ಬುಧವಾರ, ಮೇ 18, 2022
23 °C

ನಾಳೆ ಸಂಚಾರ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಮಂದಗೆರೆ- ಹೊಳೆನರಸೀಪುರ ಮಧ್ಯೆ ಮಾನವ ರಹಿತ ಲೆವೆಲ್ ಕ್ರಾಸಿಂಗ್‌ನಲ್ಲಿ ಸಬ್‌ವೇ ನಿರ್ಮಾಣ ಮಾಡಬೇಕಿರುವುದರಿಂದ ಇದೇ 24ರಂದು ಬೆಳಿಗ್ಗೆ 11.50ರಿಂದ ರಾತ್ರಿ 7.30ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ನಿರ್ಬಂಧಿಸಲಾಗಿದೆ.

 

ಆ ದಿನ ಶಿವಮೊಗ್ಗ ಟೌನ್-ಮೈಸೂರು ಪ್ಯಾಸೆಂಜರ್ (ನಂ. 56269) ರೈಲು ಹಾಸನ ಮತ್ತು ಮೈಸೂರು ನಡುವೆ ಸಂಚರಿಸುವುದಿಲ್ಲ. ಈ ರೈಲು ಹಾಸನದಿಂದಲೇ ವಾಪಸ್ ಅರಸೀಕೆರೆಗೆ ತೆರಳಲಿದೆ. ಮೈಸೂರು-ಅರಸೀಕೆರೆ ಪ್ಯಾಸೆಂಜರ್ ರೈಲು  ಸಂಚಾರವನ್ನೂ  ರದ್ದುಗೊಳಿಸಲಾಗಿದೆ. ರಾತ್ರಿ 7.15ಕ್ಕೆ ಹೊಳೆನರಸೀಪುರದಿಂದ ತೆರಳಬೇಕಿರುವ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (ನಂ. 56265) ರೈಲು ಹೊಳೆನರಸೀಪುರದಿಂದ 15 ನಿಮಿಷ ತಡವಾಗಿ ಹೊರಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.