ಸೋಮವಾರ, ಜೂನ್ 21, 2021
28 °C

ನೂತನ ರೈಲು ಆರಂಭ: ಕನಸಿಗೆ ರೆಕ್ಕೆಪುಕ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟೂರು: ಹಲವು ವರ್ಷಗಳಿಂದ ಈ ಭಾಗದ ಜನರು ಕಾತುರದಿಂದ ಎದುರು ನೋಡುತ್ತಿದ್ದ ಕೊಟ್ಟೂರು–ಹರಿಹರ ನೂತನ ರೈಲು ಸಂಚಾರ  ಸೋಮವಾರ ಆರಂಭವಾಯಿತು.



ಮಧ್ಯಾಹ್ನ 1.15 ಗಂಟೆಗೆ ಸರಿಯಾಗಿ ಕೊಟ್ಟೂರು ರೈಲು ನಿಲ್ದಾಣದ ಆವರಣದಲ್ಲಿ ಸೇರಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ನೂತನ ರೈಲಿಗೆ ಹಸಿರು ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ಅಲ್ಲದೆ ವೇದಿಕೆಯ ಎಡ ಭಾಗದಲ್ಲಿದ್ದ ಕಾಮಗಾರಿಯ ಶಿಲಾನ್ಯಾಸ ಫಲಕಗಳನ್ನು ಅನಾವ­ರ­ಣಗೊಳಿಸಿದರು.



ನಂತರ ಸಚಿವರು ರೈಲು ಸಂಚಾ­ರಕ್ಕೆ ಹಸಿರು ನಿಶಾನೆ ತೋರುತ್ತಿದ್ದಂತೆ ವೇದಿಕೆಯ ಮುಂಭಾಗ, ನಿಲ್ದಾಣ ಹಾಗೂ ರೈಲಿನಲ್ಲಿ ಕುಳಿತಿದ್ದ ಸಾವಿರಾರು ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮೊದಲ ದಿನ 5 ಬೋಗಿಗಳನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ನವ ವಧುವಿನಂತೆ ಶೃಂಗಾರ­ಗೊಂಡಿದ್ದ 06530 ಸಂಖ್ಯೆಯ ರೈಲು ನಿಲ್ದಾಣ­ದಲ್ಲಿ ಸಾಗುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರು ವಿಜಯದ ನಗೆ ಬೀರಿದರು. ಅಲ್ಲದೆ ಕೊಟ್ಟೂರು–ಹರಿಹರ ಮೊದಲ ರೈಲು ಸಂಚಾರಕ್ಕೆ ಸಾಕ್ಷಿಯಾಗಲು ಬಂದಿದ್ದ ಮಕ್ಕಳು, ಮಹಿಳೆಯರು, ವೃದ್ಧರಾಧಿಯಾಗಿ ಸೇರಿದ್ದ ಸಾವಿರಾರು ಜನರು ರೈಲಿನಲ್ಲಿ ಪ್ರಯಾಣಿಕರಿಗೆ ಶುಭ ಕೋರಿದರು.



ಈ ಮೂಲಕ ಸಚಿವ ಖರ್ಗೆ ಅವರು ಸಹ ಈ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಸಮರ್ಪಣಾ ಭಾವಕ್ಕೆ ಒಳಗಾದರು.



ಕೊಟ್ಟೂರು–ಹರಿಹರ ರೈಲು ಆರಂಭಕ್ಕಾಗಿ ಸತ್ಯಾಗ್ರಹ, ಉಪವಾಸ, ಹೋರಾಟ, ಪತ್ರ ಸಮರ ಮತ್ತಿತರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಕೊಟ್ಟೂರು ಭಾಗದ ರೈಲ್ವೆ ಹೋರಾಟಗಾರರು ಇದು ತಮ್ಮ ಹೋರಾಟಕ್ಕೆ ಸಿಕ್ಕ ಜಯವೆಂದು ಭಾವಿಸಿ ವಿಜಯೋತ್ಸವ ಆಚರಿಸಿದರು.



ಇದೇ ಸಂದರ್ಭದಲ್ಲಿ ಈ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸಂಚಾರದ ವೇಳಾಪಟ್ಟಿ­ಯಲ್ಲಿ ಬದಲಾವಣೆ ಮಾಡಬೇಕು ಎಂಬ ನಾಯ­ಕರ ಒಕ್ಕೊರಲಿನ ಒತ್ತಾಯಕ್ಕೆ ಸಚಿವ ಖರ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ‘ಜನರ ಅನುಕೂ­ಲಕ್ಕಾಗಿ ಆರಂಭವಾಗಿರುವ ಈ ನೂತನ ರೈಲು ಸಂಚಾರ, ಜನರಿಗೆ ಅನುಕೂಲವಾಗುವ ಸಮಯ­ದಲ್ಲಿ ಸಂಚರಿಸಲಿದೆ’ ಎಂದು ಸಚಿವರು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.