ಚಿಕ್ಕಬಳ್ಳಾಪುರ:  ನಗರಪ್ರದೇಶದಲ್ಲಿ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಾಡುತ್ತಿದ್ದು, ನೀರಿನ ಸಮಸ್ಯೆ ಪರಿಹರಿಸುವಂತೆ 27ನೇ ವಾರ್ಡಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ. ದಿನದಿಂದ ದಿನಕ್ಕೆ ಕುಡಿಯುವ ಸಿಹಿ ನೀರು ಮತ್ತು ಕೊಳವೆಬಾವಿ ನೀರಿನ ಕೊರತೆ ತಲೆದೋರುತ್ತಿದ್ದು, ಸಮಸ್ಯೆಗಳ ನ್ನು ಪರಿಹರಿಸುವಂತೆ ಆಗ್ರಹಿಸುತ್ತಿದ್ದಾರೆ.

ನಗರಸಭೆಗೆ ಕೆಲವೇ ದಿನಗಳ ಹಿಂದೆಯಷ್ಟೇ ಅದ್ಯಕ್ಷರಾಗಿ ಆಯ್ಕೆಯಾಗಿರುವ ಅಧ್ಯಕ್ಷ ಎಂ.ವಿ.ಭಾಸ್ಕರ್ ಅವರ ಮೇಲೆ ಸಾರ್ವಜನಿಕರು ಒತ್ತಡ ಹೇರುತ್ತಿದ್ದಾರೆ.ನಗರದ ವಾರ್ಡ್ 27ರ ನಿವಾಸಿಗಳು ಸೋಮವಾರ ಭಾಸ್ಕರ್ ಅವರಿಗೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿದರು.

ಸಕಾಲಕ್ಕೆ ನೀರು ಪೂರೈಕೆ ಯಾಗದ ಕಾರಣ ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ಅಳಲು ತೋಡಿಕೊಂಡರು.ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಎಂ.ವಿ.ಭಾಸ್ಕರ್, `ನೀವು ಸಕಾಲಕ್ಕೆ ನೀರಿನ ತೆರಿಗೆ ಪಾವತಿಸಿ. ಸಮಸ್ಯೆ ತನ್ನಿಂದಾ ತಾನೇ ಪರಿಹಾರಗೊಳ್ಳುತ್ತದೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.