ಗುರುವಾರ , ಫೆಬ್ರವರಿ 25, 2021
20 °C

ನಾನೂ ಎಲ್ಲ ರೀತಿಯ ಚಿತ್ರಗಳನ್ನೂ ಮಾಡಬಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನೂ ಎಲ್ಲ ರೀತಿಯ ಚಿತ್ರಗಳನ್ನೂ ಮಾಡಬಲ್ಲೆ

‘ಬುದ್ಧಿವಂತಿಕೆಯ ಮತ್ತು ಸ್ವತಂತ್ರ  ಚಿಂತನೆಯ ಚಿತ್ರಗಳನ್ನು ನಿರ್ಮಿಸಲು    ನನಗೆ ಆಸಕ್ತಿಯಿದ್ದರೂ ಅವಕಾಶಗಳ ಕೊರತೆಯಿದೆ. ವಿಭಿನ್ನತೆಯ ಚಿತ್ರಗಳನ್ನು ಮಾಡಲು ನನಗೂ ಪ್ರತಿಭೆಯಿದೆ. ಆದರೆ ಅನೇಕರು ಇದು ಕರಣ್‌ ಪಾಲಿನ ರೊಟ್ಟಿಯಲ್ಲ ಎಂದು ಭಾವಿಸಿದ್ದಾರೆ’ ಎಂದು ಬಾಲಿವುಡ್‌ನ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾದ ಕರಣ್‌ ಜೋಹರ್‌ 17ನೇ ಮುಂಬೈ ಚಲನಚಿತ್ರೋತ್ಸವದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.‘ನಾನು ಎಲ್ಲ ರೀತಿಯ ಚಿತ್ರಗಳನ್ನು ನಿರ್ದೇಶಿಸಲು ಸಿದ್ಧನಿದ್ದೇನೆ. ಆದರೆ ಹೆಚ್ಚು ಬುದ್ಧಿ ಉಪಯೋಗಿಸಬೇಕಾದ ಚಿತ್ರಗಳೇನಾದರೆ ಇದ್ದರೆ ಕೆಲವರು ಇದು ಕರಣ್‌ನಿಂದ ಅಸಾಧ್ಯ ಎಂದು ಭಾವಿಸುತ್ತಾರೆ. ಇಂತಹ ಚಿತ್ರಗಳೇನಾದರೂ ಇದ್ದರೆ  ಅವಕಾಶಗಳು ಕಿರಣ್‌ ರಾವ್‌ ಮನೆಯ ಬಾಗಿಲು ತಟ್ಟುವುದರಲ್ಲಿ ಸಂದೇಹವೇ ಇಲ್ಲ’ ಎಂದಿದ್ದಾರೆ 43 ವರ್ಷದ ನಿರ್ದೇಶಕ ಕರಣ್‌ ಜೋಹರ್‌. ‘ನನಗೆ ಜೀವನ ಎಂಬುದಿಲ್ಲ, ಸಂಬಂಧಗಳೆಂಬ ಕಟ್ಟುಪಾಡಿಲ್ಲ, ಹೆಂಡತಿ ಮಕ್ಕಳಿಲ್ಲ. ಆದರೆ, ನನ್ನ ಕಂಪನಿಯನ್ನೇ ನಾನು ಮದುವೆಯಾಗಿದ್ದೇನೆ. ಸಿನಿಮಾನೇ ನನ್ನ ಹೆಂಡತಿ’ ಎಂದು ಸಿನಿಮಾ ಕುರಿತು ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಕರಣ್‌ ಜೋಹರ್‌.

ಕರಣ್ ಅವರ ಪ್ರೊಡಕ್ಷನ್‌ನಲ್ಲಿ ಮೂಡಿಬಂದ ‘ದಿ ಲಂಚ್ ಬಾಕ್ಸ್‌’ ಚಿತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸಿದ ಚಿತ್ರವಾಗಿತ್ತು. ಕರಣ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಬ್ರದರ್ಸ್’ ಚಿತ್ರ ಆಗಸ್ಟ್‌ನಲ್ಲಿ ತರೆ ಕಂಡ ನಂತರ ‘ಶುದ್ಧಿ’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.