‘ಫೋಟೋ ಎಲೆಕ್ಟ್ರಿಕ್ ಎಫೆಕ್ಟ್’ (ದ್ಯುತಿ ವಿದ್ಯುತ್ ಪರಿಣಾಮ) ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ತಂದಿತ್ತ ಸಂಶೋಧನೆ. ‘ರಾಮನ್ ಎಫೆಕ್ಟ್’ ಎಂದು ಕರೆಯುವಂತೆ ಇದನ್ನು ‘ಐನ್ಸ್ಟೀನ್ ಎಫೆಕ್ಟ್’ ಎಂದು ಕರೆದರೆ ಅದು ಅತಿಶಯೋಕ್ತಿ ಅಲ್ಲ. ತಮ್ಮ ಸಂಶೋಧನೆಯ ಮೂಲಕ ಮಿತಿಯಿಲ್ಲದ ಸಾಧ್ಯತೆಗಳಿಗೆ ವಿಜ್ಞಾನದ ಬಾಗಿಲನ್ನೂ ಮನಸ್ಸನ್ನೂ ತೆರೆದ ಮಹಾಕಾರ್ಯವಿದು. ಐನ್ಸ್ಟೀನ್ ಸಂಶೋಧನೆಯ ಪರಿಣಾಮ ಎಷ್ಟು ಅಗಾಧವಾದುದು ಎನ್ನುವುದಕ್ಕೆ ಈ ಹೊತ್ತಿನ ಆಧುನಿಕ ಜಗತ್ತು ಸಾಕ್ಷಿಯಾಗಿ ನಿಂತಿದೆ. ಈ ಸಂಶೋಧನೆ ಬೆಳಕಿಗೆ ಬಂದುದು 1915ರಲ್ಲಿ. ಈಗ ಅದಕ್ಕೆ ನೂರು ವರ್ಷದ ಸಂಭ್ರಮ.

ಇದನ್ನೇ ಮುಖ್ಯವಸ್ತುವಾಗಿ ಇಟ್ಟುಕೊಂಡು ಜನಮನ ಅರಳಿಸುವ ಉದ್ದೇಶದ ‘ಬೆಂಗಳೂರು ವಿಜ್ಞಾನ ಉತ್ಸವ’ ಜುಲೈ ಒಂದರಿಂದ ತಿಂಗಳಿಡೀ ನಡೆಯಲಿದೆ. ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿರುವ ಡಾ.ಎಚ್ಚೆನ್ ಮಲ್ಟಿಮೀಡಿಯಾ ಸಭಾಂಗಣದಲ್ಲಿ ಉಪನ್ಯಾಸ ಮಾಲಿಕೆ ಪ್ರತಿನಿತ್ಯ ಸಂಜೆ 6ಕ್ಕೆ ನಡೆಯಲಿದೆ.

ಇದು 38ನೇ ವರ್ಷದ ವಿಜ್ಞಾನೋತ್ಸವ. ಇದುವರೆಗೆ ಈ ಅವಧಿಯಲ್ಲಿ 2600ಕ್ಕೂ ಅಧಿಕ ಉಪನ್ಯಾಸಗಳು ಈ ವೇದಿಕೆಯಿಂದ ನಡೆದಿವೆ. ವಿಜ್ಞಾನವನ್ನು ಪ್ರಧಾನವಾದ ವಸ್ತುವನ್ನಾಗಿಸಿಕೊಂಡ ಇಂಥ ಉಪನ್ಯಾಸ ಮಾಲಿಕೆ ಜಗತ್ತಿನಲ್ಲೇ ಇನ್ನೆಲ್ಲೂ ನಡೆದಿಲ್ಲ, ಇದು ಬೆಂಗಳೂರಿಗೂ ಕರ್ನಾಟಕಕ್ಕೂ ಆ ಮೂಲಕ ದೇಶಕ್ಕೂ ಹೆಮ್ಮೆ ಗೌರವ ತಂದಿರುವ ಜಾಗತಿಕ ದಾಖಲೆ ಎನ್ನುವುದು ವೇದಿಕೆಯ ಅಧ್ಯಕ್ಷ ಡಾ.ಎ.ಎಚ್.ರಾಮರಾವ್ ಹೇಳುವ ಮಾತು.

