ಭಾನುವಾರ, ಜೂನ್ 20, 2021
28 °C

ನಾನು ದೇವರಲ್ಲ ಸಚಿನ್ ಮಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ (ಪಿಟಿಐ): `ನಾನು ದೇವರಲ್ಲ. ಕೇವಲ ಸಚಿನ್ ತೆಂಡೂಲ್ಕರ್ ...~

 ಶತಕಗಳ ಶತಕ ಗಳಿಸಿ ಸಾಧನೆ ಮಾಡಿದ ಮುಂಬೈಕರ್ ಬಗ್ಗೆ ಅಭಿಮಾನಿಗಳು ಪ್ರೀತಿಯಿಂದ `ದೇವರು~ ಅಂತಲೇ ಕರೆಯುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು `ನಾನು ದೇವರಲ್ಲ~ ಎನ್ನುವ ಮಾತನ್ನು ಒತ್ತಿ ಹೇಳಿದ್ದಾರೆ.`ನಾನು ಖಂಡಿತವಾಗಿಯೂ ಪ್ರಾಮಾಣಿಕ. ಮಾನವೀಯ ಗುಣಗಳನ್ನು ಹೊಂದಿದ್ದೇನೆ. ಅಷ್ಟೇ ಅಲ್ಲ ಭಾವನಾ ಜೀವಿಯೂ ಹೌದು. ಇದಷ್ಟೆ ನನಗೆ ಗೊತ್ತು~ ಎಂದು ತಿಳಿಸಿದ್ದಾರೆ.`ಶತಕ ಗಳಿಸುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ತಂಡದ ಒಳಿತಿಗೆ ಮಾತ್ರ ಆಡುತ್ತಿದ್ದೆ. ಪ್ರತಿಬಾರಿಯೂ ನಾನು ಸ್ಕೋರು ಬೋರ್ಡ್ ನೋಡಿದಾಗ, ರನ್ ಸರಾಸರಿಯನ್ನು ಗಮನಿಸುತ್ತಿದ್ದೆ. ತಂಡಕ್ಕೆ ಇನ್ನೂ ಎಷ್ಟು ರನ್ ಅಗತ್ಯವಿದೆ ಎಂದು ಯೋಚಿಸುತ್ತಿದ್ದೆ~ ಎನ್ನುತ್ತಾರೆ ಲಿಟಲ್ ಮಾಸ್ಟರ್.`ನನ್ನ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಕೆಲ ವರದಿಗಳಲ್ಲಿ ಟೀಕೆ ಸಹ ಮಾಡಲಾಗಿದೆ. ಇದ್ಯಾವುದರ ಬಗ್ಗೆ ತಿರುಗಿಯೂ ನೋಡಲಿಲ್ಲ. ನನ್ನ ಕೆಲಸವನ್ನು ನಾನು  ಮಾಡಿದೆ. ಏಳು-ಬೀಳುಗಳ ಜೀವನದಲ್ಲಿ ಸಹಜ  ಎನ್ನುವುದನ್ನು ಮೊದಲೇ ಅರಿತಿದ್ದೇನೆ. ಇವುಗಳನ್ನು ಅನುಭವಿಸದವರು ಸಾಧನೆ ಮಾಡಲು ಅಸಾಧ್ಯ~ ಎನ್ನುವುದು ಸಚಿನ್ ಅಭಿಪ್ರಾಯ.ವಿಶ್ವಕಪ್ ನಂತರ ಸಚಿನ್ ನಿವೃತ್ತಿ ಹೊಂದಬೇಕಿತ್ತು ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, `ಭಾರತ ವಿಶ್ವಕಪ್ ಜಯಿಸಿದ ನಂತರ ನಿವೃತ್ತಿ ಹೊಂದಿದ್ದರೆ, ಅದು ಸ್ವಾರ್ಥವೆನಿಸುತ್ತಿತ್ತು~ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.