ಭಾನುವಾರ, ಜನವರಿ 19, 2020
27 °C

ನೆಮ್ಮದಿ ನೀಡದ ಸಂಪತ್ತು ವ್ಯರ್ಥ: ಶಾಸಕ ಅಪ್ಪಚ್ಚು ರಂಜನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ‘ಮಾನವನ ಬಳಿ ಕೋಟಿ ಸಂಪತ್ತು ಇದ್ದರೂ ನೆಮ್ಮದಿ ಇಲ್ಲದಿದ್ದರೆ ಅಂತಹ ಸಂಪತ್ತು ವ್ಯರ್ಥ’ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.ಎಸ್‌ಎಲ್‌ಎನ್ ಸಂಸ್ಥೆ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ₨ 5 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡಿರುವ ಪಟ್ಟಣದ ರಾಧಾಕೃಷ್ಣ ಬಡಾವಣೆಯ ಶಾಂತಿ ಉದ್ಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾನವ ಎಷ್ಟೇ ಸಂಪತ್ತನ್ನು ಗಳಿಸಿದ್ದರೂ ಅದನ್ನು ಸಮಾಜದ ಒಳಿತಿಗಾಗಿ ಸದ್ವಿನಿಯೋಗಿಸದಿದ್ದರೆ ಅಂತಹ ಸಂಪತ್ತು ವ್ಯರ್ಥವಾಗುತ್ತದೆ ಎಂದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಶಿವಪ್ಪ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಇಂದು ನಗರಗಳು ಕಲುಷಿತಗೊಳ್ಳುತ್ತಿದ್ದು, ಉತ್ತಮ ಗಾಳಿಯೇ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭಗಳಲ್ಲಿ ಉದ್ಯಾನಗಳು ಅತ್ಯಗತ್ಯ ಎಂದರು.ಇದೇ ಸಂದರ್ಭ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೈಸೂರು ಉಪವಲಯ ನಿರ್ದೇಶಕಿ ಲಕ್ಷ್ಮೀಜಿ ಅವರಿಂದ ಶಾಂತಿ– ಸಹಬಾಳ್ವೆ ಕುರಿತು ಪ್ರವಚನ ನಡೆಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್‌.ಎಲ್‌ಎನ್ ಸಂಸ್ಥೆ ಸಹೋದರರಾದ ವಿಶ್ವನಾಥ್ ಮತ್ತು ಸಾಥಪ್ಪನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಶರವಣಕುಮಾರ್, ಕುಶಾಲನಗರ ಈಶ್ವರೀಯ ವಿಶ್ವವಿದ್ಯಾಲಯದ ಧನಲಕ್ಷ್ಮೀ ಇದ್ದರು.

ಪ್ರತಿಕ್ರಿಯಿಸಿ (+)