ಭಾನುವಾರ, ಜೂನ್ 20, 2021
26 °C

ನೀರಿನ ಬವಣೆ ನೀಗಿಸಲು ಅಗತ್ಯ ಕ್ರಮ: ಶಾಸಕ ತಿಪ್ಪೇಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕನಹಟ್ಟಿ: ‘ಮಾ.19ರಂದು ನಡೆಯಲಿರುವ ತಿಪ್ಪೇರುದ್ರಸ್ವಾಮಿ ಜಾತ್ರೆಯ ವೇಳೆಗೆ ಹಿರೇಕೆರೆಯಿಂದ ನಾಯಕನಹಟ್ಟಿಗೆ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ನೇರ್‍ಲಗುಂಟೆ ತಿಪ್ಪೇಸ್ವಾಮಿ ಹೇಳಿದರು.

ಸಮೀಪದ ಹಿರೇಕೆರೆಯಲ್ಲಿ ಶುಕ್ರವಾರ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನಾಯಕನಹಟ್ಟಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.ಅವರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ನಾಯಕನಹಟ್ಟಿ ಜನತೆಗೆ ಶಾಶ್ವತವಾಗಿ ನೀರಿನ ಬವಣೆ ನೀಗಿಸುವ ಸಲುವಾಗಿ ಹಿರೇಕೆರೆಯಲ್ಲಿ ಆರು ಬೋರ್‌ವೆಲ್‌ ಕೊರೆಸಿದ್ದು, ಅಲ್ಲಿಂದ ನಾಯಕನಹಟ್ಟಿಗೆ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.ಓಂ ವೃಕ್ಷ ವೃದ್ಧಿ ಆಶ್ರಮಕ್ಕೆ ಅನುದಾನ:  ಸಮೀಪದ ಮಲ್ಲೋರ ಹಟ್ಟಿ ಯಲ್ಲಿರುವ ಓಂ ವೃಕ್ಷ ವೃದ್ಧಿ ಆಶ್ರಮದಲ್ಲಿ ಸಮುದಾಯ ಭವನ ನಿರ್ಮಿಸಲು ₨ 25 ಲಕ್ಷ ಅನುದಾನ ನೀಡಲಾಗುವುದು. ಹಾಗೆಯೇ ತಳುಕಿನಿಂದ ನಾಯಕನಹಟ್ಟಿ ವರೆಗಿನ ರಸ್ತೆಯನ್ನು ದ್ವಿ ಪಥವನ್ನಾಗಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಆರ್‌ಡಿಪಿಯಿಂದ 7 ಬೋರ್‌ವೆಲ್‌ ಕೊರೆಯಿಸ ಲಾಗಿದ್ದು, ಅಲ್ಲಿಂದ ಮೊಳಕಾಲ್ಮುರು ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದರು.ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತಿಪ್ಪಮ್ಮ, ಸದಸ್ಯರಾದ ಪಾಲಯ್ಯ, ತಿಪ್ಪೇಸ್ವಾಮಿ, ಫಾಲಾಕ್ಷ ಮುಖಂಡ ರಾದ ಗುರುಲಿಂಗಯ್ಯ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಸೈಯದ್‌ ಅನ್ವರ್, ಮಹಾಂತೇಶ್, ಕೌಸರ್ ಭಾಷಾ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.