ಶಿವಮೊಗ್ಗ: ವೈಜ್ಞಾನಿಕ ಚಿಂತನೆ ಹಾಗೂ ತರ್ಕಗಳ ಮೂಲಕ ಪರಿಸರದ ನಿಗೂಢತೆಯ ಶೋಧ ನಡೆಸಿದ ಅಪರೂಪದ ಲೇಖಕ ಪೂರ್ಣಚಂದ್ರ ತೇಜಸ್ವಿ ಎಂದು ಚಿಕ್ಕಮಗಳೂರಿನ ಪತ್ರಕರ್ತ ಸ. ಗಿರಿಜಾಶಂಕರ್ ಹೇಳಿದರು.

7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ನಡೆದ ‘ನಾವು-ನಮ್ಮವರು’ ಗೋಷ್ಠಿಯಲ್ಲಿ ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ- ಪರಿಸರ’ ವಿಷಯದ ಕುರಿತು ಮಾತನಾಡಿದ ಅವರು, ನಿಸರ್ಗವೇ ತೇಜಸ್ವಿ ಬರಹದ ಹಿಂದಿರುವ ಒತ್ತಡವಾಗಿತ್ತು ಎಂದರು.

ಕುವೆಂಪು ಪರಿಸರವನ್ನು ದೈವಸಾಕ್ಷಾತ್ಕಾರ ಎಂಬ ದೃಷ್ಟಿಯಿಂದ ನೋಡಿ ಅದರ ಸೌಂದರ್ಯವನ್ನು, ಸೃಷ್ಟಿಶೀಲತೆಯನ್ನು ಭಾವಾವೇಶಕ್ಕೆ ಒಳಗಾಗಿ ಸಾಹಿತ್ಯ ರಚಿಸಿದರೆ, ನಂತರದ ಕಾಲಘಟ್ಟದಲ್ಲಿ ಪರಿಸರದ ಮೇಲೆ ಆಗುತ್ತಿರುವ ಆಕ್ರಮಣವನ್ನು ಕುರಿತ ಆತಂಕವನ್ನು ಸ್ಥಾಯಿಭಾವವಾಗಿಟ್ಟುಕೊಂಡು ಸಾಹಿತ್ಯ ರಚಿಸಿದ್ದು ತೇಜಸ್ವಿ ಅವರ ವಿಶೇಷತೆ ಎಂದು ಹೇಳಿದರು.

ನಾಶದ ಅಂಚಿನಲ್ಲೆ ವಿಕಾಸದ ಎಳೆ ಕೂಡ ಇರುತ್ತದೆ ಎಂಬ ನಂಬಿಕೆ ತೇಜಸ್ವಿ ಅವರದ್ದಾಗಿತ್ತು. ನಿಸರ್ಗದಲ್ಲಿ ನಿಶ್ಯೇಷ ಎಂಬುದು ಇಲ್ಲ, ಏನಿದ್ದರೂ ಎಲ್ಲವೂ ಶೇಷ ಎಂದು ಪ್ರತಿಪಾದಿಸಿದ್ದ ಅವರು ನಿಸರ್ಗದ ರಹಸ್ಯವನ್ನು ಅರ್ಥ ಮಾಡಿಕೊಳ್ಳುವ ಹಾದಿಯನ್ನು ಕೊನೆಯವರೆಗೂ ಕ್ರಮಿಸುತ್ತಲೇ ಬಂದ ಲೇಖಕ ಎಂದು ಅಭಿಪ್ರಾಯಪಟ್ಟರು.

ಪ್ರೊ.ಕೆ. ರಾಮದಾಸ್ ಕುರಿತು ಸಾಹಿತಿ ವಿಲಿಯಂ ಮಾತನಾಡಿ, ಪ್ರಾಮಾಣಿಕತೆ, ಕಳಕಳಿ, ಪ್ರಾಂಜಲತೆ, ನಿಷ್ಟುರತೆ, ಪಕ್ಷಾತೀತ ಹಾಗೂ ಜಾತ್ಯತೀತ ಮನೋಭಾವ ಹೊಂದಿದ್ದ ಪ್ರಖರ ಚಿಂತಕ ರಾಮದಾಸ್ ಕರ್ನಾಟಕದ ಅನೇಕ ಹೋರಾಟಗಳಿಗೆ ಸ್ಪೂರ್ತಿ ಆಗಿದ್ದವರು ಎಂದರು.

ಕೆ.ವಿ. ಸುಬ್ಬಣ್ಣ ಅವರ ಕುರಿತು ಡಾ.ಬಿ.ಜಿ. ಚನ್ನೇಶ್ ಮಾತನಾಡಿ, ಸೃಜನಶೀಲ ಲೇಖಕರು ಅತ್ಯುತ್ತಮ ಸಂಘಟಕರಾಗಲು ಸಾಧ್ಯವಿಲ್ಲ ಎಂಬ ಮಾತಿಗೆ ಸುಬ್ಬಣ್ಣ ಅಪವಾದವಾಗಿದ್ದರು. ಭಾರತದ ಗ್ರಾಮೀಣ ಜನತೆ ನಗರದತ್ತ ಮುಖ ಮಾಡಿರುವ ಹೊತ್ತಿಗೆ ನಗರದವರು ಹಳ್ಳಿಯನ್ನು ನೋಡುವಂತೆ ಮಾಡಿದ ಕಾರಣಕ್ಕೆ ಸುಬ್ಬಣ್ಣ ‘ಗ್ರಾಮ ಗಾಂಧಿ’ಯಂತೆ ನಮಗೆ ಕಾಣುತ್ತಾರೆ ಎಂದರು.

ಡಾ.ಹಾ.ಮಾ. ನಾಯಕ ಕುರಿತು ಡಾ.ರಾಜೇಶ್ವರಿ ಮಾತನಾಡಿ, ಜಾನಪದ ಅಧ್ಯಯನಕ್ಕೆ ವೈಜ್ಞಾನಿಕ ನೆಲೆ ಕಲ್ಪಿಸಿದ ಅವರು ಅಂಕಣ ಬರಹಗಳಿಗೆ ಸಾಹಿತ್ಯದ ಸ್ಪರ್ಶ ಕೊಟ್ಟವರು. ಲವಲವಿಕೆಯ ಬರವಣಿಗೆಯ ಮೂಲಕ ಮಾನವೀಯ ಮೌಲ್ಯಗಳಿಗೆ ಸ್ಪಂದಿಸಿದ ಅವರು ಕನ್ನಡ ನಾಡು ನುಡಿ ಸಂಸ್ಕೃತಿಯ ಬಗ್ಗೆ ಹೊಂದಿದ್ದ ಕಳಕಳಿ ವಿಶಿಷ್ಟವಾದದ್ದು ಎಂದರು.

ಡಾ.ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಜಿ.ವಿ. ಜಯಾ ರಾಜಶೇಖರ್ ಹಾಜರಿದ್ದರು. ರತ್ನಯ್ಯ ಸ್ವಾಗತಿಸಿದರು. ಎಂ.ಆರ್. ರಘು ವಂದಿಸಿದರು. ಸಂಪತ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.