ನಾಳೆಯಿಂದ ರಾಜ್ಯ ವೆಟರನ್ಸ್ ಟೇಬಲ್ ಟೆನಿಸ್ ಟೂರ್ನಿ

ಸೋಮವಾರ, ಮೇ 27, 2019
33 °C

ನಾಳೆಯಿಂದ ರಾಜ್ಯ ವೆಟರನ್ಸ್ ಟೇಬಲ್ ಟೆನಿಸ್ ಟೂರ್ನಿ

Published:
Updated:

ಮೈಸೂರು: ಪೆರೇಂಟ್ಸ್ ಟೇಬಲ್ ಟೆನಿಸ್ ಅಕಾಡೆಮಿಯು ಕರ್ನಾಟಕ ವೆಟರನ್ಸ್ ಟಿಟಿ ಸಂಸ್ಥೆ ಸಹಯೋಗದಲ್ಲಿ ಸೆಪ್ಟೆಂಬರ್ 10 ಮತ್ತು 11ರಂದು ಎರಡನೇ ವೆಟರನ್ಸ್ ರಾಜ್ಯ ರ‌್ಯಾಂಕಿಂಗ್ ಟಿಟಿ ಟೂರ್ನಿ ಆಯೋಜಿಸಿದೆ.40 ವರ್ಷ, 50 ವರ್ಷ , 60 ವರ್ಷ, ಮತ್ತು 70ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ , ಕಾಂಬಿನೆಷನ್ ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಜಯಲಕ್ಷ್ಮೀಪುರಂನಲ್ಲಿರುವ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಟಿಟಿ ಹಾಲ್‌ನಲ್ಲಿ ಟೂರ್ನಿ ನಡೆಯಲಿದೆ.ವಿವರಗಳು ಮತ್ತು ಹೆಸರು ನೋಂದಾಯಿಸಲು ಮುಖ್ಯ ರೆಫರಿ ಕೆ. ರಾಮಸ್ವಾಮಿ, ಎಸ್-1, ಸರೋವರ ಅಪಾರ್ಟ್‌ಮೆಂಟ್, 32, ರಾಜರಾಜೇಶ್ವರಿನ ದೇವಸ್ಥಾನ ರಸ್ತೆ, ಬಸವನಗುಡಿ, ಬೆಂಗಳೂರು (ಮೊ: 9483960782) ಅಥವಾ ಇಮೇಲ್ kramaswamy30@gmail.com ಅನ್ನು ಸಂಪರ್ಕಿಸಬೇಕು ಎಂದು ಸಂಘಟನಾ ಕಾರ್ಯದರ್ಶಿ ಎನ್. ರಾಜಶೇಖರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry