ಶನಿವಾರ, ಮೇ 8, 2021
24 °C

ನಿವಾಸಿಗಳ ದಸರಾ ಬಹಿಷ್ಕಾರದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಪಟ್ಟಣದ ಸ್ಮಾರಕಗಳ 300 ಮೀಟರ್ ವ್ಯಾಪ್ತಿ ಪ್ರದೇಶವನ್ನು ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣ ಸರ್ವೆ ನಡೆಸಿ ಎಲ್ಲೆ ಗುರುತಿಸುವ ಕಾರ್ಯಕ್ಕೆ ಮುಂದಾಗಿದ್ದು, ಇಲ್ಲಿನ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ.ಸರ್ವೆ ಕಾರ್ಯವನ್ನು ಕೂಡಲೇ ಸ್ಥಗಿತಗೊಸಬೇಕು. ಇಲ್ಲದಿದ್ದರೆ ಸೆ.30ರಿಂದ ಪಟ್ಟಣದಲ್ಲಿ ನಡೆಯುವ ದಸರಾ ಕಾರ್ಯಕ್ರಮವನ್ನು ಸಮಸ್ತ ನಾಗರಿಕರು ಬಹಿಷ್ಕರಿಸಲಿದ್ದಾರೆ. ಸಂಸದರು, ಶಾಸಕರು, ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಬೇಕು. ಜನ ವಿರೋಧಿ ಶಾಸನ ಮತ್ತು ಅವೈಜ್ಞಾನಿಕ ಸರ್ವೆ ಕಾರ್ಯದಿಂದ ಜನರಲ್ಲಿ ಉಂಟಾಗಿರುವ ತಳಮಳಕ್ಕೆ ಉತ್ತರ ನೀಡಬೇಕು ಎಂದು ಶ್ರೀರಂಗಪಟ್ಟಣ- ಗಂಜಾಂ ಆಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಗಂಜಾಂ ನರಸಿಂಹ ಸ್ವಾಮಿ, ಕೆ.ಬಲರಾಂ ಒತ್ತಾಯಿಸಿದರು. ಸರ್ವೆ ಕಾರ್ಯ ಮುಂದುವರೆಸಿದ್ದೇ ಆದರೆ ದಸರಾ ಕಾರ್ಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಗುರುವಾರ ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಸಭೆಯಲ್ಲಿ ಒಕ್ಕೊರಲ ಎಚ್ಚರಿಕೆ ನೀಡಿದರು.ಸ್ಮಾರಕಗಳ 100 ಮೀಟರ್ ಪ್ರದೇಶವನ್ನು ನಿಷೇಧಿತ ಹಾಗೂ ಅದರಾಚೆಗಿನ 200 ಮೀಟರ್ ಪ್ರದೇಶವನ್ನು ನಿಯಂತ್ರಿತ ಪ್ರದೇಶವೆಂದು ಈಗಾಗಲೇ ಘೋಷಿಸಲಾಗಿದೆ. ಸ್ಮಾರಕದ ಸಮೀಪ ವಾಸಿಸುವ ವರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಸಂಶಯ ಮನೆ ಮಾಡಿದೆ. ಪಟ್ಟಣದಲ್ಲಿ ಸರ್ವೆ ಕಾರ್ಯ ನಡೆಸುವ ಮೂಲಕ ಎಎಸ್‌ಐ ಜನರಿಗೆ `ಗುಮ್ಮ~ನಾಗಿ ಭೀತಿ ಹುಟ್ಟಿಸಿದೆ. ಇದರಿಂದ ಜನರು ಮನೆ, ನಿವೇಶನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಸ್ಮಾರಕ ಸಂರಕ್ಷಿ ಸುವ ಹೆಸರಿನಲ್ಲಿ ನೂರಾರು ವರ್ಷಗಳಿಂದ ಇಲ್ಲಿ ನೆಲೆ ನಿಂತಿರುವ ಜನರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಯುತ್ತಿದೆ. ಅವನತಿಯ ಅಂಚಿನಲ್ಲಿರುವ ಸ್ಮಾರಕ ಗಳನ್ನು ಉಳಿಸಿಕೊಳ್ಳಲು ಪ್ರಾಚ್ಯವಸ್ತು ಹಾಗೂ ಎಎಸ್‌ಐ ವಿಫಲವಾಗಿದ್ದು, ಜನರ ನೆಮ್ಮದಿ ಭಂಗ ತರುತ್ತಿದೆ ಎಂದು ಪುರಸಭೆ ಅಧ್ಯಕ್ಷ ಶಿವಾಜಿರಾವ್ ಸೇರಿದಂತೆ ಸದಸ್ಯರು, ಹಿರಿಯ ನಾಗರಿಕರು ಟೀಕಿಸಿದರು.`ಸ್ಮಾರಕದ 300 ಮೀಟರ್ ವ್ಯಾಪ್ತಿಯಲ್ಲಿ ಮನೆ ಇತರ ಕಟ್ಟಡ ಕಟ್ಟುವವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣ (ಎಎಸ್‌ಐ)ಸ್ಮಾರಕ ಮತ್ತು ಅದರ ನಿಷೇಧಿತ-ನಿಯಂತ್ರಿತ ಎಲ್ಲೆಯನ್ನು ಮಾತ್ರ ಗುರುತಿಸುತ್ತದೆ. ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಾರೆ ಎಂಬುದು ನಿಜವಲ್ಲ~ ಎಂದು ಎಎಸ್‌ಐ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.