ಮಂಗಳವಾರ, ಜೂನ್ 15, 2021
26 °C

ನೈಂಟಿ ನಂತರ ದೇವ್ರಾಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೈಂಟಿ ನಂತರ ದೇವ್ರಾಣೆ

ಕುಡಿತದ ಕೆಡುಕಿನ ಬಗ್ಗೆ `ನೈಂಟಿ~ ಚಿತ್ರದಲ್ಲಿ ಹೇಳಿದ್ದ ಚಿತ್ರತಂಡ ಇದೀಗ `ದೇವ್ರಾಣೆ~ ಎನ್ನತೊಡಗಿದೆ. ಚಿತ್ರದ ನಿರ್ದೇಶಕ ಶಂಕರ್ ಈ ಚಿತ್ರದ ಮೂಲಕ ಸಹ ನಿರ್ಮಾಪಕರಾಗಿಯೂ ಮುಂದಡಿ ಇಡುತ್ತಿದ್ದಾರೆ. ಜಿ.ವಿ.ಅಯ್ಯರ್ ಅವರ ಬಳಿ ಸಂಕಲನಕಾರರಾಗಿ ಕೆಲಸ ಮಾಡುತ್ತಿದ್ದಾಗ ತಮ್ಮ ಈ ಕತೆಯನ್ನು ಅವರೊಂದಿಗೆ ಚರ್ಚಿಸಿದ್ದಾಗಿ ಹೇಳಿಕೊಂಡ ಶಂಕರ್, ತಮ್ಮ ಚಿತ್ರ ನೂರಕ್ಕೆ ನೂರರಷ್ಟು ಮನರಂಜನಾತ್ಮಕವಾಗಿರಲಿದೆ ಹಾಗೂ ಕೊನೆಯಲ್ಲಿ ಸಣ್ಣದೊಂದು ಸಂದೇಶವನ್ನು ಸಾರಲಿದೆ ಎಂದರು.`ಪದೇಪದೇ ದೇವ್ರಾಣೆ ಎಂದು ಹೇಳಿಕೊಂಡು ಸುಳ್ಳು ಹೇಳುವವರಿಗೆ ತಮ್ಮ ಚಿತ್ರ ಪಾಠ ಹೇಳಲಿದೆ. ಅದೂ ತಮಾಷೆಯಾಗಿ. ಇದರಲ್ಲಿ ರವಿಶಂಕರ್ ಪಾತ್ರದ ಹೆಸರು ಚಿಟ್ಟೆ ಸ್ವಾಮಿ. ಬಣ್ಣಬದಲಿಸುವ ಅವರ ಪಾತ್ರಕ್ಕೆ ಈ ಹೆಸರೇ ಸೂಕ್ತ ಎನಿಸಿತು.ಬುಲೆಟ್ ಪ್ರಕಾಶ್ ಲಾಂಗ್‌ಸ್ವಾಮಿ, ಉಳಿದಂತೆ ಕೆಕೆ ಸ್ವಾಮಿ, ಹೊಗೆಸ್ವಾಮಿಗಳು ಚಿತ್ರದಲ್ಲಿ ಇರಲಿದ್ದಾರೆ. ಅವರನ್ನು ವೈಚಾರಿಕವಾಗಿ ಬೈಯುವ ಪಾತ್ರದಲ್ಲಿ ಸಾಧು ಕೋಕಿಲಾ ನಟಿಸಿದ್ದಾರೆ. ಲಗ್ನದೋಷದಿಂದ ಮದುವೆಯಾಗದೇ ಉಳಿದ ಹುಡುಗಿ ಪಾತ್ರವೂ ಚಿತ್ರದಲ್ಲಿ ಇರಲಿದೆ. ಒಟ್ಟಾರೆ ತಮಾಷೆಯಾಗಿ ಗಂಭೀರ ವಿಚಾರಗಳನ್ನು ಹೃದಯಕ್ಕೆ ತಟ್ಟುವಂತೆ ಹೇಳುವ ಪ್ರಯತ್ನ ಇದು~ ಎಂದು ಅವರು ವಿವರಿಸಿದರು.