ಭಾನುವಾರ, ಏಪ್ರಿಲ್ 18, 2021
33 °C

ನೆಮ್ಮದಿ ನೌಕರರ ಸೇವೆ ಮುಂದುವರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ನೆಮ್ಮದಿ ಕೇಂದ್ರಗಳಲ್ಲಿನ 1,600 ಗ್ರಾಮೀಣ ಕಂಪ್ಯೂಟರ್ ಆಪರೇಟರ್‌ಗಳ ಪರವಾಗಿ ಕೆಲಸ ಮಾಡುತ್ತಿರುವ ನೌಕರರನ್ನೇ ನೆಮ್ಮದಿ ಕೇಂದ್ರಗಳಲ್ಲಿ ಡಾಟಾ ಆಪರೇಟರ್‌ಗಳಾಗಿ ಮುಂದುವರಿಸಲು ಅನುವು ಮಾಡಿಕೊಡಬೇಕು ಎಂದು ನೆಮ್ಮದಿ ಕೇಂದ್ರಗಳ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯವು ನೆಮ್ಮದಿ ಕೇಂದ್ರಗಳ ಮೂಲಕ ಸರ್ಕಾರದ ಸೇವೆಯನ್ನು ಗ್ರಾಮೀಣ ಜನತೆಯ ಬಾಗಿಲಿಗೆ ತಲುಪುವಂತೆ ಮಾಡಿದ್ದು, ರಾಷ್ಟ್ರದಲ್ಲೆ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೆಮ್ಮದಿ ಯೋಜನೆಯು ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ನಡೆಸಲಾಗಿದ್ದು, ಈ ಕಾರ್ಯನಿರ್ವಣೆಗಾಗಿ ನೇಮಿಸಿಕೊಳ್ಳಲಾಗಿದ 1,600 ಕಂಪ್ಯೂಟರ್ ಆಪರೇಟರ್‌ಗಳು, ಈ ಸೇವೆಯ ಜನಪ್ರಿಯತೆ ಹಾಗೂ ಯಶಸ್ಸಿಗೆ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.ಆದರೆ ಏಕಾಏಕಿ ಅವರನ್ನು ಸೇವೆಯಿಂದ ತೆಗೆದರೆ ಕುಟುಂಬಗಳು ಬೀದಿ ಪಾಲಾಗಲಿವೆ. ಕೂಡಲೆ ನೆಮ್ಮದಿ ಕೇಂದ್ರಗಳಲ್ಲಿನ ಕಂಪ್ಯೂಟರ್ ಆಪರೇಟರ್‌ಗಳನ್ನು ಡಾಟಾ ಎಂಟ್ರಿ ಆಪರೇಟರ್‌ಗಳೆಂದು ವಿಲೀನಗೊಳಿಸಲು ಕ್ರಮ ಕೈಗೊಳ್ಳುವಂತೆ ಸಾಯಿ ರಡ್ಡಿ, ಗಣೇಶ ಆವಂಟಿ, ಯಲ್ಲಾಲಿಂಗ ಕಂದಕೂರ, ಅಂಜನಾದೇವಿ, ನಿಂಗಮ್ಮ ಮನವಿ ಮಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.