ಗುರುವಾರ , ಫೆಬ್ರವರಿ 25, 2021
24 °C

ನೀರಿನ ಟ್ಯಾಂಕ್‌ನಲ್ಲಿ ಕಸದ ರಾಶಿ!

ಪ್ರಜಾವಾಣಿ ವಾರ್ತೆ/ಕೆ.ಎಸ್‌.ಸುನಿಲ್ Updated:

ಅಕ್ಷರ ಗಾತ್ರ : | |

ನೀರಿನ ಟ್ಯಾಂಕ್‌ನಲ್ಲಿ ಕಸದ ರಾಶಿ!

ಗದಗ: ಅವಳಿ ನಗರದ ಅರ್ಧ ಭಾಗಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಸರ್ವೋ ದಯ ಕಾಲೊನಿಯ ಬೃಹತ್ ನೀರಿನ ಟ್ಯಾಂಕ್ ಹಾಗೂ ಬೃಹತ್ ನೀರು ಸಂಗ್ರಹಾಗಾರದಲ್ಲಿ ಕಸದ ರಾಶಿ ಬಿದ್ದಿದೆ. ಇದಕ್ಕೆ ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯವೇ ಪ್ರಮಖ ಕಾರಣ ಎಂಬುದು ಸಾರ್ವ ಜನಿಕರ ಆರೋಪ.ನಗರದ ಜನತೆಗೆ ನೀರು ಪೂರೈಸ ಬೇಕಾಗಿದ್ದ ನೀರು ಸಂಗ್ರಹಾಗಾರದ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸದ ಕಾರಣ ನಿರುಪಯುಕ್ತವಾಗಿದೆ. ಪಕ್ಕ ದಲ್ಲಿಯೇ ಇರುವ ನೀರಿನ ಟ್ಯಾಂಕ್ ಎಂಟು ತಿಂಗಳಿಂದ ಅವಾಸನದ ಹಂಚಿಗೆ ತಲುಪಿದೆ. ಹೀಗಾಗಿ ಸುತ್ತಮುತ್ತಲಿನ ಜನತೆ ನೀರಿಗಾಗಿ ಪರಿತಿಸುವಂತಾಗಿದೆ.ನೀರಿನ ಟ್ಯಾಂಕ್‌  ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಟ್ಯಾಂಕ್‌ ಧ್ವಂಸಗೊಳಿಸಿ ಹತ್ತಿರದಲ್ಲಿ ನೂತನ ಟ್ಯಾಂಕ್‌  ನಿರ್ಮಿಸಿ ಹಾಗೂ ನೀರಿನ ಸಂಗ್ರಹಾಗಾರ ಸ್ವಚ್ಛ ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಜಿಲ್ಲಾಧಿಕಾರಿ ನೀಡಿರುವ ಸೂಚನೆಯೂ ಈವರೆಗೆ ಕಾರ್ಯ ಗತಗೊಂಡಿಲ್ಲ.ಇದನ್ನು ನಗರಸಭೆ ಗಂಭೀರವಾಗಿ ಪರಿಗಣಿಸಿ  ಈಗಾಗಲೇ ಸೂಚಿಸಿರುವ ಸ್ಥಳದಲ್ಲಿ ನೂತನ ನೀರಿನ ಟ್ಯಾಂಕ್ ನಿರ್ಮಿಸಿದ್ದರೆ ಬೇಸಿಗೆಯಲ್ಲಿ ನಗರದ ಜನತೆಗೆ ಅರ್ಧ ನೀರಿನ ಸಮಸ್ಯೆ ಬಗೆ ಹರೆಯುತ್ತಿತ್ತು. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ನೀರಿನ ತೊಂದರೆ ಎದುರಿಸು ವುದು ಮಾತ್ರ ತಪ್ಪಿಲ್ಲ.ಉದ್ಯಾನದ ಆವರಣದಲ್ಲಿರುವ ಟ್ಯಾಂಕ್‌ ಸ್ಥಿತಿ ಒಂದು ರೀತಿಯಾದರೆ ಇನ್ನು ಅಭಿವೃದ್ಧಿ ಕಾಣದೆ ಉದ್ಯಾನ ಅದ್ವಾನಗೊಂಡಿದೆ. ಅಲ್ಲಲ್ಲಿ ಗಿಡ, ಗಂಟಿ ಗಳು ಬೆಳೆದಿದೆ. ಸುತ್ತಮುತ್ತ ತಡೆಗೋಡೆ ಇಲ್ಲದೆ ಇರುವುದರಿಂದ ಪಕ್ಕದಲ್ಲಿರುವ ಬೃಹತ್ ನೀರಿನ ಸಂಗ್ರಹಾಗಾರದಲ್ಲಿ ಕಿಡಿಗೇಡಿಗಳು ರಂಧ್ರ ಕೊರೆದು  ಕಸಕಡ್ಡಿ, ಚಪ್ಪಲಿ, ಖಾಲಿ ಬಾಟಲ್, ಘನತ್ಯಾಜ್ಯ ವಸ್ತುಗಳು ಬಿಸಾಡಿದ್ದಾರೆ.‘ಪ್ರತಿದಿನ ಉದ್ಯಾನದಲ್ಲಿ  ಮಕ್ಕಳು ಆಟವಾಡಲು ಬರುತ್ತಾರೆ.  ಅನಾಹುತಕ್ಕೆ ಅವಕಾಶ ನೀಡದೆ ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನೀರಿನ ಟ್ಯಾಂಕ್ ಶಿಥಿಲ ಗೊಂಡಿರುವುದರಿಂದ ಸಿಮೆಂಟ್ ಉದು ರುತ್ತಿದೆ. ಯಾವಾಗ  ಅನಾಹುತ ಕಾದಿ ದೆಯೋ. ಜೀವ ಕೈಯಲ್ಲಿ ಹಿಡಿದು ಕೊಂಡು ನಡೆದಾಡಬೇಕಾಗಿದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.‘ಕೂಡಲೇ ನೀರಿನ ಟ್ಯಾಂಕ್‌ ಕೆಡವಿ ನೂತನ ಟ್ಯಾಂಕ್‌ ನಿರ್ಮಿಸಿ  ಜನತೆಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕು’ ಎಂದು  ನಿವಾಸಿ ಕಬಾಡರ ಮನವಿ ಮಾಡಿದರು.  ಈ ಬಗ್ಗೆ ನಗರಸಭೆ ಸದಸ್ಯ ಎಂ.ಸಿ.ಶೇಖ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಜಿಲ್ಲಾಧಿಕಾರಿ ಎನ್‌. ಪ್ರಸನ್ನಕುಮಾರ ಅವರೊಂದಿಗೆ ಚರ್ಚಿಸಿ ಶೀಘ್ರವೇ ಈಗಿರುವ ನೀರಿನ ಟ್ಯಾಂಕ್‌ ಕೆಡವಲಾಗುವುದು.ನೂತನ ಟ್ಯಾಂಕ್  ನಿರ್ಮಿಸಿ ಮತ್ತೆ ಎಂದಿನಂತೆ ಜನತೆಗೆ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸ್ವಲ್ಪ ಸಮಯ ಬೇಕಾಗಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.