ಬೆಂಗಳೂರು: ಬೆಂಗಳೂರಿನ ಹೊರ ವಲಯದಲ್ಲಿರುವ ಹೂಡಿಯಲ್ಲಿ ಗುರುವಾರದಿಂದ ಸೋಮವಾರದವರೆಗೆ 40ನೇ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಷಿಪ್ ನಡೆಯಲಿದ್ದು, ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಹನುಮಂತೇ ಗೌಡ ಅವರು ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಪ್ರಮುಖ ಕಿರಿಯ ತಂಡಗಳೆಲ್ಲವೂ ಇಲ್ಲಿ ಹಣಾಹಣಿ ನಡೆಸಲಿವೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಷನ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದೇವರಾಜ್ ಚತುರ್ವೇದಿ ಈಚೆಗಿನ ವರ್ಷಗಳಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಕಬಡ್ಡಿ ಕ್ರೀಡೆಯ ಚಟುವಟಿಕೆಗಳ ವಿಸ್ತರಣೆಗೆ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ‘ಪ್ರಸಕ್ತ ಐಕೆಎಫ್ಗೆ 32 ದೇಶಗಳು ನೋಂದಣಿ ಯಾಗಿವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದ್ದು, ಮುಂದೊಂದು ದಿನ ಒಲಿಂಪಿಕ್ಸ್ನಲ್ಲಿ ಕಬಡ್ಡಿ ಹಣಾಹಣಿ ಕಂಡು ಬರುವುದಂತು ನಿಚ್ಚಳ’ ಎಂದೂ ಅವರು ತಿಳಿಸಿದರು.

‘ಇಂದು ನಾವು ಏಷ್ಯಾದಲ್ಲಿದ್ದೇವೆ. ನಾಳೆ ನಾವು ಒಲಿಂಪಿಕ್ಸ್ನಲ್ಲಿರುತ್ತೇವೆ ಎಂಬುದು ಪ್ರಸಕ್ತ ನಮ್ಮ ಧ್ಯೇಯವಾಕ್ಯ ವಾಗಿದೆ’ ಎಂದರು. ಕ್ರಿಕೆಟ್ನ ವೀಕ್ಷಕ ವಿವರಣೆಗಾರ ಚಾರು ಶರ್ಮ, ಅಂತರರಾಷ್ಟ್ರೀಯ ಕ ಬಡ್ಡಿ ತಜ್ಞ ಪ್ರಸಾದ್ ರಾವ್, ಕರ್ನಾ ಟಕ ರಾಜ್ಯ ಕಬಡ್ಡಿ ಸಂಸ್ಥೆಯ ಕಾರ್ಯ ದರ್ಶಿ ಜಯರಾಮ್, ಉಪಾಧ್ಯಕ್ಷ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.