ಭಾನುವಾರ, ಮೇ 9, 2021
19 °C

ನೀರಿನ ಕರ ಹೆಚ್ಚಳ ಆದೇಶ ರ್ದ್ದದುಗೊಳಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಸರಿಯಾಗಿ ಕುಡಿಯುವ ನೀರು ಪೂರೈಕೆ ಮಾಡದಿದ್ದರೂ ನೀರಿನ ಕರ ಹೆಚ್ಚಿಸಿರುವ ನಗರಸಭೆ ಕ್ರಮ ಖಂಡಿಸಿ ಹಾಗೂ ದರ ಏರಿಕೆ ಆದೇಶ ವನ್ನು ರದ್ದುಗೊಳಿಸಬೇಕೆಂದು ನಗರಸಭೆ ವಿರೋಧ ಪಕ್ಷದ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಕಳೆದ ಎರಡ್ಮೂರು ವರ್ಷಗಳಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಈಗಲೂ 10-15 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾ ಗುತ್ತದೆ. ಸಮರ್ಪಕ ನೀರು ಪೂರೈಕೆಗೆ ಇಲ್ಲದೇ ಜನ ನೀರಿಗಾಗಿ ಪರದಾಡು ತ್ತಿದ್ದಾರೆ.

 

ಜನರಿಗೆ ವ್ಯವಸ್ಥಿತವಾಗಿ ನೀರು ಪೂರೈಸಲು ಚಿಂತನೆ ಮಾಡದೇ ನೀರಿನ ಕರ ಹೆಚ್ಚಿಸಿರುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ನಗರಸಭೆ ವಿರೋಧ ಪಕ್ಷದ ನಾಯಕ ಬಾಬುಸಾಬ ಮೋಮಿನಗಾರ ಮಾತನಾಡಿ, ಕುಡಿ ಯುವ ನೀರಿನ ಸಮಸ್ಯೆಯಿಂದ ಈಗಾ ಗಲೇ ತತ್ತರಿಸಿರುವ ನಗರದ ಜನತೆಯ ಮೇಲೆ ನೀರಿನ ಕರವನ್ನು ರೂ 120 ಗಳಿಗೆ ಏರಿಸುವ ಮೂಲಕ ಮತ್ತಷ್ಟು ಹೊರೆ ಹೇರಲಾಗಿದೆ.

 

ನಗರಸಭೆಯ ಈ ನೀರಿನ ಕರ ಜನರಿಗೆ ದುಬಾರಿಯಾ ಗಿದ್ದು, 10-15 ದಿನಕ್ಕೊಮ್ಮೆ ನೀರು ಪೂರೈಸಿದರೆ ಇಷ್ಟೊಂದು ಕರವನ್ನು ಹೇಗೆ ಕಟ್ಟಬೇಕು. ತಕ್ಷಣವೇ ಮೊದಲಿದ್ದ ದರವನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.ಕನಿಷ್ಠ 2-3 ದಿನಕ್ಕೊಮ್ಮೆ ನೀರು ಪೂರೈಸಿದರೆ 100 ರೂ. ದರವನ್ನು ತಿಂಗಳಿಗೊಮ್ಮೆ ಕೊಡಬಹುದು, ಆದರೆ ಕುಡಿಯಲು ನೀರು ಕೊಡದೇ ಇದ್ದಾಗ ಇಷ್ಟೊಂದು ದುಬಾರಿ ಶುಲ್ಕ ಕಟ್ಟಲು ಜನರಿಗೆ ಸಾಧ್ಯವಾಗುವುದಿಲ್ಲ. ತಕ್ಷಣ ದರ ಏರಿಕೆ ಆದೇಶವನ್ನು ರದ್ದುಗೊಳಿ ಸಬೇಕು. ಇಲ್ಲವಾದರೆ, ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.ತಮ್ಮ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗ ಎಚ್.ಜಿ.ಶ್ರೀವರ ಅವರಿಗೆ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಗಣೇಶ ಬಿಷ್ಟಣ್ಣನವರ, ಪರಮೇಶ ಓಲಿ, ಪೀರಸಾಬ್ ಚೋಪದಾರ್, ಅಬ್ದುಲ್‌ರಜಾಕ್ ಜಮಾದಾರ್, ರಿಯಾಜ್‌ಅಹ್ಮದ್ ಸಿಡಗನಾಳ, ಅಬ್ದುಲ್‌ವಹಾಬ್, ಸಿದ್ದಪ್ಪ ಬಿರಾದಾರ, ಎಸ್.ಎನ್. ಸುಂಕದ, ದ್ಯಾಮಣ್ಣ ಅರಸ ನಾಳ, ರಾಮಣ್ಣ ಅಗಡಿ, ಭಾಷಾಸಾಬ ಕಾಲಶೇಖರ ಮೊದಲಾದವರು ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.