ನಾಲಿಗೆಯ ಸ್ವಚ್ಛತೆ ಕಡೆಗಣಿಸಬೇಡಿ

7

ನಾಲಿಗೆಯ ಸ್ವಚ್ಛತೆ ಕಡೆಗಣಿಸಬೇಡಿ

Published:
Updated:
ನಾಲಿಗೆಯ ಸ್ವಚ್ಛತೆ ಕಡೆಗಣಿಸಬೇಡಿ

ನಾ ಲಿಗೆಯ ಸ್ವಚ್ಛತೆಯ ಅವಶ್ಯಕತೆ ಇದೆಯೇ?

ಖಂಡಿತವಾಗಿಯೂ ಇದೆ. ಏಕೆಂದರೆ ನಾಲಿಗೆಯ ಮೇಲೆ ಕುಳಿತುಕೊಳ್ಳುವ ಸೂಕ್ಷ್ಮಾಣು ಮತ್ತು ಆಹಾರದ ಕಣಗಳು ಬಿಳಿ ಪದರದಂತೆ ಆಗಿ ಬಾಯಿಯ ದುರ್ವಾಸನೆಗೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ನಾಲಿಗೆ ಸ್ವಚ್ಛತೆ ತುಂಬಾ ಮುಖ್ಯ.ಇದಕ್ಕೆ ಯಾವುದಾದರೂ ಉಪಕರಣವಿದೆಯೇ?

ನಾಲಿಗೆಯನ್ನು ಸ್ವಚ್ಛಮಾಡಲು ಟೂಥ್ ಬ್ರಷ್ ಉಪಯೋಗಿಸಬಹುದು. ಅಥವಾ ನಾಲಿಗೆಗೆ ಸರಿ ಹೊಂದುವ, ಪ್ಲಾಸ್ಟಿಕ್ ಅಥವಾ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಕೂಡಿದ ಉಪಕರಣವನ್ನು ಉಪಯೋಗಿಸಬಹುದು.ನಾಲಿಗೆ ಸ್ವಚ್ಛಗೊಳಿಸುವ ಉಪಕರಣ ಯಾವ ವಿಧದಲ್ಲಿ  ಸಿಗುತ್ತದೆ?

ಟೂಥ್ ಬ್ರಷ್‌ಹಿಂಬದಿಯನ್ನು ನಾಲಿಗೆ ಸ್ವಚ್ಛಗೊಳಿಸಲೆಂದೇ ವಿಶೇಷವಾಗಿ ವಿನ್ಯಾಸಮಾಡಲಾಗುತ್ತದೆ.

ಒಂದು ಅಥವಾ ಎರಡು ಹಿಡಿ ಹೊಂದಿದ್ದು, ನಾಲಿಗೆಯನ್ನು ಸ್ವಚ್ಛಗೊಳಿಸಲೆಂದೇ ಬ್ರಷ್ ಅಳವಡಿಸಿರುತ್ತಾರೆ. ಎರಡು ಹಿಡಿ ಇದ್ದು ಮುಂದೆ ನಾಲಿಗೆಗೆ ಸರಿಹೊಂದುವಂತೆ ಪ್ಲಾಸ್ಟಿಕ್ ಅಥವಾ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಿರುತ್ತಾರೆ.ಈ ಸಾಧನವು ಎಲ್ಲಿ  ಸಿಗುತ್ತದೆ?

ಎಲ್ಲಾ ಔಷಧ ಅಂಗಡಿ ಮತ್ತು ಸ್ಟೇಷನರಿ ಅಂಗಡಿಗಳಲ್ಲಿ ಸಿಗುತ್ತದೆ.ನಾಲಿಗೆಯನ್ನು ಈ ಉಪಕರಣದಿಂದ ಹೇಗೆ ಸ್ವಚ್ಛಗೊಳಿಸಬಹುದು?

