ಕಲಾತ್ಮಕ ಹಾಗೂ ಪ್ರಯೋಗಶೀಲ ಆಗಿದ್ದೂ ಜನಪ್ರಿಯ ಚಿತ್ರದ ಮಾದರಿಯಲ್ಲಿ ಪ್ರೇಕ್ಷಕನನ್ನು ತಲುಪುವಂತೆ ರೂಪುಗೊಂಡಿರುವುದು ‘ನಾನು ಅವನಲ್ಲ, ಅವಳು’ ಸಿನಿಮಾದ ವಿಶೇಷ. ಹಿಜ್ಡಾಗಳ ಬದುಕನ್ನು ಘನತೆ–ಅಂತಃಕರಣದಿಂದ ನಿರೂಪಿಸಿರುವುದು ನಿರ್ದೇಶಕ ಬಿ.ಎಸ್. ಲಿಂಗದೇವರು ಅವರ ಅಗ್ಗಳಿಕೆ.

ಇತ್ತೀಚಿನ ವರ್ಷಗಳಲ್ಲಿನ ಕನ್ನಡದ ಬಹುಮುಖ್ಯ ಪ್ರಯೋಗಶೀಲ ಚಿತ್ರಗಳಲ್ಲಿ ಒಂದಾಗಿರುವ ‘ನಾನು ಅವನಲ್ಲ, ಅವಳು’ ಎರಡು ರಾಷ್ಟ್ರಪ್ರಶಸ್ತಿಗಳ (ಅತ್ಯುತ್ತಮ ನಟ ಮತ್ತು ಪ್ರಸಾಧನ ವಿಭಾಗಗಳಲ್ಲಿ) ಜೊತೆಗೆ, ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಸಹೃದಯರ ಮೆಚ್ಚುಗೆ ಪಡೆದಿದೆ.

ಮಾದೇಶ ಎನ್ನುವ ಹುಡುಗನೊಬ್ಬ ತನ್ನೊಳಗಿನ ಹೆಣ್ತನಕ್ಕೆ ಓಗೊಟ್ಟು ಹೆಣ್ಣಾಗುವ ಕಥೆಯ ಚಿತ್ರದಲ್ಲಿ ಹಿಜ್ಡಾಗಳ ಬದುಕಿನ ಸಂಕಟಗಳು, ಅವರ ಆಚರಣೆ–ನಂಬಿಕೆಗಳನ್ನು ಪ್ರಾಮಾಣಿಕವಾಗಿ ಹಿಡಿದಿಡಲು ಪ್ರಯತ್ನಿಸಲಾಗಿದೆ.

ತೃತೀಯ ಲಿಂಗಿಯ ಪಾತ್ರದ ನಿರ್ವಹಣೆಗಾಗಿ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿರುವುದು ಗಮನಾರ್ಹ. ಪ್ರಫುಲ್ ವಿಶ್ವಕರ್ಮ ಹಾಗೂ ಸುಂದರ್ ಪುಟ್ಟ ಪಾತ್ರಗಳಲ್ಲಿ ನೆನಪಿನಲ್ಲುಳಿಯುತ್ತಾರೆ. ಅಶೋಕ್ ವಿ. ರಾಮನ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಹಾಗೂ ಅರಸು ಅಂತಾರೆ ಸಾಹಿತ್ಯ ಚಿತ್ರಕ್ಕೊಂದು ಭಾವನಾತ್ಮಕ ಚೌಕಟ್ಟು ಕಲ್ಪಿಸಿದೆ. ಕನ್ನಡ ಚಿತ್ರರಂಗದ ಬಗ್ಗೆ ಅಭಿಮಾನ ಮೂಡಿಸಬಲ್ಲ ಈ ಚಿತ್ರವನ್ನು goo.gl/V0AKyc ಕೊಂಡಿ ಬಳಸಿ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.