ನಾಯಿ ಪ್ರಿಯ ಚಿರತೆ ಸೆರೆ

7

ನಾಯಿ ಪ್ರಿಯ ಚಿರತೆ ಸೆರೆ

Published:
Updated:
ನಾಯಿ ಪ್ರಿಯ ಚಿರತೆ ಸೆರೆ

ಕನಕಗಿರಿ (ಕೊಪ್ಪಳ ಜಿಲ್ಲೆ): ಸಮೀಪದ ಬಸರಿಹಾಳ, ಸೋಮಸಾಗರ ಹಾಗೂ ಅಡವಿಬಾವಿ ತಾಂಡ ಪರಿಸರದಲ್ಲಿ ಸೋಮವಾರ ನಸುಕಿನ ಜಾವದಲ್ಲಿ `ನಾಯಿ ಪ್ರಿಯ~ ಹಾಗೂ ಕಾಡು ಪ್ರಾಣಿ ಗಂಡು ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.ಒಂದು ತಿಂಗಳಿಂದಲೂ ಈ ಭಾಗದಲ್ಲಿನ ನಾಯಿ, ದನಕರು, ಆಡು, ಮೇಕೆ ತಿಂದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.           ಚಿರತೆಯನ್ನು ಹಿಡಿಯಲು ಪಟ್ಟು ಹಿಡಿದು ಕುಳಿತ ಅಲ್ಲಿನ ನಿವಾಸಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಈರಪ್ಪ ಮಳ್ಳಿ ಅವರ ಹೊಲದಲ್ಲಿ ಬೋನಿನ ಒಂದೆಡೆ ಭಾಗದಲ್ಲಿ ನಾಯಿಯನ್ನು ಹಾಕಿ, ಗಿಡದ ಟೊಂಗೆಗಳಿಂದ ಬೋನನ್ನು ಮುಚ್ಚಿ ಜಾಣತನದಿಂದ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry