ನಿವೃತ್ತ ಅಧಿಕಾರಿಗಳ ಸಂಘ ಅಸ್ತಿತ್ವಕ್ಕೆ

7

ನಿವೃತ್ತ ಅಧಿಕಾರಿಗಳ ಸಂಘ ಅಸ್ತಿತ್ವಕ್ಕೆ

Published:
Updated:

ಕೋಲಾರ:  ರೇಷ್ಮೆ ಇಲಾಖೆಯ ನಿವೃತ್ತ ಅಧಿಕಾರಿಗಳ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಇತ್ತೀಚೆಗೆ ಬೆಂಗಳೂರಿನ ಕಬ್ಬನ್‌ಪಾರ್ಕ್‌ನಲ್ಲಿರುವ ಎನ್‌ಜಿಓ ಸಭಾಂಗಣದಲ್ಲಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸಿ.ಎಂ.ಕೃಷ್ಣಪ್ಪ ಸಂಘವನ್ನು ಉದ್ಘಾಟಿಸಿದರು. ನಿವೃತ್ತ ಅಧಿಕಾರಿಗಳ ಸಂಘ ಅಸ್ತಿತ್ವಕ್ಕೆ ಬಂದಿರುವುದು ಶ್ಲಾಘನೀಯ. ಸಂಘವನ್ನು ಮುಂದುವರಿಸಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ 10 ಮಂದಿ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಸಂಘದ ಅಧ್ಯಕ್ಷ, ನಿವೃತ್ತ ಹೆಚ್ಚುವರಿ ನಿರ್ದೇಶಕ ಕೆ.ವೀರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಲಾಖೆ ಆಯುಕ್ತೆ ಎನ್.ನಾಗಲಾಂಬಿಕಾ ದೇವಿ ಉಪಸ್ಥಿತರಿದ್ದರು. ಸಂಘದ ಸದಸ್ಯ, ನಿವೃತ್ತ ಉಪನಿರ್ದೇಶಕ  ಜಿ.ವೆಂಕಟಪ್ಪ, ಇಲಾಖೆಯಲ್ಲಿ ಸೇವೆ ಸಲ್ಲಿಸಿ 2010ರಲ್ಲಿ ನಿಧನರಾದ ಅಧಿಕಾರಿಗಳ ಹೆಸರುಗಳನ್ನು ಓದಿದರು. ನಾಗರತ್ನಮ್ಮ ಸ್ವಾಗತಿಸಿದರು. ಎನ್.ರಾಮಕೃಷ್ಣಪ್ಪ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry