ಕಾರವಾರ: ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲು ನಗರಸಭೆಯು ಅನುಸರಿಸುತ್ತಿರುವ ಹಲವು ಮಾರ್ಗೋಪಾಯಗಳಲ್ಲಿ ‘ಟೆಮಿಫೋಸ್’ (Temephos) ಎಂಬ ಔಷಧ ಕೂಡ ಒಂದು. ಕಟ್ಟಿಗೆ ಪುಡಿಗೆ ಇದರ ದ್ರಾವಣವನ್ನು ಬೆರೆಸಿ ತಯಾರಿಸಿದ ಉಂಡೆಯನ್ನು ನಗರದ ವಿವಿಧೆಡೆ ನಿಂತ ನೀರಿನಲ್ಲಿ ಬಿಡಲಾಗುತ್ತಿದೆ.

ನ್ಯೂ ಕೆಎಚ್ಬಿ ಕಾಲೊನಿ, ಹಬ್ಬುವಾಡ ಹಾಗೂ ಡೆಂಗಿ ರೋಗ ಲಕ್ಷಣಗಳು ಕಂಡುಬರುತ್ತಿರುವ ಪ್ರದೇಶಗಳ ವ್ಯಾಪ್ತಿಯಲ್ಲಿ ಈ ಔಷಧಮಿಶ್ರಿತ ಉಂಡೆಯನ್ನು ಬಳಕೆ ಮಾಡಲಾಗುತ್ತಿದೆ. ಇದು ನೀರಿನಲ್ಲಿ ನಿಧಾನವಾಗಿ ಹರಡಿ, ಸೊಳ್ಳೆಗಳ ಲಾರ್ವಾಗಳನ್ನು ನಾಶ ಮಾಡುತ್ತದೆ. ಲಾರ್ವಾ ಪ್ರೌಢಾವಸ್ಥೆಗೆ ಬರುವ ಮುನ್ನವೇ ಸಾಯುತ್ತವೆ. ಹೀಗಾಗಿ ಈ ದ್ರಾವಣವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಡೆಂಗಿಯನ್ನು ನಿಯಂತ್ರಿಸಲು ಪ್ರಮುಖವಾಗಿ ಬಳಸಲಾಗುತ್ತಿದೆ.

ಫಾಗಿಂಗ್ ಕಾರ್ಯಾಚರಣೆ: ‘ಸೊಳ್ಳೆಗಳನ್ನು ನಿಯಂತ್ರಿಸಲು ನಗರದ ಹಲವೆಡೆ ಫಾಗಿಂಗ್ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ಕೆಎಚ್ಬಿ ಕಾಲೊನಿಯ ಸೇರಿದಂತೆ ಬಹುತೇಕ ವಾರ್ಡ್ಗಳಲ್ಲಿ ಫಾಗಿಂಗ್ ಕಾರ್ಯಾಚರಣೆ ನಡೆಸಲಾ ಗಿದೆ. ನಗರಸಭೆಯಲ್ಲಿ ಕೇವಲ 2 ಫಾಗಿಂಗ್ ಯಂತ್ರಗಳಿತ್ತು. ಇದೀಗ ₹ 43 ಸಾವಿರ ವೆಚ್ಚದಲ್ಲಿ ಮತ್ತೊಂದು ಯಂತ್ರವನ್ನು ಖರೀದಿಸಲಾಗಿದೆ. ಅಲ್ಲದೇ ಈ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ನಗರಸಭೆ ಆರೋಗ್ಯ ನಿರೀಕ್ಷಕ ಯಾಕೂಬ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷ ತಂಡ ರಚನೆ: ನಗರದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ವಿಶೇಷವಾಗಿ 6 ಮಂದಿಯ ತಂಡ ವೊಂದನ್ನು ರಚಿಸಲಾಗಿದೆ. ಈ ತಂಡವು ರಸ್ತೆಬದಿಯಲ್ಲಿ ಬಿದ್ದ ಕಸವನ್ನು ಸಂಗ್ರಹಿಸಿ, ಸ್ಥಳಾಂತರಿಸುತ್ತದೆ. ಇದಕ್ಕೆ ಅಗತ್ಯವಾಗಿ ಬೇಕಾದ ಪರಿಕರಗಳನ್ನು ಒದಗಿಸಲಾ ಗಿದೆ. ಅಲ್ಲದೇ ನಗರಸಭೆ ವ್ಯಾಪ್ತಿಯೊಳಗೆ ಮರ ಗಳು ನೆರಕ್ಕುರುಳಿ ದರೆ ಈ ತಂಡವೇ ಕಾರ್ಯ ಪ್ರವೃತ್ತ ವಾಗುತ್ತದೆ. ಇದಕ್ಕಾಗಿ ಅವರಿಗೆ ಮರ ಕತ್ತರಿಸುವ ಯಂತ್ರಗಳನ್ನೂ ಸಹ ನೀಡಲಾಗಿದೆ.

ಜನರಲ್ಲಿ ಜಾಗೃತಿ: ಡೆಂಗಿ ಜ್ವರವನ್ನು ತಡೆಗಟ್ಟಲು ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಗರಸಭೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿ ಕರಪತ್ರವನ್ನು ಮಾಡಿಸಲಾಗಿದ್ದು, ಎಲ್ಲ ಮನೆಗಳಿಗೂ ಹಂಚಲಾಗುತ್ತಿದೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ರೋಗ ಲಕ್ಷಣಗಳು ಕಂಡುಬಂದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಲು ತಿಳಿಸಲಾಗುತ್ತಿದೆ’ ಎಂದು ನಗರಸಭೆಯ ಪರಿಸರ ಎಂಜಿನಿಯರ್ ಮಲ್ಲಿಕಾರ್ಜುನ್ ತಿಳಿಸಿದರು.

ಅನೈರ್ಮಲ್ಯ ತಾಂಡವ: ‘ನಗರಸಭೆ ಅಧಿಕಾರಿಗಳು ನಗರದೆಲ್ಲೆಡೆ ಸ್ವಚ್ಛತೆಯನ್ನು ಕೈಗೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ನಗರದ ಹಲವೆಡೆ ರಸ್ತೆಬದಿಗಳಲ್ಲಿ ಮಳೆ ಚಾಚಿಕೊಂಡಿದೆ. ಗಟಾರ ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿ ತುಳುಕುತ್ತಿದೆ. ಹೀಗಾಗಿ ಡೆಂಗಿ ರೋಗ ನಿಯಂತ್ರಣಕ್ಕೆ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಕೆ.ಎಚ್.ಬಿ ಕಾಲೊನಿಯ ವಿನಯ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.