`ಅಂದಹಾಗೆ ಇದು ಯಾವ ವಿವಾದಿತ ಸ್ವಾಮೀಜಿಯ ಬದುಕನ್ನು ಆಧರಿಸಿಲ್ಲ. ಆದರೆ ವಾಸ್ತವಕ್ಕೆ ಬಹಳ ಹತ್ತಿರವಾದ ವಿಷಯಗಳಿವೆ~ ಎಂದ ಅವರು  ಬಹುತೇಕ ಚಿತ್ರೀಕರಣವನ್ನು ಬೆಂಗಳೂರು ಸಮೀಪದ ರುದ್ರಾಶ್ರಮದಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದ್ದಾರೆ.ನಿರ್ಮಾಪಕ ಶಿವು ಕಬಿನ್ ಅವರು ಸಿನಿಮಾಗಳಲ್ಲಿ ನಟಿಸಬೇಕೆಂಬ ತಮ್ಮ ಚಿಕ್ಕಂದಿನ ಕನಸನ್ನು `ದೇವ್ರಾಣೆ~ ನಿರ್ಮಿಸುವ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರೆ. ಗಾರ್ಮೆಂಟ್ ಕಾರ್ಖಾನೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾದ ಅವರಿಗೆ ಚಿತ್ರತಂಡದ ಮೇಲೆ ತುಂಬು ಭರವಸೆ ಇದೆ.`ನೈಂಟಿ~ ಚಿತ್ರದ ನಂತರ `ದೇವ್ರಾಣೆ~ ಚಿತ್ರಕ್ಕೂ ಮಾತುಗಳನ್ನು ಹೊಸೆದಿರುವ ತಬಲಾ ನಾಣಿ ಚಿತ್ರದಲ್ಲೊಂದು ಪುಟ್ಟ ಪಾತ್ರವನ್ನೂ ನಿಭಾಯಿಸಿರುವುದಾಗಿ ಹೇಳಿದರು. `ಸಮಯೋಚಿತ ಮಾತುಗಳನ್ನು ಬರೆದಿರುವೆ. ಎಷ್ಟು ದಿನ ನಾನು ನಿಯತ್ತಾಗಿ ಇರ‌್ತೀನೋ ಅಲ್ಲೆತನಕ ಈ ತಂಡದಲ್ಲಿ ಕೆಲಸ ಸಿಗುತ್ತದೆ~ ಎಂಬುದು ಅವರ ಮಾರ್ಮಿಕ ನುಡಿ.ಚಿತ್ರದ ಪ್ರಮುಖ ಪಾತ್ರಧಾರಿ ರವಿಶಂಕರ್ ಅವರಿಗೆ ತಮ್ಮ ಪಾತ್ರದ ವಿವರಣೆ ಕೇಳಿ ಭಯವಾಗಿದೆಯಂತೆ. ಗೊಂದಲದಲ್ಲಿಯೇ ಚಿತ್ರದಲ್ಲಿ ನಟಿಸಲು ಮನಸ್ಸು ಮಾಡಿರುವುದಾಗಿ ಹೇಳಿದ ಅವರು ಅದಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ದುಡಿಯುವುದಾಗಿ ನುಡಿದರು.

 

ರಾಜು ತಾಳಿಕೋಟೆ ಅವರಿಗೆ ಚಿತ್ರದಲ್ಲಿ ಸ್ವಾಮೀಜಿಗಳ ಕುರಿತು ಸಂಶೋಧನೆ ಮಾಡುವ ಪಾತ್ರ ಸಿಕ್ಕಿದೆ. ಅದನ್ನು ನಗುನಗುತ್ತಲೇ ಹೇಳಿಕೊಂಡ ಅವರು ತಮ್ಮ ಸಿನಿಮಾದ ಸಂದೇಶ ಜನರನ್ನು ತಲುಪಲಿ ಎಂದುಆಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.