ಈ ಉಪಕರಣವನ್ನು ನಾಲಿಗೆಯ ಮಧ್ಯಭಾಗದಲ್ಲಿಟ್ಟು, ನಾಲಿಗೆಯ ಮುಂದಕ್ಕೆ ನಿಧಾನವಾಗಿ ಎಳೆಯಬೇಕು. ಈ ರೀತಿ 6 ರಿಂದ 8 ಸಲ ಮಾಡುವುದರಿಂದ ನಾಲಿಗೆ ಸ್ವಚ್ಛವಾಗುತ್ತದೆ.ನಾಲಿಗೆ ಸ್ವಚ್ಛತೆ ಸಾಮಾನ್ಯರಿಂದ ಹಿಡಿದು ಬೇರೆ ಯಾರಿಗೆ ತುಂಬಾ ಉಪಯೋಗವಾಗುತ್ತದೆ?

ನಾಲಿಗೆಯಲ್ಲಿ ತುಂಬಾ ಆಳ ಗುಳಿ ಇರುವವರಿಗೆ ಆಹಾರ ಕಣಗಳು ಮತ್ತು ಸೂಕ್ಷ್ಮಾಣುಗಳು ನಾಲಿಗೆಯ ಮೇಲೆ ಜಾಸ್ತಿ ಕುಳಿತುಕೊಳ್ಳುವಂತವರಲ್ಲಿ  ಮತ್ತು ಧೂಮಪಾನ ಮಾಡುವವರಿಗೂ ಉಪಯೋಗವಾಗುತ್ತದೆ.ದಿನಕ್ಕೆ ಎಷ್ಟು ಬಾರಿ ನಾಲಿಗೆಯನ್ನು  ಸ್ವಚ್ಛಗೊಳಿಸಬೇಕು?

ದಿನಕ್ಕೆ ಒಂದು ಅಥವಾ ಎರಡು ಬಾರಿ ಹಲ್ಲುಗಳನ್ನು ಸ್ವಚ್ಛಗೊಳಿಸಿದ ನಂತರ ನಾಲಿಗೆಯನ್ನು ಸ್ವಚ್ಛಗೊಳಿಸಬೇಕು.ನಾಲಿಗೆ ಸ್ವಚ್ಛ ಮಾಡುವಾಗ ವಹಿಸಬಹುದಾದ ಎಚ್ಚರಿಕೆ ಏನು?

ಅತಿಯಾದ ಬಲ ಪ್ರಯೋಗ ಮಾಡಿ ನಾಲಿಗೆಯನ್ನು ಸ್ವಚ್ಛ ಮಾಡುವುದರಿಂದ ನಾಲಿಗೆ ಗಾಯವಾಗಿ ರಕ್ತ ಬರುವ ಸಾಧ್ಯತೆ ಹೆಚ್ಚು ಮತ್ತು ನಿಮ್ಮ ನಾಲಿಗೆ ಸ್ವಚ್ಛಗೊಳಿಸಿದ ಉಪಕರಣ ತೀರಾ ಗಂಟಲಿನ ಹತ್ತಿರ ಹೋದರೆ ವಾಕರಿಕೆ ಬರುವ ಸಾಧ್ಯತೆ ಹೆಚ್ಚು.ಈ ಉಪಕರಣವನ್ನು ಉಪಯೋಗಿಸಿದ ನಂತರ ಸ್ವಚ್ಛತೆ ಹೇಗೆ?

ಉಪಕರಣವನ್ನು ಉಪಯೋಗಿಸಿದ ನಂತರ ಜೋರಾಗಿ ಬರುವ ನೀರಿನಿಂದ ಸ್ವಚ್ಛವಾಗಿ ತೊಳೆದು ಇಡಬೇಕು.ಈ ಉಪಕರಣವನ್ನು ಹೇಗೆ ಸಂಗ್ರಹಿಸಿಡಬೇಕು?

ಸ್ವಚ್ಛವಾದ, ತೇವರಹಿತ ಜಾಗದಲ್ಲಿ ಸಂಗ್ರಹಿಸಿಡಬೇಕು.

ಲೇಖಕರ ದೂರವಾಣಿ:  9986288267

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry