ನಾಪೋಕ್ಲು: `ಕುಡಿಯಲು ನಮಗೊಂದಿಷ್ಟು ನೀರು ಕೊಡಿ~
- ಇದು ಬೇತು ಗ್ರಾಮಸ್ಥರ ಅಳಲು. ಈ ಗ್ರಾಮದಲ್ಲಿ ನೀರು ಪೂರೈಕೆಗಾಗಿ ವರ್ಷಗಳ ಹಿಂದೆ ದೊಡ್ಡ ಯೋಜನೆಯೇ ರೂಪುಗೊಂಡಿದೆ. ಸ್ವಜಲಧಾರಾ ಯೋಜನೆಯಡಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಓವರ್ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಟ್ಯಾಂಕ್ ಪೂರ್ತಿ ಖಾಲಿ.

ಕಳೆದ ಎರಡು ಮೂರು ತಿಂಗಳಿಂದ ಟ್ಯಾಂಕ್ಗೆ ನೀರು ತುಂಬಿಸಬೇಕಾಗಿದ್ದ ಮೋಟಾರು ಪಂಪ್ ಕೆಟ್ಟುಹೋಗಿ ನೀರು ಪೂರೈಕೆ ಸ್ಥಗಿತಗೊಂಡಿದೆ. ಗ್ರಾಮಸ್ಥರಿಗೆ ನೀರಿನ ತತ್ವಾರ ಉಂಟಾಗಿದೆ. ಹಲವು ದಿನಗಳಿಂದ ಗ್ರಾಮಸ್ಥರು ನೀರು ಪೂರೈಕೆ ಮಾಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ.

ಮಳೆಗಾಲದಲ್ಲಿ ಧಾರಾಳವಾಗಿ ನೀರು ಹರಿದು ಬರುತ್ತಿತ್ತು. ಆದರೆ ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಇದೆ. ನೀರಿನ ಅಗತ್ಯವಿರುವ ಈ ದಿನಗಳಲ್ಲಿ ನೀರು ಪೂರೈಕೆ ಇಲ್ಲದೆ ಬಹಳ ಸಮಸ್ಯೆ ಎದುರಿಸುವಂತಾಗಿದೆ ಎಂಬುದು ಗ್ರಾಮಸ್ಥರ ಅಳಲು. ಬೇಸಿಗೆ ತಾಪ ಏರುತ್ತಿರುವ ದಿನಗಳಲ್ಲಿ ಹಲವೆಡೆ ಬಾವಿಗಳು ಬತ್ತಿವೆ. ನೀರಿನ ಸೆಲೆಗಳಿಗಾಗಿ ದೂರ ಸಾಗಬೇಕು. ಇಂತಹ ವೇಳೆಯಲ್ಲೇ ನೀರು ಪೂರೈಕೆಗೆ ಸಂಬಂಧಿಸಿದಂತೆ ಮೋಟರ್ ಪಂಪ್ ಕೆಟ್ಟಿದ್ದು, ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.

ಹತ್ತು ಅಶ್ವ ಶಕ್ತಿಯ ಮೋಟರ್ ಪಂಪ್ ದುರಸ್ತಿಯಾಗಿ ಬರಲು ಬರೋಬ್ಬರಿ ಎರಡು ತಿಂಗಳಾಗಿವೆ. ಇದೀಗ ಹಾಳಾಗಿರುವ ಪೈಪ್ಗಳನ್ನು ದುರಸ್ತಿಪಡಿಸಿ ನೀರು ಪೂರೈಕೆ ಮಾಡಲು ಗ್ರಾಮ ಪಂಚಾಯಿತಿ ಕ್ರಮ ಕೈಗೊಂಡಿದ್ದು, ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎಂದು ಗ್ರಾಮಸ್ಥರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

50 ಸಾವಿರ ಲೀಟರ್ ಸಾಮರ್ಥ್ಯವುಳ್ಳ ನೀರಿನ ಟ್ಯಾಂಕಿಗೆ ನೀರು ಪೂರೈಕೆ ಮಾಡಲು 3 ಕಿ.ಮೀ. ದೂರದಲ್ಲಿ ಎತ್ತುಕಡು ಹೊಳೆಯ ಬಳಿ ಬಾವಿ ತೋಡಲಾಗಿದೆ. ಮೋಟರ್ ಪಂಪ್ನಲ್ಲಿ ತೊಂದರೆ ಕಾಣಿಸಿಕೊಂಡರೆ ಮಳೆಗಾಲದಲ್ಲಿ ಈ ಸ್ಥಳಕ್ಕೆ ತೆರಳುವುದು ಅಸಾಧ್ಯದ ಮಾತೇ ಸರಿ. ಬೇಸಿಗೆಯ ಈ ದಿನಗಳಲ್ಲಿ ಪಂಪು ಕೆಟ್ಟಿದ್ದು, ದುರಸ್ತಿಪಡಿಸಲು ಎರಡು ತಿಂಗಳು ಬೇಕಾಯಿತು. ಮಳೆಗಾಲದಲ್ಲಾದರೆ ಯಾರೂ ಅತ್ತ ಸುಳಿಯುವಂತೆಯೇ ಇಲ್ಲ.

ಸದ್ಯಕ್ಕೆ ಗ್ರಾ.ಪಂ. ಸದಸ್ಯರೊಬ್ಬರ ಪ್ರಯತ್ನದ ಫಲವಾಗಿ ಬೇತು ಗ್ರಾಮಸ್ಥರಿಗೆ ನೀರು ಪೂರೈಕೆಯಾಗುವ ದಿನಗಳು ಹತ್ತಿರವಿದೆ. ಮುಖ್ಯ ರಸ್ತೆಯಿಂದ ಮೋಟರ್ ಪಂಪ್ ಅಳವಡಿಸಲಾಗಿರುವ ಬಾವಿ ದೂರದಲ್ಲಿರುವುದರಿಂದ ವಿದ್ಯುತ್ ಪೂರೈಕೆಗೆ, ದುರಸ್ತಿಕಾರ್ಯಕ್ಕೆ ಬಹಳ ಸಮಸ್ಯೆ ಉಂಟಾಗಿದೆ.

ಮುಖ್ಯರಸ್ತೆಯ ಬದಿಯಲ್ಲೇ ಎತ್ತುಕಡು ಹೊಳೆಯ ಬದಿಯಲ್ಲಿ ಬಾವಿ ನಿರ್ಮಿಸಿ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ. ಅಂದಾಜು ಹತ್ತುಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಈ ಯೋಜನೆ ಪೂರ್ಣಗೊಂಡ ಬಳಿಕ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಕಾಡದು ಎನ್ನುತ್ತಾರೆ ಗ್ರಾ.ಪಂ. ಸದಸ್ಯ ಅಪ್ಪನೆರವಂಡ ಕಿರಣ್ ಕಾರ್ಯಪ್ಪ.

ಸದ್ಯಕ್ಕಂತೂ ಮೋಟರ್ ಪಂಪಿನ ದುರಸ್ತಿ ನೆಪದಲ್ಲಿ ತಿಂಗಳುಗಟ್ಟಲೆ ನೀರು ಪೂರೈಕೆ ಇಲ್ಲದೇ ಬೇತು ಗ್ರಾಮಸ್ಥರು ದಿನ ಕಳೆದಿದ್ದಾರೆ. ಇನ್ನಾದರೂ ನಿಯಮಿತವಾಗಿ ನೀರು ಪೂರ್ಯೆಕೆ ಆದೀತೇ? ಎಂಬ ನಿರೀಕ್ಷೆಯಲ್ಲಿದ್ದಾರೆ ಊರಿನ ಮಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.