ವಿಜಯಪುರ:(ಯೋಗಿ ನಾರೇಯಣ ಯತೀಂದ್ರರ ಮಂಟಪ) : ಇಲ್ಲಿನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯ, ನಗರ ಬಲಿಜ ಸಂಘ, ಕೈವಾರ ಯೋಗಿ ನಾರೇಯಣ ಯತೀಂದ್ರರ ಟ್ರಸ್ಟ್ ಹಮ್ಮಿಕೊಂಡಿರುವ ನಾರೇಯಣೋತ್ಸವ ಕಾರ್ಯಕ್ರಮದಲ್ಲಿ ನಿರಂತರ ಸಂಗೀತೋತ್ಸವ ಜರುಗಿತು.

ಪ್ರಖ್ಯಾತ ಕಲಾವಿದರಿಂದ ಹರಿಕಥೆ, ಕೀರ್ತನೆಗಳ ಗಾಯನ, ನಾದಸ್ವರ ಮತ್ತು ತಬಲ ವಾದನ, ಹಾಡುಗಾರಿಕೆ, ಹಾರ್ಮೋನಿಯಂ ಸೋಲೋ, ಕೊಳಲು ವಾದನ, ಪುರಂದರದಾಸರು, ಕನಕದಾಸರು, ತ್ಯಾಗರಾಜರು ಮತ್ತು ಕೈವಾರ ತಾತಯ್ಯನವರ ತತ್ವಪದ ಗಾಯನ ನಡೆಯಿತು.

ತಿರುಪತಿಯ ವಿದೂಷಿ ನಾಗರತ್ನ ಭಾಗವತಾರಿಣಿ, ವಿಜಯಪುರ ಸುತ್ತಮುತ್ತಲ ಗ್ರಾಮಗಳ ಭಜನಾಮಂಡಳಿಗಳಿಂದ ಸಂಕೀರ್ತನೆ, ಜಿ.ಶೈಲಜ, ಎಂ.ವಿ.ನಾಯ್ಡು, ಟಿ.ಗೋವಿಂದರಾಜು, ಶ್ರೀದೇವಿ, ಲಕ್ಷ್ಮಿದೇವಿ, ಗೆರಗಿರೆಡ್ಡಿ, ಹನುಂತರಾಯಪ್ಪ, ಚಿಕ್ಕಬಳ್ಳಾಪುರ ಶಾಂತಲಾ ಅರಸ, ಸುಶ್ಮಿತಾ, ಕೋಲಾರ ಪಿ.ನಂಜುಂಡಪ್ಪ, ಡಾ.ಅರುಣಮ್ಮ ,ಟಿ.ಶ್ರೀನಿವಾಸುಲು, ವಿ.ಭಾಗ್ಯಲಕ್ಷ್ಮಿ, ಬಿ. ಅಮರಶ್ರೀ, ದೊಡ್ಡಬಳ್ಳಾಪುರದ ರಾಮನ್, ಚಿಂತಾಮಣಿಯ ಪದ್ಮಾವತಿ, ಎಲ್.ವೈ.ಶ್ರೀನಿವಾಸರೆಡ್ಡಿ, ಶಿಡ್ಲಘಟ್ಟ ಭಾಗ್ಯಲಕ್ಷ್ಮಿ ಅಯ್ಯರ್, ಮಂಜುಳಾ ಜಗದೀಶ್, ಆಶಾ, ಕೋಲಾರದ ಜಿ.ಎಸ್.ಬ್ರಹ್ಮೇಂದ್ರ, ಈ.ರಾಮಕೃಷ್ಣಾಚಾರ್, ವಿರೂಪಸಂದ್ರ ಗೋಪಾಲಕೃಷ್ಣಾಚಾರ್, ಶ್ರೀನಿವಾಸಪುರದ ಎಸ್.ವಿ.ರಾಮಮೂರ್ತಿ, ಬೆಂಗಳೂರಿನ ಮುರಳಿ, ಚೆನ್ನೈನ ಋತ್ವಿಕ್ರಾಜ್ ತಂಡದವರಿಂದ ಗಾಯನ, ವಾನರಾಶಿ ಬಾಲಕೃಷ್ಣಭಾಗವತರ್, ಚಿಕ್ಕಬಳ್ಳಾಪುರ ಮಂಜುನಾಥಾಚಾರಿ, ಹರಿಶರ್ಮ ತಂಡದವರಿಂದ ಸಂಕೀರ್ತನೆ, ಚೆನ್ನೈನ ಸಿ.ಕೆ.ಪತಾಂಜಲಿ ಅವರಿಂದ ಕೊಳಲುವಾದನ ನಡೆಯಿತು.

ಸಮಾರೋಪ: ಅಂತರಂಗದ ಅರಿವು ಮನುಷ್ಯನನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಬಲ್ಲದು ಎಂದು ಕೈವಾರ ಕ್ಷೇತ್ರದ ಯೋಗಿನಾರೇಯಣ ಯತೀಂದ್ರ ಟ್ರಸ್ಟ್ನ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಹೇಳಿದರು.

ನಾರೇಯಣೋತ್ಸವ ಸಮಾರೋಪದಲ್ಲಿ ಮಾತನಾಡಿ ಅವರು ದೈವರಿಗಿಂತ ಗುರುವಿನ ಮನಸ್ಸು ಒಲಿಸಿಕೊಂಡರೆ ಸಕಲವೂ ಲಭ್ಯವಾಗುತ್ತದೆ. ಹಿರಿಯರ ಆದರ್ಶಗಳನ್ನು ಪಾಲಿಸುವ ಬಗ್ಗೆ ಚಿಂತನಾಶೀಲರಾಗಬೇಕು ಎಂದು ತಿಳಿಸಿದರು.

ತಿರುಪತಿ ತಿರುಮಲ ದೇವಾಲಯ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಆದಿಕೇಶುವುಲು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಕ್ಷೇತ್ರ ಕೈವಾರದ ಕಾರ್ಯದರ್ಶಿ ಎನ್.ವೆಂಕಟೇಶಯ್ಯ, ಕರ್ನಾಟಕ ಬಲಿಜಸಂಘದ ಕಾರ್ಯಾಧ್ಯಕ್ಷ ಕೆ.ಎಂ.ಶ್ರೀನಿವಾಸಮೂರ್ತಿ, ಎಂ.ಸತ್ಯನಾರಾಯಣ್, ಅಶ್ವತ್ಥ್, ಶಿಡ್ಲಘಟ್ಟ ಬಲಿಜ ಸಂಘದ ಅಧ್ಯಕ್ಷ ಸೋಮಶೇಖರ್ ಮತ್ತಿತರರು ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.