ಸೋಮವಾರ, ಏಪ್ರಿಲ್ 12, 2021
23 °C

ನಾಲೆ ಪಕ್ಕ ಲಕ್ಷ ಮೌಲ್ಯದ ವಿಸ್ಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಟಗಿ: ಲಕ್ಷಾಂತರ ರೂ. ಬೆಲೆ ಬಾಳುವ ಒರಿಜಿನಲ್ ಚಾಯ್ಸಾ ಎಂಬ ವಿಸ್ಕಿ ಬಾಟಲಿಗಳನ್ನು ಅಪರಿಚಿತರು ಇಲ್ಲಿಯ ತುಂಗಭದ್ರಾ 31ನೇ ಕಾಲುವೆಯ ದಂಡೆಯ (ವಿಜ್ಞಾನಜ್ಯೋತಿ ಶಾಲೆಯ ಹತ್ತಿರ) ಮೇಲೆ ಎಸೆದಿರುವುದು ಭಾನುವಾರ ಬೆಳಕಿಗೆ ಬಂದಿದೆ.ಅಬಕಾರಿ, ಪೊಲೀಸ್ ಹಾಗೂ ಲಾಟರಿ ಹಾಗೂ ಅಬಕಾರಿ ನಿಷೇಧ ದಳದ ಅಧಿಕಾರಿಗಳು ಇಂದು ಜಂಟಿ ಕಾರ್ಯಾಚರಣೆ ನಡೆಸಿ ಕರ್ನಾಟಕ ಹಾಗೂ ಆಂಧ್ರದಲ್ಲಿ ತಯಾರಿಸಿರುವ ಲಕ್ಷಾಂತರ ರೂ. ಮುಖಬೆಲೆಯ ವಿಸ್ಕಿ ಬಾಟಲಿಗಳನ್ನು ಇಂದು ವಶಪಡಿಸಿಕೊಂಡರು.ಅಬಕಾರಿ ಇಲಾಖೆಯ ಅಧಿಕಾರಿಗಳಾದ ಮಾಲಿಪಾಟೀಲ್, ಚಿನ್ನಪ್ಪ, ಮೆಹಬೂಬ ಹಾಗೂ ಸಿಬ್ಬಂದಿ 1. 65 ಲಕ್ಷ ರೂ. ಬೆಲೆಯ 58 ಬಾಕ್ಸ್‌ನಲ್ಲಿಯ 2800 ಕ್ವಾರ್ಟ್‌ರ್ ಬಾಟಲಿಗಳನ್ನು ಹಾಗೂ ಲಾಟರಿ, ಅಬಕಾರಿ ನಿಷೇಧ ದಳದ ಪರಸಪ್ಪ ಭಜಂತ್ರಿ, ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ 68, 833 ರೂ. ಬೆಲೆಯ 27 ಬಾಕ್ಸ್‌ಗಳಲ್ಲಿಯ 1320 ಬಾಟಲಿಯ ಒರಿಜಿನಲ್ ಚಾಯ್ಸ್‌ನ ಕ್ವಾಟ್‌ರ್ ಬಾಟಲಿಗಳನ್ನು ವಶಕ್ಕೆ ತಗೆದುಕೊಂಡಿದ್ದಾರೆ.ಶನಿವಾರ ಮಧ್ಯರಾತ್ರಿ ಅಪರಿಚಿತರು ವಿಸ್ಕಿ ಬಾಟಲಿಗಳನ್ನು ಸಾಗಿಸಲು ಯತ್ನಿಸಿ, ನಂತರ ಭಯಗೊಂಡು ನಿರ್ಜನ ಪ್ರದೇಶದಲ್ಲಿ ಎಸೆದಿರಬಹುದು. ಚುನಾವಣೆಗೆಂದು ಬಂದುದರಲ್ಲಿ ಉಳಿದ ಬಾಟಲಿಗಳು ಇವಾಗಿರಬಹುದು ಎಂಬ ಶಂಕೆಯನ್ನು ಅಧಿಕಾರಿ ವರ್ಗ ವ್ಯಕ್ತಪಡಿಸಿದೆ. ಅಕ್ರಮ ಮಧ್ಯದ ಸಂಗ್ರಹಣೆಯ ಮಾಹಿತಿ ನಮಗೆ ಸಿಕ್ಕಿತ್ತು, ಕಾರಟಗಿಯವರೆಗೆ ಸಂಚರಿಸಿ ಪತ್ತೆ ಮಾಡಲು ಶ್ರಮಿಸಿದ್ದೆವು ಎಂಬ ಮಾಹಿತಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಹೊರಗೆಡವಿದ್ದಾರೆ.ಅಧಿಕಾರಿಗಳ ದಾಳಿಯ ಮುಂಚೆ ಹಾಗೂ ನಂತರವೂ ಕಾಲುವೆಯಲ್ಲಿ ಬಿದ್ದಿರುವ ವಿಸ್ಕಿ ಬಾಟಲಿಗಳನ್ನು ಕೆಲವರು ಸಂಗ್ರಹಿಸಿ ತಗೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳು ನಂತರ ಪಕ್ಕದ ರಾಮನಗರದಲ್ಲಿ ಅನೇಕರಿಂದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡರು ಎನ್ನಲಾಗಿದೆ. ಮಧ್ಯಾಹ್ನವಾದರೂ ಕಾಲುವೆಯಲ್ಲಿ ಬಾಲಕರು ಜಿಗಿದು ಮದ್ಯದ ಬಾಟಲಿಗಳನ್ನು ಹುಡುಕುವ ಕಾರ್ಯದಲ್ಲಿ ಮಗ್ನರಾಗಿರುವುದು ಕಂಡುಬಂತು. ಪಕ್ಕದ ಜಮೀನಿನ ಮಾಲಿಕರು ಕಾಲುವೆಯ ನೀರಲ್ಲಿ ಪತ್ತೆ ಮಾಡಿರುವ ಬಾಟಲಿಗಳನ್ನು ನಮ್ಮ ಜಮೀನಿನಲ್ಲಿಟ್ಟು ನಂತರ ಅವನ್ನು ತಗೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿ ನೀಡಿದರು.ಅಧಿಕಾರಿಗಳು ಇದು ನಕಲಿ ಮದ್ಯ, ಯಾರೂ ಕುಡಿಯಬೇಡಿರಿ, ನಿಮ್ಮಲ್ಲಿರುವ ಬಾಟಲಿಗಳನ್ನು ತಂದು ಒಪ್ಪಿಸಿರಿ ಎಂದು ಮನವಿ ಮಾಡಿಕೊಂಡರೂ ಅನೇಕರು ಮನವಿಯ ಬಗ್ಗೆಯೆ ಶಂಕೆ ವ್ಯಕ್ತಪಡಿಸಿ ಮಾತನಾಡುತ್ತಿರುವುದು ಕೇಳಿಬಂತು.ಅಬಕಾರಿ ಮತ್ತು ಲಾಟರಿ ಅಬಕಾರಿ ನಿಷೇಧ ದಳದ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.