ಶನಿವಾರ, ಮೇ 8, 2021
26 °C

ನಿರೀಕ್ಷೆಯಿದೆ, ಒತ್ತಡವಿಲ್ಲ: ಅರವಿಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಈ ಸಲದ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಕನಸಿದೆ. ನಿರೀಕ್ಷೆಯಿದೆ. ಆದರೆ ಒತ್ತಡವಿಲ್ಲ~ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಕರ್ನಾಟಕದ ಕ್ರಿಕೆಟಿಗ ಎಸ್. ಅರವಿಂದ್ ಹೇಳಿದರು.ಮೊದಲ ಗೆಲುವಿನ ಹುಮ್ಮಸ್ಸಿನಲ್ಲಿರುವ ಆರ್‌ಸಿಬಿ ತಂಡದ ಕೆಲ ಆಟಗಾರರು ಭಾನುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) `ಬಿ~ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಿದ್ದರು.ಈ ವೇಳೆ ಮಾತನಾಡಿದ `ಬರ್ತಡೇ ಬಾಯ್~ ಅರವಿಂದ್, `ಆರ್ ವಿನಯ್ ಕುಮಾರ್ ತಂಡಕ್ಕೆ ಮರಳಿರುವುದು ತುಂಬಾ ಖುಷಿ ನೀಡಿದೆ. ಅನೇಕ ಸಲ ನಾನು ಅವರಿಂದ ಸಲಹೆ ಪಡೆದಿದ್ದೇನೆ. ತಂಡದಲ್ಲಿ ನನ್ನ ಸ್ಥಾನವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಯಾವುದೇ ಜವಾಬ್ದಾರಿ ಲಭಿಸಿದರೂ, ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ~ ಎಂದು ಅವರು ಹೇಳಿದರು.ಭಾನುವಾರ 28ನೇ ವರ್ಷಕ್ಕೆ ಕಾಲಿಟ್ಟ ಅರವಿಂದ್ ತಂಡದ ಗೆಳೆಯರೊಂದಿಗೆ ಜನ್ಮದಿನದ ಸಂಭ್ರಮ ಆಚರಿಸಿಕೊಂಡರು. ಕೇಕ್ ಕತ್ತರಿಸಿ, ಎಡಗೈ ಬೌಲರ್‌ನ ಮುಖಕ್ಕೆ ಕೇಕ್ ಹಚ್ಚಿ ಗೆಳೆಯರು ಸಂಭ್ರಮಿಸಿದರು.

`ನೋವಿನಿಂದ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ನೆಟ್‌ನಲ್ಲಿಯೂ ಉತ್ತಮವಾಗಿ ಅಭ್ಯಾಸ ಮಾಡುತ್ತಿದ್ದೇನೆ~ ಎಂದು ಈ ಆಟಗಾರ ಹೇಳಿದರು. ಕಳೆದ ಸಲದ ರಣಜಿ ಋತುವಿನ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಮೊಣಕಾಲು ನೋವಿನ ಗಾಯಕ್ಕೆ ಅರವಿಂದ್ ತುತ್ತಾಗಿದ್ದರು. ಕಳೆದ ಸಲದ ಐಪಿಎಲ್‌ನಲ್ಲಿ 13 ಪಂದ್ಯಗಳಿಂದ 21 ವಿಕೆಟ್ ಪಡೆದು ಮಿಂಚಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.