ನಾಳೆ ಕೃಷ್ಣ- ಕ್ಲಿಂಟನ್ ಭೇಟಿ ಸಂಭವ

ಸೋಮವಾರ, ಮೇ 27, 2019
28 °C

ನಾಳೆ ಕೃಷ್ಣ- ಕ್ಲಿಂಟನ್ ಭೇಟಿ ಸಂಭವ

Published:
Updated:

ನ್ಯೂಯಾರ್ಕ್ (ಪಿಟಿಐ): ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಮತ್ತು ಅಮೆರಿಕದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್  ಸೋಮವಾರ ಇಲ್ಲಿ ಭೇಟಿಯಾಗುವ ಕಾರ್ಯಕ್ರಮವಿದೆ. ಆದರೆ ಇದು ಇನ್ನೂ ಖಚಿತ ಆಗಬೇಕಿದೆ ಎಂದು ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ರಂಜನ್ ಮಥಾಯ್ ಹೇಳಿದ್ದಾರೆ.ವಿಶ್ವಸಂಸ್ಥೆಯ ಮಹಾಧಿವೇಶನದ ಸಂದರ್ಭದಲ್ಲಿ ಬರಾಕ್ ಒಬಾಮ ಮತ್ತು ಸಿಂಗ್ ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕ ನಡುವೆ ಅಪನಂಬಿಕೆ ಹೆಚ್ಚುತ್ತಿದೆಯೇ ಎಂಬ ಪ್ರಶ್ನೆಗೆ, ಒಬಾಮ ಇಲ್ಲಿಂದ ತೆರಳಿದ ಬಳಿಕ ಪ್ರಧಾನಿ ಮನಮೋಹನ್ ಸಿಂಗ್   ನ್ಯೂಯಾರ್ಕ್‌ಗೆ ಆಗಮಿಸಿದರು. ಹೀಗಾಗಿ ದ್ವಿಪಕ್ಷೀಯ ಸಭೆ ಸಾಧ್ಯವಾಗಲಿಲ್ಲ ಎಂದು ಮಥಾಯ್ ಉತ್ತರಿಸಿದ್ದಾರೆ. ಆದರೆ, ನವೆಂಬರ್‌ನಲ್ಲಿ ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಉಭಯ ನಾಯಕರು ಭೇಟಿಯಾಗಲು ಸಾಧ್ಯವಿದೆ ಎಂದು ಮಥಾಯ್  ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry