ಪೂಂಚ್, ಜಮ್ಮು ಮತ್ತು ಕಾಶ್ಮೀರ (ಪಿಟಿಐ): ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ `ಖಂಡಿತವಾಗಿಯೂ~ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವೆನು ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ನುಡಿದಿದ್ದಾರೆ.

ದೋನಿ ಅವರಿಗೆ ಕಳೆದ ವರ್ಷ ಭೂಸೇನೆಯ ಗೌರವ ಲೆಫ್ಟಿನೆಂಟ್ ಕರ್ನರ್ ಪದವಿ ನೀಡಲಾಗಿತ್ತು. ಶನಿವಾರ ಸಿಯಾಚಿನ್ಗೆ ಭೇಟಿ ನೀಡಿದ ದೋನಿ ಸೈನಿಕರ ಜೊತೆ ಕಾಲ ಕಳೆದರು. ಈ ಸಂದರ್ಭ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದರು. `ಕ್ರಿಕೆಟ್ನಿಂದಾಗಿ ನಾನು ಇದೀಗ ಇಲ್ಲಿಗೆ ಬಂದಿದ್ದೇನೆ. ಆದ್ದರಿಂದ ಈಗ ಏನಿದ್ದರೂ ಕ್ರಿಕೆಟ್ನತ್ತ ಮಾತ್ರ ಗಮನ ಕೇಂದ್ರೀಕರಿಸುವೆ. ನಿವೃತ್ತಿಯಾದ ಬಳಿಕ ಖಂಡಿತವಾಗಿಯೂ ಸೇನೆಯಲ್ಲಿ ಸೇವೆ ಸಲ್ಲಿಸಲು ಬಯಸುತ್ತೇನೆ~ ಎಂದು ಹೇಳಿದ್ದಾರೆ.

ದೋನಿ ಭಾನುವಾರ ಉಧಂಪುರ ಮತ್ತು ಲೇಹ್ಗೆ ಭೇಟಿ ನೀಡಲಿದ್ದಾರೆ. ಆ ಬಳಿಕ ಬಾರಾಮುಲ್ಲಾ ಜಿಲ್ಲೆಗೆ ತೆರಳುವರು. ಅಲ್ಲಿನ ಶೌಕತ್ ಅಲಿ ಕ್ರೀಡಾಂಗಣದಲ್ಲಿ ನಡೆಯುವ ಕಾಶ್ಮೀರ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಫೈನಲ್ ಪಂದ್ಯವನ್ನು ವೀಕ್ಷಿಸಲಿದ್ದಾರೆ.

`ಸೇನಾಧಿಕಾರಿಗಳ ಕುಟುಂಬದ ಸದಸ್ಯರು ವರ್ಷದ ಈ ಅವಧಿಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಆದ್ದರಿಂದ ಅವರ ಜೊತೆಯೂ ಮಾತನಾಡುವ ಅವಕಾಶ ಲಭಿಸಿತು. ಇದೊಂದು ವಿಶೇಷ ಅನುಭವ~ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.