ಇಸ್ರೋ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಉತ್ಸವವನ್ನು ಉದ್ಘಾಟಿಸಿ, ‘ಭಾರತ ಬಾಹ್ಯಾಕಾಶ’ ವಿಚಾರವಾಗಿ ಉಪನ್ಯಾಸ ನೀಡುವುದರೊಂದಿಗೆ ಈ ವರ್ಷದ ಈ ಮಾಲಿಕೆ ಆರಂಭವಾಗಲಿದೆ. ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ದ್ಯುತಿ ವಿದ್ಯುತ್ ಪರಿಣಾಮದ ಪಾತ್ರ ಗಮನಾರ್ಹ. ಕಿರಣ್ ಕುಮಾರ್ ಕನ್ನಡಿಗ ಮಾತ್ರವೇ ಅಲ್ಲ, ಇದೇ ನ್ಯಾಷನಲ್ ಕಾಲೇಜಿನಲ್ಲಿ ದಶಕಗಳ ಹಿಂದೆ ವಿದ್ಯಾರ್ಥಿಯಾಗಿದ್ದು ಸಂಸ್ಥೆಯೊಂದಿಗೆ ಕರುಳುಬಳ್ಳಿ ಸಂಬಂಧ ಹೊಂದಿದವರು. ಇಸ್ರೋ ಅಧ್ಯಕ್ಷರಾದ ಸಂದರ್ಭದಲ್ಲಿ ಕಾಲೇಜಿಗೆ ಭೇಟಿ ನೀಡಿ ಒಂದಿಷ್ಟು ಹೊತ್ತು ವಿದ್ಯಾರ್ಥಿಗಳೊಂದಿಗೆ, ಅಧ್ಯಾಪಕ ಪ್ರಾಧ್ಯಾಪಕರೊಂದಿಗೆ ಸಮಯ ಕಳೆದಿದ್ದರು. ಈಗ ವಿಜ್ಞಾನೋತ್ಸವ ಉದ್ಘಾಟಿಸಿ ಬೆಳಕನ್ನು ಅರ್ಥ ಮಾಡಿಕೊಳ್ಳುವ ಸರಣಿಗೆ ಚಾಲನೆ ನೀಡಲಿದ್ದಾರೆ.

ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ಅವರು ಬಾಹ್ಯಾಕಾಶ ವಾಣಿಜ್ಯ: ಇತ್ತೀಚಿನ ಬೆಳವಣಿಗೆಗಳು ಕುರಿತು ಮಾತನಾಡಲಿದ್ದಾರೆ. ರಾಧಾಕೃಷ್ಣನ್ ಅಧಿಕಾರಾವಧಿಯಲ್ಲಿ ಭಾರತ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಗುರುತು ಮೂಡಿಸಿದ್ದು ಇನ್ನೂ ಹಸಿರು ನೆನಪು. ‘ಹೊಸ ದಶಕಗಳಲ್ಲಿ ಸೈಬರ್ ಭದ್ರತೆ’ ಕುರಿತು ಡಾ.ಎಸ್. ಸೀತಾರಾಮ ಅಯ್ಯಂಗಾರ್, ‘ಬಾಯಿ: ಆರೋಗ್ಯ-ಅನಾರೋಗ್ಯದ ಹೆಬ್ಬಾಗಿಲು’ ವಿಚಾರವಾಗಿ ಡಾ.ಸಿ.ವಿ. ಮೋಹನ್, ‘ಶಸ್ತ್ರಚಿಕಿತ್ಸೆಯ ಭವಿಷ್ಯ’ ಕುರಿತು ಡಾ.ವಿವೇಕ ಜವಳಿ, ‘ಶಸ್ತ್ರಚಿಕಿತ್ಸೆಯಲ್ಲಿ ನೈತಿಕ ನಿಷ್ಠೆ’ ವಿಚಾರವಾಗಿ ಡಾ.ಕೆ. ಲಕ್ಷ್ಮಣನ್, ‘ಸಮೃದ್ಧ ದೇಶಕ್ಕೆ ಸದೃಢ ಹೃದಯ’ ಕುರಿತು ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ‘ಭಾಷೆ ಮತ್ತು ಬುದ್ಧಿವಂತಿಕೆ’ ಕುರಿತಂತೆ ಡಾ.ಸಿ.ಆರ್.ಚಂದ್ರಶೇಖರ್ ಮಾತನಾಡಲಿದ್ದಾರೆ. ಇವಿಷ್ಟೇ ಅಲ್ಲದೆ ಇನ್ನೂ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ಉಪನ್ಯಾಸಗಳನ್ನು ಕೇಳುವ ಅವಕಾಶವಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರು ‘ಸರಕು ಮತ್ತು ಸೇವಾ ತೆರಿಗೆ’ ಕುರಿತು ಉಪನ್ಯಾಸ ನೀಡಲಿರುವುದು ಇನ್ನೊಂದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.