ಸರ್ವೇಶ ಸಂಗ್ರಹಿಸುತ್ತಿದ್ದಾರೆ. ಅಮೆರಿಕ, ಜಪಾನ್, ಜರ್ಮನಿ, ಸ್ವಿಟ್ಜರ್ಲೆಂಡ್, ಯುರೋಪ್ ಸೇರಿದಂತೆ ಒಟ್ಟು 150 ದೇಶದ ನಾಣ್ಯ, ನೋಟು ಹಾಗೂ ಅಂಚೆಚೀಟಿಗಳು ಇವರ ಸಂಗ್ರಹದಲ್ಲಿವೆ. ನೋಟು, ಅಂಚೆಚೀಟಿ, ಪೋಸ್ಟ್ ಕಾರ್ಡ್‌ಗಳಿಗಿಂತ ನಾಣ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಿಸಿದ್ದಾರೆ. ಸರ್ವೇಶ ನಾಣ್ಯ ಸಂಗ್ರಹ ಮಾಡುತ್ತಿರುವುದನ್ನು ನೋಡಿ ಈತನ ಸ್ನೇಹಿತರು, ಸಂಬಂಧಿಕರು ತಮಗೆ ಸಿಕ್ಕ ಹಳೆ ನಾಟ್ಯ, ದೇಶಿ ಹಾಗೂ ವಿದೇಶಿ ನೋಟುಗಳನ್ನು ತಂದು ಕೊಡುತ್ತಿದ್ದರು. ಇದೂ ಅಲ್ಲದೇ ಗೋಕರ್ಣದಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದ ಸರ್ವೇಶ ಅಲ್ಲಿಗೆ ಬರುವ ವಿದೇಶಿಯರಿಂದ ಸಾಕಷ್ಟು ನಾಣ್ಯ, ನೋಟುಗಳನ್ನು ಸಂಗ್ರಹಿಸಿದ್ದಾರೆ.ನಾಣ್ಯ, ನೋಟು ಅಂಚೆಚೀಟಿ ಸಂಗ್ರಹಿಸಲು ಸರ್ವೇಶ್ ಆಗಾಗ ಮುಂಬೈಗೆ ಹೋಗುತ್ತಿರುತ್ತಾರೆ. ಸರ್ವೇಶ ಅವರ ಬಳಿ ಇರುವ ಬಹುತೇಕ ನಾಣ್ಯಗಳು ಬೆಳ್ಳಿಯದ್ದಾಗಿವೆ. ಈಗ ಬೆಳ್ಳಿ ಬೆಲೆ ಹೆಚ್ಚಾಗಿದ್ದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ನಾಣ್ಯ ಪಡೆಯಲು ಪ್ರತಿಸಲ ಅಂದಾಜು ನಾಲ್ಕರಿಂದ ಐದು ಸಾವಿರ ರೂಪಾಯಿಯನ್ನು ಇವರು ಖರ್ಚು ಮಾಡುತ್ತಿದ್ದಾರೆ.ಸರ್ವೇಶ ತಮ್ಮ ಮನೆಯ ಒಂದು ಕೋಣೆ ತುಂಬಾ ನಾಣ್ಯ, ಅಂಚೇಚೀಟಿ ಸಂಗ್ರಹಿಸಿದ್ದಾರೆ. ಇವರ ಉತ್ಸಾಹಕ್ಕೆ ತಂದೆ ಸತೀಶ, ತಾಯಿ ಶೋಭಾ, ಪತ್ನಿ ರೂಪಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಬಟ್ಟೆ ವ್ಯಾಪಾರಿಯಾಗಿರುವ ಸರ್ವೇಶ ಬೇಸಿಗೆಯಲ್ಲಿ ನಾಣ್ಯ, ನೋಟು, ಅಂಚೆಚೀಟಿಗಳನ್ನು ಸಂಗ್ರಹಿಸಿ ಮಳೆಗಾಲದಲ್ಲಿ ವ್ಯಾಪಾರದಲ್ಲಿ ಸ್ವಲ್ಪ ಬಿಡುವು ಸಿಗುವುದರಿಂದ ಅವುಗಳನ್ನು ಅಚ್ಚುಕಟ್ಟಗಾಗಿ ಜೋಡಿಸುತ್ತಾರೆ.ನಾಣ್ಯ, ನೋಟು, ಅಂಚೆಚೀಟಿ, ಪೋರ್ಸ್ಟ್‌ಗಳನ್ನು ವ್ಯವಸ್ಥಿವಾಗಿ ಹಾಳೆಯಲ್ಲಿ ಅಂಟಿಸಿ ಅವುಗಳನ್ನು ಮಹತ್ವಗಳನ್ನು ಬರೆದಿಟ್ಟು ಪೋಟೋ ಅಲ್ಬಂ ರೀತಿಯಲ್ಲಿ ಅವುಗಳನ್ನು ಸಿದ್ಧಪಡಿಸಿದ್ದಾರೆ.‘ಚಿಕ್ಕ ವಯಸ್ಸಿನಲ್ಲೇ ನಾಣ್ಯ, ನೋಟು, ಅಂಚೇಚೀಟಿ ಹವ್ಯಾಸ ನನಗಿತ್ತು. ನನ್ನ ಸಂಗ್ರಹ ನೋಡಿ ಸ್ನೇಹಿತರು, ಸಂಬಂಧಿಕರು ನಾಣ್ಯ, ನೋಟುಗಳನ್ನು ತಂದು ಕೊಡುತ್ತಿದ್ದರು. 20 ವರ್ಷಗಳಿಂದ ಸಂಗ್ರಹ ಮಾಡಿದ್ದನ್ನು ಜನರೆದರು ಪ್ರದರ್ಶನ ಮಾಡಬೇಕು ಎಂದಿದ್ದೇನೆ. ಸಾಧ್ಯವಾದರೆ ಮನೆಯಲ್ಲಿ ಮ್ಯೂಸಿಯಂ ಮಾಡುವ ಆಸೆ ಇದೆ’ ಎನ್ನುತ್ತಾರೆ ಸರ್ವೇಶ ಮಾಂಜ್ರೇಕರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.